ನಾಮಪತ್ರ ಸಲ್ಲಿಸುವ ಬರೀ 18 ಗಂಟೆಗಳ ಮುನ್ನ ಚುನಾವಣೆಗೆ ಸ್ಪರ್ಧಿಸಲು ಸೂಚನೆ ಬಂದಿತ್ತು: ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಉಮೇದುವಾರಿಕೆ ಅಂತಿಮಗೊಂಡ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದು, ನಾಮಪತ್ರ ಸಲ್ಲಿಸುವುದಕ್ಕೂ 24 ಗಂಟೆಗಳ ಮುನ್ನ ತಮಗೆ ಚುನಾವಣೆಗೆ ಸ್ಪರ್ಧಿಸುವುದು ಖಾತ್ರಿಯಾಗಿತ್ತು ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಉಮೇದುವಾರಿಕೆ ಅಂತಿಮಗೊಂಡ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದು, ನಾಮಪತ್ರ ಸಲ್ಲಿಸುವುದಕ್ಕೂ 24 ಗಂಟೆಗಳ ಮುನ್ನ ತಮಗೆ ಚುನಾವಣೆಗೆ ಸ್ಪರ್ಧಿಸುವುದು ಖಾತ್ರಿಯಾಗಿತ್ತು ಎಂದು ಹೇಳಿದ್ದಾರೆ.

ಖರ್ಗೆ ಪಕ್ಷದೊಂದಿಗೆ ದಶಕಗಳಷ್ಟು ಹಳೆಯದಾದ ತಮ್ಮ ಒಡನಾಟದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದು, ರಾಹುಲ್ ಗಾಂಧಿಯೇ ಪಕ್ಷವನ್ನು ಮುನ್ನಡೆಸಬಹುದಾಗಿತ್ತು ಎಂಬ ಅಭಿಪ್ರಾಯದೊಂದಿಗೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ನಾಮಪತ್ರ ಸಲ್ಲಿಸುವುದಕ್ಕೂ ಕೇವಲ 18 ಗಂಟೆಗಳ ಮುನ್ನ ಅಷ್ಟೇ ನನಗೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚನೆ ಬಂದಿತ್ತು.  ಅಧ್ಯಕ್ಷ ಹುದ್ದೆಗೆ ನಾನೇ ಏಕೆ ಸ್ಪರ್ಧಿಸಬೇಕು ಎಂಬ ಪ್ರಶ್ನೆಗೆ "ಗಾಂಧಿ ಕುಟುಂಬದ ಯಾರೂ ಅಧ್ಯಕ್ಷರಾಗುವುದಕ್ಕೆ ರಾಹುಲ್ ಗಾಂಧಿ ಒಪ್ಪುತ್ತಿಲ್ಲ" ಎಂಬ ಉತ್ತರ ಬಂದಿತ್ತು ಎಂದು ಹೇಳಿದ್ದಾರೆ.

ಖರ್ಗೆ ಚುನಾವಣೆ ಗೆಲ್ಲುವುದು ಸ್ಪಷ್ಟವಾಗಿದ್ದು,  ಪಕ್ಷಕ್ಕೆ ರಾಹುಲ್ ಹಾಗೂ ಅವರ ನಾಯಕತ್ವದ ಅಗತ್ಯ ಇದೆ ಎಂದು ನಂಬಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ಅವರು ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಬೇಕಿತ್ತು, ಆದರೆ ನಾನು ಅವರ ಭಾವನೆಗಳ ಉದಾತ್ತತೆಯನ್ನು ಗೌರವಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com