ಮಹಾರಾಷ್ಟ್ರ: 13 ಜನರನ್ನು ಕೊಂದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆ

ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ
ಹುಲಿಯನ್ನು ಸೆರೆ ಹಿಡಿದಿರುವ ದೃಶ್ಯ.
ಹುಲಿಯನ್ನು ಸೆರೆ ಹಿಡಿದಿರುವ ದೃಶ್ಯ.

ಗಡ್ ಚಿರೋಲಿ: ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಗಡ್ ಚಿರೋಲಿಯ ವಾಡ್ಸಾ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಹುಲಿ, ಮಾನವ ಜೀವಕ್ಕೆ ಅಪಾಯ ತಂದೊಡಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಹುಲಿಯು ಚಂದ್ರಾಪುರ ಜಿಲ್ಲೆಯ ವಾಡ್ಸಾದಲ್ಲಿ ಆರು ಜನರನ್ನು, ಭಂಡಾರಾದಲ್ಲಿ ನಾಲ್ವರನ್ನು ಮತ್ತು ಬ್ರಹ್ಮಪುರಿ ಅರಣ್ಯ ವ್ಯಾಪ್ತಿಯಲ್ಲಿ ಮೂವರನ್ನು ಕೊಂದಿತ್ತು. ಈ ಹುಲಿಯನ್ನು ಸೆರೆ ಹಿಡಿಯುವಂತೆ ಅಕ್ಟೋಬರ್ 4 ರಂದು ನಡೆದ ಸಭೆಯಲ್ಲಿ ನಾಗ್ಪುರ ವನ್ಯಜೀವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶಿಸಿದ್ದಾಗಿ ಅಧಿಕಾರಿ ತಿಳಿಸಿದರು.

ತಡೋಬಾ ಹುಲಿ ರಕ್ಷಣಾ ತಂಡ, ಚಂದ್ರಾಪುರ, ನವೆಗಾಂವ್-ನಾಗ್ಜೀರಾ ಮತ್ತು ಇತರ ಘಟಕಗಳ ಕ್ಷಿಪ್ರ ಕಾರ್ಯಾಚರಣೆ ತಂಡಗಳು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದು, ಗುರುವಾರ ಬೆಳಿಗ್ಗೆ  ವಡ್ಸಾ ಅರಣ್ಯ ವ್ಯಾಪ್ತಿಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಯಿತು. ಇದನ್ನು ಸುಮಾರು 183 ಕಿಲೋಮೀಟರ್ ದೂರದಲ್ಲಿರುವ ನಾಗ್ಪುರದ ಗೊರೆವಾಡ ರಕ್ಷಣಾ ಕೇಂದ್ರಕ್ಕೆ ಪುನರ್ ವಸತಿಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com