ಕೇರಳ: ಬುರ್ಖಾ ಧರಿಸಿ ಓಡಾಡುತ್ತಿದ್ದ ದೇವಾಲಯದ ಆರ್ಚಕ!

ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೇವಾಲಯದ ಆರ್ಚಕನೊಬ್ಬ ಜನರ ಕೈಗೆ ಸಿಕ್ಕಿ ಬಿದ್ದಿದ್ದು, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಕ್ಟೋಬರ್ 7 ರಂದು ಕೊಯಿಲ್ಯಾಂಡಿ ಜಂಕ್ಷನ್ ನಲ್ಲಿ ಬುರ್ಖಾ ಧರಿಸಿ ಓಡಾಡುತ್ತಿದ್ದ ದೇವಾಲಯದ ಆರ್ಚಕ ಜೀಷ್ಣು ನಂಬೊರ್ಥಿಯನ್ನು ಆಟೋ ಚಾಲಕರು ಪತ್ತೆ ಹಚ್ಚಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಝಿಕೋಡ್: ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೇವಾಲಯದ ಆರ್ಚಕನೊಬ್ಬ ಜನರ ಕೈಗೆ ಸಿಕ್ಕಿ ಬಿದ್ದಿದ್ದು, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಕ್ಟೋಬರ್ 7 ರಂದು ಕೊಯಿಲ್ಯಾಂಡಿ ಜಂಕ್ಷನ್ ನಲ್ಲಿ ಬುರ್ಖಾ ಧರಿಸಿ ಓಡಾಡುತ್ತಿದ್ದ ದೇವಾಲಯದ ಆರ್ಚಕ ಜೀಷ್ಣು ನಂಬೊರ್ಥಿಯನ್ನು ಆಟೋ ಚಾಲಕರು ಪತ್ತೆ ಹಚ್ಚಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಆರ್ಚಕ ಬುರ್ಖಾದಲ್ಲಿ ಇದುದ್ದನ್ನು ಕಂಡು ಚಕಿತಗೊಂಡ ಆಟೋ ಚಾಲಕರು, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದಾಗ್ಯೂ, ಯಾವುದೇ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆತನ ಕುಟುಂಬಸ್ಥರು ಠಾಣೆಗೆ ಬಂದ ನಂತರ ಠಾಣೆಯಿಂದ ಬಿಟ್ಟು ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಚಿಕನ್ ಪಾಕ್ಸ್  ನಿಂದ ಬುರ್ಖಾ ಧರಿಸಿ ಓಡಾಡುತ್ತಿದ್ದಾಗಿ ಆರ್ಚಕ ಪೊಲೀಸರಿಗೆ ಹೇಳಿದ್ದಾನೆ. ಪ್ರಾಥಮಿಕ ತನಿಖೆ ವೇಳೆಯಲ್ಲಿ ಚಿಕನ್ ಪಾಕ್ಸ್ ನ ಯಾವುದೇ ಲಕ್ಷಣ ಕಾಣಿಸಲಿಲ್ಲ. ಆತನ ಹೆಸರು, ವಿಳಾಸ ಮತ್ತಿತರ ಮಾಹಿತಿ ಸಂಗ್ರಹಿಸಿದ ನಂತರ ಠಾಣೆಯಿಂದ ಹೊರಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com