ಸಾಂದರ್ಭಿಕ ಚಿತ್ರ
ದೇಶ
ಬಿಹಾರದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ
ಬಿಹಾರದ ಆಡಳಿತಾರೂಢ ಏಳು ಪಕ್ಷಗಳ 'ಮಹಾಘಟಬಂಧನ್' ವಿರುದ್ಧ ಕೇಸರಿ ಪಕ್ಷಕ್ಕೆ ಮೊದಲ ಅಗ್ನಿ ಪರೀಕ್ಷೆಯಾಗಿರುವ ಮೊಕಾಮಾ ಮತ್ತು ಗೋಪಾಲ್‌ಗಂಜ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಭಾನುವಾರ ತನ್ನ ಅಭ್ಯರ್ಥಿಗಳನ್ನು...
ಪಾಟ್ನಾ: ಬಿಹಾರದ ಆಡಳಿತಾರೂಢ ಏಳು ಪಕ್ಷಗಳ 'ಮಹಾಘಟಬಂಧನ್' ವಿರುದ್ಧ ಕೇಸರಿ ಪಕ್ಷಕ್ಕೆ ಮೊದಲ ಅಗ್ನಿ ಪರೀಕ್ಷೆಯಾಗಿರುವ ಮೊಕಾಮಾ ಮತ್ತು ಗೋಪಾಲ್‌ಗಂಜ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಭಾನುವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೊರಡಿಸಿದ ಸಂವಹನದ ಪ್ರಕಾರ, ಇತ್ತೀಚೆಗೆ ನಿಧನರಾದ ಪಕ್ಷದ ಶಾಸಕ ಸುಭಾಷ್ ಸಿಂಗ್ ಅವರ ಪತ್ನಿ ಕುಸುಮ್ ದೇವಿ ಅವರು ಗೋಪಾಲ್ ಗಂಜ್ ಅಭ್ಯರ್ಥಿಯಾಗಲಿದ್ದಾರೆ.
ಗೋಪಾಲ್ ಗಂಜ್ ನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿಂಗ್ ಅವರು ಆಗಸ್ಟ್ 16 ರಂದು ನಿಧನರಾದರು.
ಇನ್ನು ನಾಲ್ಕು ಬಾರಿ ಶಾಸಕರಾಗಿರುವ ಅನಂತ್ ಕುಮಾರ್ ಸಿಂಗ್ ಅವರ ಅನರ್ಹತೆಯಿಂದ ತೆರವಾಗಿರುವ ಮೊಕಾಮಾದಲ್ಲಿ ಸೋನಮ್ ದೇವಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