'ಅಮೃತಾ ಫಡ್ನವೀಸ್ ಬಾಬಾ ರಾಮ್ ದೇವ್ ಕಪಾಳಕ್ಕೆ ಹೊಡೆದು ಎದ್ದು ಹೋಗಬೇಕಾಗಿತ್ತು, ಅದು ಬಿಟ್ಟು ನಗುತ್ತಾ ಕೂತಿದ್ದೇಕೆ'!

ಖ್ಯಾತ ಯೋಗ ಗುರು ರಾಮ್‌ದೇವ್ ಅವರು ಮಹಿಳೆಯರ ವೇಷಭೂಷಣದ ಬಗ್ಗೆ ತಮ್ಮ ದೃಷ್ಟಿಕೋನದಿಂದ ಕಟುವಾದ ಅಶ್ಲೀಲ ರೀತಿಯ ಹೇಳಿಕೆ ನೀಡಿದ ನಂತರ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಮಾಜದ ಎಲ್ಲಾ ವಲಯದಳಿಂದ ಕ್ರೂರವಾದ ಟೀಕೆಗಳು ಕೇಳಿಬರುತ್ತಿವೆ. 
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
Updated on

ಮುಂಬೈ: ಖ್ಯಾತ ಯೋಗ ಗುರು ರಾಮ್‌ದೇವ್ ಅವರು ಮಹಿಳೆಯರ ವೇಷಭೂಷಣದ ಬಗ್ಗೆ ತಮ್ಮ ದೃಷ್ಟಿಕೋನದಿಂದ ಕಟುವಾದ ಅಶ್ಲೀಲ ರೀತಿಯ ಹೇಳಿಕೆ ನೀಡಿದ ನಂತರ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಮಾಜದ ಎಲ್ಲಾ ವಲಯದಳಿಂದ ಕ್ರೂರವಾದ ಟೀಕೆಗಳು ಕೇಳಿಬರುತ್ತಿವೆ. ಬಾಬಾ ರಾಮ್ ದೇವ್ ಅವರನ್ನು "ಹೊಡೆಯಿರಿ, ಒದೆಯಿರಿ ಮತ್ತು ಹಿಂಸಿಸಿ" ಎಂಬ ಒತ್ತಾಯಗಳು, ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.

ನಿನ್ನೆ ಥಾಣೆಯಲ್ಲಿ ಮಹಿಳೆಯರಿಗಾಗಿ ಉಚಿತ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್‌ದೇವ್, ಕಣ್ಣು, ರೆಪ್ಪೆ ಮಿಟುಕಿಸದಂತೆ ಮಹಿಳೆಯರ ಬಗ್ಗೆ ಅವರು ಧರಿಸುವ ಉಡುಪಿನ ಬಗ್ಗೆ, ಯೋಗ ಮಾಡುವಾಗ ಮಹಿಳೆಯರು ಧರಿಸುವ ಬಟ್ಟೆ ಬಗ್ಗೆ ಹೇಳಿಕೆ ನೀಡಿದ್ದರು. ಇದು ಸಭೆಯಲ್ಲಿದ್ದ ಮತ್ತು ವೇದಿಕೆಯಲ್ಲಿದ್ದ ಮಹಿಳೆಯರಿಗೆ ಮುಜುಗರವನ್ನುಂಟುಮಾಡಿತ್ತು. “ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಅವರು ಸಲ್ವಾರ್ ಸೂಟ್‌ಗಳಲ್ಲಿ ಉತ್ತಮವಾಗಿ ಕಾಣುತ್ತಾರೆ, ಆದರೆ ನನ್ನ ದೃಷ್ಟಿಯಲ್ಲಿ ಅವರು ಬಟ್ಟೆ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ರಾಮದೇವ್ ಹೇಳಿದ್ದರು.

ಈ ವೇಳೆ ವೇದಿಕೆಯಲ್ಲಿ, ಬಾಳಾಸಾಹೆಬಂಚಿ ಶಿವಸೇನಾ ಥಾಣೆ ಸಂಸದ ಶ್ರೀಕಾಂತ್ ಶಿಂಧೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಮೊದಲಾದವರಿದ್ದರು. 

ರಾಮದೇವ್ ಹೇಳಿಕೆಗೆ ಆಘಾತ ವ್ಯಕ್ತಪಡಿಸಿದ ವಿದರ್ಭದ ರೈತ ನಾಯಕಿ ಅಪರ್ಣಾ ಮಾಲಿಕರ್, ರಾಮ್‌ದೇವ್ ಅವರ ಹೇಳಿಕೆಯು ಅವರ ‘ಕೊಳಕು ಮನಸ್ಥಿತಿಯನ್ನು ಸೂಚಿಸುತ್ತದೆ. ಅವರ ಅಂತರಂಗದಲ್ಲಿರುವುದನ್ನು ಬಹಿರಂಗಪಿಸುತ್ತಾರೆ. ಅವರ ಬಳಿ ಹೋಗುವ ಮಹಿಳೆಯರು ಜಾಗ್ರತರಾಗಿರಬೇಕು ಎನ್ನುತ್ತಾರೆ. 

ಸಂಸದ ಸಂಜಯ್ ರಾವತ್, ಎಂಎಲ್‌ಸಿ ಡಾ. ಮನೀಶಾ ಕಯಾಂಡೆ ಮತ್ತು ರಾಷ್ಟ್ರೀಯ ವಕ್ತಾರ ಕಿಶೋರ್ ತಿವಾರಿ ಅವರಂತಹ ಶಿವಸೇನೆ ಹಿರಿಯ ನಾಯಕರು ಕೂಡ ರಾಮದೇವ್ ಹೇಳಿಕೆಯನ್ನು ಖಂಡಿಸಿದ್ದಾರೆ. 

