ಮೇಕೆಗಳು ಕಾಣೆಯಾದ ವಿಚಾರ: ತಮಿಳುನಾಡಿನಲ್ಲಿ ರೈತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೇಟ್ಟುಪಾಳ್ಯಂ ಬಳಿ ಭಾನುವಾರ ಮೇಕೆಗಳು ಕಾಣೆಯಾದ ವಿಚಾರದ ಬಗ್ಗೆ ನಡೆದ ಜಗಳದ ನಂತರ ಮುಂಜಾನೆ 58 ವರ್ಷದ ರೈತ ಚಿನ್ನಸಾಮಿ ಎಂಬುವವರಿಗೆ ಗುಂಡು ಹಾರಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೇಟ್ಟುಪಾಳ್ಯಂ ಬಳಿ ಭಾನುವಾರ ಮೇಕೆಗಳು ಕಾಣೆಯಾದ ವಿಚಾರದ ಬಗ್ಗೆ ನಡೆದ ಜಗಳದ ನಂತರ ಮುಂಜಾನೆ 58 ವರ್ಷದ ರೈತ ಚಿನ್ನಸಾಮಿ ಎಂಬುವವರಿಗೆ ಗುಂಡು ಹಾರಿಸಲಾಗಿದೆ.

ಪೊಲೀಸರ ಪ್ರಕಾರ, ಚಿನ್ನಸಾಮಿ ಅವರಿಗೆ ಸೇರಿದ ಕೆಲವು ಮೇಕೆಗಳು ಶನಿವಾರ ಸಂಜೆ ಇಲ್ಲಿಗೆ ಸಮೀಪದ ಮಂಧರೈಕ್ಕಾಡು ಪ್ರದೇಶದಲ್ಲಿನ ಅವರ ಜಮೀನಿನಲ್ಲಿ ಕಾಣೆಯಾಗಿವೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂತ್ರಸ್ತನ ಸಂಬಂಧಿಕರೊಬ್ಬರು ರಂಜಿತ್ ಕುಮಾರ್ (28) ಎಂಬಾತನ ಕಡೆಗೆ ಬೆರಳು ತೋರಿಸಿದರು. ಆತ ಗ್ರಾಮದಲ್ಲಿ ಮೇಕೆ ಕಳವು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಂಜಿತ್ ತನ್ನ ಮನೆಯಿಂದ ಹೊರ ಹೋಗುತ್ತಿರುವುದನ್ನು ಗಮನಿಸಿದ ಚಿನ್ನಸಾಮಿ, ತಕ್ಷಣವೇ ಆತನನ್ನು ತಡೆದು ಕೇಳಿದ್ದಾನೆ. ಬಳಿಕ ಜಗಳವಾಡಿದ್ದಾನೆ. ತಾನು ಯಾವುದೇ ಮೇಕೆಗಳನ್ನು ಕದ್ದಿಲ್ಲ ಎಂದು ರಂಜಿತ್ ಹೇಳಿದರೂ, ಚಿನ್ನಸಾಮಿ ಆತನಿಗೆ ಥಳಿಸಿದ್ದಾರೆ.

ಬಳಿಕ ಸ್ಥಳದಿಂದ ಹೊರಟ ರಂಜಿತ್, ಮಧ್ಯರಾತ್ರಿಯ ಸುಮಾರಿಗೆ ದೇಸೀಯ ಸಿಂಗಲ್ ಬ್ಯಾರೆಲ್ ಗನ್‌ನೊಂದಿಗೆ ಹಿಂತಿರುಗಿ ಚಿನ್ನಸಾಮಿಯ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಂಜಿತ್ ಕುಮಾರ್ ಅವರನ್ನು ಬಂಧಿಸಿ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com