ತಪ್ಪೇ ಮಾಡದೆ ಶಾರ್ಜಾ ಜೈಲು ಸೇರಿದ್ದ ಕೇರಳದ ಯುವಕ 43 ದಿನಗಳ ನಂತರ ಬಿಡುಗಡೆ

ಅದೃಷ್ಟದ ದಿನಗಳಲ್ಲಿ ಯಾಕೂಬ್‌ನ ಜೀವನ ತಲೆಕೆಳಗಾಯಿತು. ಆತ ಕೆಲಸ ಮಾಡುತ್ತಿದ್ದ ಕಂಪನಿಯು ಕಾರ್ಯನಿರ್ವಹಿಸಲು ಅಧಿಕಾರವಿಲ್ಲದ ಪ್ರದೇಶದಲ್ಲಿ ಆಹಾರವನ್ನು ವಿತರಿಸಿದ್ದಕ್ಕಾಗಿ ಶಾರ್ಜಾ ಮುನಿಸಿಪಾಲಿಟಿ ಅಧಿಕಾರಿಗಳು ಯಾಕೂಬ್‌ನನ್ನು ಬಂಧಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಲಪ್ಪುರಂ: 2019 ರಲ್ಲಿ ಶಾರ್ಜಾಕ್ಕೆ ಬಂದಿಳಿದ 22 ವರ್ಷದ ಯಾಕೂಬ್ ಅಕ್ತರ್, ತಮ್ಮ ಕುಟುಂಬದ ಆರ್ಥಿಕ ಸಂಕಷ್ಟವನ್ನು ಕೊನೆಗೊಳಿಸುವ ಒಂದೇ ಒಂದು ಕನಸು ಕಂಡಿದ್ದರು. ಪೊನ್ನಾನಿ ಮೂಲದ ಆಹಾರ ಕೇಂದ್ರದಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಆತನ ಆನ್‌ಲೈನ್ ಮೂಲಕ ಆಹಾರವನ್ನು ತಲುಪಿಸುವ ಪಾಕಿಸ್ತಾನ ಮಾಲೀಕತ್ವದ ಕಂಪನಿಗೆ ಸೇರಿದರು.

ಆದರೆ, ಅದೃಷ್ಟದ ದಿನಗಳಲ್ಲಿ ಯಾಕೂಬ್‌ನ ಜೀವನ ತಲೆಕೆಳಗಾಯಿತು. ಆತ ಕೆಲಸ ಮಾಡುತ್ತಿದ್ದ ಕಂಪನಿಯು ಕಾರ್ಯನಿರ್ವಹಿಸಲು ಅಧಿಕಾರವಿಲ್ಲದ ಪ್ರದೇಶದಲ್ಲಿ ಆಹಾರವನ್ನು ವಿತರಿಸಿದ್ದಕ್ಕಾಗಿ ಶಾರ್ಜಾ ಮುನಿಸಿಪಾಲಿಟಿ ಅಧಿಕಾರಿಗಳು ಯಾಕೂಬ್‌ನನ್ನು ಬಂಧಿಸಿದರು. ಪುರಸಭೆಯು ಆತನಿಗೆ ಎಇಡಿ (United Arab Emirates Dirham) 1,000 ದಂಡ ವಿಧಿಸಿತು.

ಅಗತ್ಯವಿರುವ ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆದುಕೊಳ್ಳುವುದು ಕಂಪನಿಯ ಜವಾಬ್ದಾರಿಯಾಗಿರುವುದರಿಂದ, ಆತ ತನ್ನ ಕಂಪನಿಯನ್ನು ಸಂಪರ್ಕಿಸಿ ಘಟನೆ ಬಗ್ಗೆ ತಿಳಿಸಿದರು. ಈ ವೇಳೆ ಆ ಪ್ರದೇಶದಲ್ಲಿ ಆಹಾರ ವಿತರಿಸಲು ಅಧಿಕಾರ ನೀಡಿರುವ ದಾಖಲೆಯನ್ನು ಕಂಪನಿ ಯಾಕೂಬ್‌ಗೆ ನೀಡಿದೆ ಮತ್ತು ಆತ ಅದನ್ನು ಪುರಸಭೆಯ ಅಧಿಕಾರಿಗಳ ಮುಂದೆ ಸಲ್ಲಿಸಿದ್ದಾರೆ. ಆದರೆ, ಆ ದಾಖಲೆ ನಕಲಿ ಎಂದು ತಿಳಿದುಬಂದಿದೆ.

'ನನ್ನ ಮಗನನ್ನು 43 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು. ಆತನನ್ನು ಜುಲೈ 19 ರಂದು ಜೈಲಿಗೆ ಹಾಕಲಾಯಿತು, ಅದಾದ ಒಂದು ವಾರದ ನಂತರ ನಮಗೆ ವಿಷಯ ತಿಳಿಯಿತು' ಎಂದು ಯಾಕೂಬ್ ತಂದೆ ಯೂಸಫ್ ವಲಿಯಪೀಡಿಯಕ್ಕಲ್ ಟಿಎನ್ಐಇಗೆ ತಿಳಿಸಿದ್ದಾರೆ.

ಯೂಸಫ್ ಅವರು ಸಹಾಯ ಕೋರಿ ನಾರ್ಕಾ ರೂಟ್ಸ್ ಉಪಾಧ್ಯಕ್ಷ ಪಿ ಶ್ರೀರಾಮಕೃಷ್ಣನ್ ಅವರನ್ನು ಸಂಪರ್ಕಿಸಿದ್ದಾರೆ. ಅವರ ಸೂಚನೆ ಮೇರೆಗೆ, ನಾರ್ಕಾ ಅಧಿಕಾರಿಗಳು ಮತ್ತು ಯುಎಇಯಲ್ಲಿರುವ ಮಲಯಾಳಿ ಸಂಘಟನೆಗಳು ಕಾರ್ಯಾಚರಣೆ ನಡೆಸಿ ಯಾಕೂಬ್‌ನನ್ನು ಬಿಡುಗಡೆ ಮಾಡಿಸಿದ್ದಾರೆ.

ದುಬೈ ಮೂಲದ ಕಾರ್ಯಕರ್ತ ಜಾಫರ್ ಕೇರಳ ಮಾತನಾಡಿ, 'ಕೊಲ್ಲಿ ರಾಷ್ಟ್ರಗಳಲ್ಲಿ ಫೋರ್ಜರಿ ಪ್ರಕರಣಗಳಲ್ಲಿ ಜಾಮೀನು ಪಡೆಯುವುದು ತುಂಬಾ ಕಷ್ಟ. ಜೈಲು ಮತ್ತು ಪುರಸಭೆಯ ಅಧಿಕಾರಿಗಳೊಂದಿಗೆ ಮಾತನಾಡಲು ನಾವು ನಮ್ಮ ವಲಯದಲ್ಲಿರುವ ಅರಬ್ಬರ ಸಹಾಯವನ್ನು ಕೋರಿದೆವು. ಈ ರೀತಿಯ ಪ್ರಕರಣಕ್ಕೆ ಹಾಜರಾಗಲು ವಕೀಲರು ಭಾರಿ ಶುಲ್ಕವನ್ನು ಕೇಳುತ್ತಾರೆ. ಆದಾಗ್ಯೂ, ಜಾಮೀನು ಅರ್ಜಿಯನ್ನು ಸಲ್ಲಿಸಲು ಮಲಯಾಳಿ ವಕೀಲರು ಸಹಾಯ ಮಾಡಿದರು' ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com