ಗುಜರಾತ್ ನಲ್ಲಿ ಆಪ್ ಖಾತೆ ತೆರೆಯಲ್ಲ; ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ: ಅಮಿತ್ ಶಾ

ಗುಜರಾತ್ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಖಾತೆ ತೆರೆಯದಿರಬಹುದು ಆದರೆ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ
Updated on

ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಖಾತೆ ತೆರೆಯದಿರಬಹುದು ಆದರೆ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನ ಸರ್ವತೋಮುಖ ಅಭಿವೃದ್ಧಿ  ಹಾಗೂ  ಶೂನ್ಯ ತುಷ್ಟೀಕರಣ ನೀತಿಯ ಅನುಷ್ಠಾನವು ಕಳೆದ 27 ವರ್ಷಗಳಲ್ಲಿ ಜನರು ಬಿಜೆಪಿಯಲ್ಲಿ ಪದೇ ಪದೇ ನಂಬಿಕೆ ಇಡಲು ಮುಖ್ಯ ಕಾರಣ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

"ಗುಜರಾತ್‌ನಲ್ಲಿ ಬಿಜೆಪಿ ಅಭೂತಪೂರ್ವ ವಿಜಯವನ್ನು ದಾಖಲಿಸಲಿದೆ. ಜನರು ನಮ್ಮ ಪಕ್ಷ ಮತ್ತು ನಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ" ಎಂದು ಷಾ ಹೇಳಿದರು.

ಪ್ರತಿಯೊಂದು ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ, ಆದರೆ ಅವರು ಪಕ್ಷವನ್ನು ಸ್ವೀಕರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಜನರಿಗೆ ಬಿಟ್ಟದ್ದು" ಎಂದು  ತಿಳಿಸಿದ್ದಾರೆ. ಎಎಪಿಯು ಗುಜರಾತ್‌ನ ಜನರ ಮನಸ್ಸಿನಲ್ಲಿ ಎಲ್ಲಿಯೂ ಇಲ್ಲ. ಚುನಾವಣೆ ಫಲಿತಾಂಶಗಳಿಗಾಗಿ ನಿರೀಕ್ಷಿಸಿ, ಬಹುಶಃ ಯಶಸ್ವಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಎಪಿಯ ಹೆಸರು ಕಂಡುಬರುವುದಿಲ್ಲ"  ಅಮಿತ್ ಶಾ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಆಗಿದೆ, ಆದರೆ ಆಮ್ ಆದ್ಮಿ ಪಕ್ಷ (ಎಪಿಪಿ) ಮೋದಿಯವರ ತವರು ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರ ಕೈಗೊಂಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕುರಿತು ಕೇಳಿದ ಪ್ರಶ್ನೆಗೆ, ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಅತ್ಯಗತ್ಯ ಎಂದು ಶಾ ಹೇಳಿದರು.

"ರಾಜಕಾರಣಿಗಳು ಕಷ್ಟಪಟ್ಟು ದುಡಿಯಬೇಕು ಮತ್ತು ಯಾರಾದರೂ ಕಷ್ಟಪಟ್ಟು ಕೆಲಸ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ನಾನು ಯಾವಾಗಲೂ ಹೊಂದಿದ್ದೇನೆ. ಆದರೆ ರಾಜಕೀಯದಲ್ಲಿ ನಿರಂತರ ಪ್ರಯತ್ನಗಳು ಮಾತ್ರ ಫಲಿತಾಂಶವನ್ನು ತೋರಿಸುತ್ತವೆ. ಆದ್ದರಿಂದ ನಾವು ಕಾದು ನೋಡೋಣ," ಅವರು ಹೇಳಿದರು.

ಗುಜರಾತ್‌ನ ಭದ್ರತೆಯು ರಾಷ್ಟ್ರೀಯ ಭದ್ರತೆಯೊಂದಿಗೆ ಸಂಬಂಧ ಹೊಂದಿದೆಯೇ ಅಥವಾ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ  ಶಾ ಗುಜರಾತ್‌ನ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆ ಬೇರೆ ಬೇರೆ ವಿಷಯಗಳಲ್ಲ. ಮತ್ತು ದೇಶವು ಸುರಕ್ಷಿತವಾಗಿಲ್ಲದಿದ್ದರೆ, ಗುಜರಾತ್ ಹೇಗೆ ಸುರಕ್ಷಿತವಾಗಿರುತ್ತದೆ? ಆದ್ದರಿಂದ, ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ಭದ್ರತೆಯು ಪ್ರಮುಖ ವಿಷಯವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com