ಗೋವಾ: MiG 29K ಯುದ್ಧ ವಿಮಾನವು ಗೋವಾ ಕರಾವಳಿಯ ಪಣಜಿ ಸಮುದ್ರದ ಮೇಲೆ ಕೆಲ ಹೊತ್ತಿನ ಮೊದಲು ಪತನಗೊಂಡಿದೆ.
ಇಂದು ಬೆಳಗ್ಗೆ ವಾಡಿಕೆ ವಿಹಾರ ನಡೆಸುತ್ತಿದ್ದಾಗ ಯುದ್ಧ ವಿಮಾನ ಬೇಸ್‌ಗೆ ಹಿಂತಿರುಗುವಾಗ ತಾಂತ್ರಿಕ ದೋಷ ಕಂಡುಬಂದು ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.
ಪೈಲಟ್ ಅವರನ್ನು ತ್ವರಿತವಾಗಿ ವಿಮಾನದಿಂದ ಹೊರತೆಗೆಯಲಾಗಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.ಪತನಕ್ಕೆ ಕಾರಣವನ್ನು ತಿಳಿಯಲು ತನಿಖಾ ಮಂಡಳಿಗೆ (BoI) ತನಿಖೆಗೆ ಆದೇಶಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Advertisement