ಆರ್ಥಿಕ ಏಳಿಗೆಗಾಗಿ ಇಬ್ಬರು ಮಹಿಳೆ ಬಲಿ: ಮಾಟ ಮಂತ್ರ ಮಾಡಿದ ಮೂವರ ಬಂಧನ; ಬೆಚ್ಚಿ ಬಿದ್ದ ದೇವರನಾಡು ಕೇರಳ!

ದೇವರನಾಡು ಕೇರಳದಲ್ಲಿ ದೇಶವನ್ನೇ ಬೆಚ್ಚಿಬೀಳಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರ್ಥಿಕ ಏಳಿಗೆಗಾಗಿ ಇಬ್ಬರು ಮಳೆಯರನ್ನು ನರಬಲಿ ಕೊಟ್ಟಿರುವ ಅಮಾನವೀಯ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ನಡೆದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಲಿಯಾದ ರೋಸಿಲಿ, ಪದ್ಮಮ್
ಬಲಿಯಾದ ರೋಸಿಲಿ, ಪದ್ಮಮ್

ಕೊಚ್ಚಿ: ದೇವರನಾಡು ಕೇರಳದಲ್ಲಿ ದೇಶವನ್ನೇ ಬೆಚ್ಚಿಬೀಳಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರ್ಥಿಕ ಏಳಿಗೆಗಾಗಿ ಇಬ್ಬರು ಮಳೆಯರನ್ನು ನರಬಲಿ ಕೊಟ್ಟಿರುವ ಅಮಾನವೀಯ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ನಡೆದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ದಂಪತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಕಡವಂತರ ನಿವಾಸಿ ಪದ್ಮಮ್ (52) ಮತ್ತು ಕಾಲಡಿ ನಿವಾಸಿ ರೋಸಿಲಿ (50) ಎಂದು ಗುರುತಿಸಲಾಗಿದೆ. ಎಳಂದೂರು ಗ್ರಾಮದಲ್ಲಿ ಆರ್ಥಿಕ ಸಮೃದ್ಧಿಗಾಗಿ ಮಾಟಮಂತ್ರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಬಲಿ ನೀಡಲಾಗಿದೆ. ಮಾಂತ್ರಿಕ ಮತ್ತು ಆತನ ಪತ್ನಿಯ ಸಹಾಯದಿಂದ ಕೊಚ್ಚಿ ಮೂಲದ ಮಹಿಳೆಯರನ್ನು ಅಪಹರಿಸಿ ನಂತರ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಇದುವರೆಗೆ ದಂಪತಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮುಹಮ್ಮದ್ ಶಫಿ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ನಂತರ ಅಪಹರಿಸಿದ್ದಾರೆ. ಈ ಮಹಿಳೆಯರು ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದರು. ಮೃತ ಆರೋಪಿಗಳು ತಮ್ಮ ಆರ್ಥಿಕ ಏಳಿಗೆಗಾಗಿ ಪೂಜೆ ನಡೆಸಿ ಮಾಟಮಂತ್ರದ ಭಾಗವಾಗಿ ಮಹಿಳೆಯರನ್ನು ಬಲಿಕೊಟ್ಟಿದ್ದಾರೆ. ನಂತರ ಬಲಿಯಾದವರ ಶವಗಳನ್ನು ತುಂಡು-ತುಂಡುಗಳಾಗಿ ಕತ್ತರಿಸಿ ತಿರುವಲ್ಲಾ ಬಳಿ ಹೂತು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರನ್ನು ಅಪಹರಿಸಿದ ತಿರುವಲ್ಲಾ ಮೂಲದ ಸ್ಕಾರ್ಸೆಸರ್ ಬಗವಂತ್ ಸಿಂಗ್, ಅವರ ಪತ್ನಿ ಲೈಲಾ ಮತ್ತು ಏಜೆಂಟ್ ಮುಹಮ್ಮದ್ ಶಫಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನರಬಲಿ ನಡೆಸುವುದರಿಂದ ಕುಟುಂಬಕ್ಕೆ ಸಮೃದ್ಧಿ ಸಿಗುತ್ತದೆ ಎಂದು ಭಗವಂತ್ ಸಿಂಗ್ ಮತ್ತು ಲೈಲಾ ಅವರಿಗೆ ಮೊಹಮ್ಮದ್ ಶಾಫಿ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಫಿ ಕೊಚ್ಚಿಯ ಎಸ್‌ಆರ್‌ಎಂ ರಸ್ತೆ ನಿವಾಸಿ. ಪದ್ಮಮ್ ತಮಿಳುನಾಡು ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಕೊಚ್ಚಿಯಲ್ಲಿ ನೆಲೆಸಿದ್ದಾರೆ.

ಕಡವಂತ್ರದಲ್ಲಿ ಲಾಟರಿ ಏಜೆಂಟ್ ಆಗಿದ್ದ ಪದ್ಮಮ್ಮ ಸೆ.27ರಂದು ನಾಪತ್ತೆಯಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಜೂನ್‌ನಲ್ಲಿ ರೋಸ್ಲಿನ್ ನಾಪತ್ತೆಯಾಗಿದ್ದಳು.

ಭಗವಂತ್ ಸಿಂಗ್ ಅವರನ್ನು ತಲುಪಲು ಸಹಾಯ ಮಾಡಿದ ಪದ್ಮಂ ಅವರ ಮೊಬೈಲ್ ಫೋನ್ ಸಿಗ್ನಲ್‌ಗಳನ್ನು ಪತ್ತನಂತಿಟ್ಟಕ್ಕೆ ಪೊಲೀಸರು ಟ್ರ್ಯಾಕ್ ಮಾಡಿದ್ದರು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಪತ್ತನಂತಿಟ್ಟದ ಎಳಂದೂರಿನಲ್ಲಿ  ಇಬ್ಬರು ಮಹಿಳೆಯರನ್ನು ಬಲಿ ಪಡೆದ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಘಟನೆಯು ಕೇರಳದ ಪ್ರಗತಿಪರ ಮನಸ್ಸನ್ನು ಅಲುಗಾಡಿಸಿದೆ ಎಂದು ಹೇಳಿದ್ದಾರೆ.

ಮಾಟಮಂತ್ರದ ಘಟನೆಗಳು ಪ್ರಗತಿಶೀಲ ಸಮಾಜಕ್ಕೆ ಸವಾಲುಗಳಾಗಿವೆ. ಮೂಢನಂಬಿಕೆ ಆಚರಣೆಯ ಭಾಗವಾಗಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ವ್ಯಕ್ತಿ ನಾಪತ್ತೆ ಪ್ರಕರಣದ ತನಿಖೆಯ ವೇಳೆ ಪೊಲೀಸರ ಜಾಗರೂಕತೆಯೇ ಜೋಡಿ ಕೊಲೆಯನ್ನು ಬಯಲಿಗೆಳೆಯಲು ನೆರವಾಯಿತು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com