ಅಮೃತಾ ಫಡ್ನವಿಸ್ ಅವರು ಅಲ್ಲಿಯೇ ಎದ್ದು ಕಪಾಳಮೋಕ್ಷ ಮಾಡಲು ಏಕೆ ಸಾಧ್ಯವಾಗಲಿಲ್ಲ ಇದು ನನ್ನ ಪ್ರಶ್ನೆ" ಎಂದು  ಸಂಜಯ್ ರಾವತ್ ಕೇಳುತ್ತಾರೆ. 

ಅಮೃತಾ ಫಡ್ನವೀಸ್ ಅವರು ರಾಮದೇವರನ್ನು ಅಲ್ಲಿಯೇ ಒದ್ದು ಕಾರ್ಯಕ್ರಮದಿಂದ ಹೊರನಡೆಯಬೇಕಿತ್ತು ಆದರೆ ಹಾಗೆ ಮಾಡುವುದು ಬಿಟ್ಟು ಹೆಣ್ಣಿಗೆ ರಾಮದೇವ್ ಗೌರವ ಕೊಡುತ್ತಿದ್ದಾರೆ, ಮಹಿಳೆಯರನ್ನು ಹೊಗಳುತ್ತಿದ್ದಾರೆಯೇನೋ ಎಂದು ಭಾವಿಸುವಂತೆ ರಾಮ್‌ದೇವ್ ಅವರ ಹೇಳಿಕೆಗಳನ್ನು ಅಮೃತಾ ಆನಂದಿಸುತ್ತಿದ್ದಂತೆ ಕಂಡುಬರುತ್ತಿತ್ತು, ಅವರು ನಗುತ್ತಿದ್ದರು ಎನ್ನುತ್ತಾರೆ.

ರಾಮ್‌ದೇವ್ ಅವರನ್ನು "ಅಸಾರಾಮ್ ಬಾಪು ಮತ್ತು ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಂತಹ ಜೈಲಿನಲ್ಲಿರುವ ವಿಕೃತರ ಶಿಷ್ಯ ಎಂದು ಕರೆದಿರುವ ಶಿವಸೇನೆ ವಕ್ತಾರ ಕಿಶೋರ್ ತಿವಾರಿ, ರಾಮದೇವ್ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ದಿಲ್ಲಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಮದೇವ್ ಸೀರೆ ಉಟ್ಟುಕೊಂಡು ರಾತ್ರಿಯಲ್ಲಿ ಓಡಿಹೋಗಿದ್ದನ್ನು ಇಡೀ ದೇಶವೇ ವರ್ಷಗಳ ಹಿಂದೆಯೇ ನೋಡಿತ್ತು. ಕೋಪಗೊಂಡ ಮಹಿಳೆಯರಿಂದ ಅವರು ಈಗ ಹೇಗೆ ಓಡುತ್ತಾರೆ ಅವರ ಸಂಬಂಧಿ ಮತ್ತು ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ ಕಾಳಜಿ ವಹಿಸುತ್ತಾರೆಯ ರಾಮದೇವ್ ಅವರ ಅಸಹ್ಯಕರ ವರ್ತನೆಗೆ ಪ್ರತಿಕ್ರಿಯಿಸಲು ಎಂದು ಕಯಾಂಡೆ ಕಟುವಾಗಿ ಟೀಕಿಸಿದ್ದಾರೆ. 

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ಮಹೇಶ್ ತಾಪಸೆ ಅವರು ರಾಮದೇವ್ ಅವರ ಹೇಳಿಕೆಗಳು ಸ್ಪಷ್ಟವಾಗಿ 'ಅಶ್ಲೀಲ ಮತ್ತು ಮಹಿಳಾ ವಿರೋಧಿ' ಎಂದು ಕರೆದಿದ್ದಾರೆ. ರಾಜ್ಯ ಸರ್ಕಾರವು ಮಹಿಳೆಯರನ್ನು ಕೆರಳಿಸಿರುವ ಈ ವಿಷಯದ ಬಗ್ಗೆ ಕಾರ್ಯನಿರ್ವಹಿಸುವ ಬದಲು ಕಿವುಡ ಮೌನವನ್ನು ಏಕೆ ವಹಿಸುತ್ತಿದೆ ಎಂದು ಕೇಳಿದ್ದಾರೆ. 

ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರು ರಾಮ್‌ದೇವ್ ಅವರ ಸಾರ್ವಜನಿಕ ಹೇಳಿಕೆಯಿಂದ ನಾನು ಮತ್ತು ಮಹಿಳೆಯರು "ಆಘಾತಗೊಂಡಿದ್ದೇವೆ. ಇದು ಮಹಿಳೆಯರ ಬಗ್ಗೆ ಅವರ ಮನಸ್ಸಿನ ವಿಕೃತಿಯನ್ನು ಸೂಚಿಸುತ್ತದೆ. ಇದನ್ನು ನಾವು ಅವರನ್ನು ಬಲವಾಗಿ ಖಂಡಿಸುತ್ತೇವೆ. ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಗಳು ಸ್ವಯಂಪ್ರೇರಿತ ದೂರು ದಾಖಲಿಸಬೇಕು, ಇಲ್ಲದಿದ್ದರೆ ನಾವು ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ ಎಂದಿದ್ದಾರೆ. 

56 ವರ್ಷದ ರಾಮದೇವ್ ಅವರು ತಮ್ಮ ಪತಂಜಲಿ ಯೋಗ ಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿಯ ಮೂಲಕ ಥಾಣೆಯಲ್ಲಿ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯನ್ನು ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com