ದೆಹಲಿಯಲ್ಲಿ ಭಾರೀ ಮಳೆ, ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್

ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಪ್ರಯಾಣಿಕರು ಬದಲಿ ಮಾರ್ಗಗಳಲ್ಲಿ ಪ್ರಯಾಣ ಮಾಡುವಂತೆ ದೆಹಲಿ ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಭಾರೀ ಮಳೆ
ದೆಹಲಿಯಲ್ಲಿ ಭಾರೀ ಮಳೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಪ್ರಯಾಣಿಕರು ಬದಲಿ ಮಾರ್ಗಗಳಲ್ಲಿ ಪ್ರಯಾಣ ಮಾಡುವಂತೆ ದೆಹಲಿ ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.

ದೆಹಲಿಯ ಹಲವು ಪ್ರದೇಳಗಳು ಮಳೆನೀರಿನಿಂದ ಜಲಾವೃತವಾಗಿರುವ ಬಗ್ಗೆಯೂ ವರದಿಯಾಗಿದೆ.

“ಆನಂದ್ ಪರ್ಬತ್ ರೆಡ್ ಲೈಟ್ ಬಳಿ ನೀರು ನಿಂತಿರುವುದರಿಂದ ಜಖೀರಾದಿಂದ ಆನಂದ್ ಪರ್ಬತ್ ಕಡೆಗೆ ಸಾಗುವ ಮಾರ್ಗದಲ್ಲಿ ನ್ಯೂ ರೋಹ್ಟಕ್ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಪ್ರಯಾಣಿಕರು ಈ ರಸ್ತೆ ಮಾರ್ಗ ಬಳಸದಂತೆ ಸೂಚಿಸಲಾಗಿದೆ” ಎಂದು ದೆಹಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಜಖೀರಾ ಮೇಲ್ಸೇತುವೆಯಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇದೇ ರೀತಿಯ ದೃಶ್ಯಗಳು ನಜಾಫ್‌ಗಢ್ ರಸ್ತೆಯಲ್ಲಿ ಬಹದ್ದೂರ್‌ಗಡ್ ಕಡೆಗೆ ಮತ್ತು ರಿಂಗ್ ರಸ್ತೆಯಲ್ಲಿ ರಾಜಾ ಗಾರ್ಡನ್ ಚೌಕ್‌ನಿಂದ ಧೌಲಾ ಕುವಾನ್ ಲೂಪ್ ವರೆಗೆ ಕಂಡುಬಂದವು. ಧೌಲಾ ಕುವಾನ್ ಮಾರ್ಗದಲ್ಲಿ ನರೈನಾದಿಂದ ಮೋತಿ ಬಾಗ್ ಕಡೆಗೆ ಸಂಚಾರ ದಟ್ಟಣೆ ಹೆಚ್ಚಿದೆ ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಪ್ರಯಾಣಿಕರು ಪಂಜಾಬಿ ಬಾಗ್ ಚೌಕ್‌ನಲ್ಲಿ ಕೆಂಪು ದೀಪ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಮಳೆ ಹಾಗೂ ಜಲಾವೃತದಿಂದಾಗಿ ಭಾರೀ ಟ್ರಾಫಿಕ್ ಜಾಮ್ ಇದೆ ಎಂದು ಹೇಳಿದ್ದಾರೆ. ಅವರಲ್ಲಿ ಕೆಲವರು ಆನಂದ ವಿಹಾರ್, ಕೆಂಪು ಕೋಟೆ, ಮಾಥುರ್ ರಸ್ತೆ ಮತ್ತು ಚಾವ್ಲಾ ಪ್ರದೇಶಗಳ ಬಳಿ ದಟ್ಟಣೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com