ಪಂಜಾಬ್ ನ ಗುರುದಾಸ್ಪುರ್ ವಲಯದಲ್ಲಿ ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿರುವ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ (BSF) ಡ್ರೋನ್ ನ್ನು ಹೊಡೆದುರುಳಿಸಿದೆ. ಈ ವರ್ಷವೊಂದರಲ್ಲೇ ಕನಿಷ್ಠ 170 ಡ್ರೋನ್‌ಗಳು ಪಾಕಿಸ್ತಾನದಿಂದ ಭಾರತ ಗಡಿಯನ್ನು ಪ್ರವೇಶಿಸುವುದನ್ನು ಬಿಎಸ್ ಎಫ್ ಗುರುತಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿರುವ ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ (BSF) ಡ್ರೋನ್ ನ್ನು ಹೊಡೆದುರುಳಿಸಿದೆ. ಈ ವರ್ಷವೊಂದರಲ್ಲೇ ಕನಿಷ್ಠ 170 ಡ್ರೋನ್‌ಗಳು ಪಾಕಿಸ್ತಾನದಿಂದ ಭಾರತ ಗಡಿಯನ್ನು ಪ್ರವೇಶಿಸುವುದನ್ನು ಬಿಎಸ್ ಎಫ್ ಗುರುತಿಸಿದೆ.

ಗುರುದಾಸ್‌ಪುರ ಸೆಕ್ಟರ್‌ನಲ್ಲಿರುವ ಬಿಎಸ್‌ಎಫ್‌ನ 89 ಬೆಟಾಲಿಯನ್ ಸೈನಿಕರು ರೋಸಾ ಪೋಸ್ಟ್ ಬಿಒಪಿಯಲ್ಲಿ ಇಂದು ನಸುಕಿನ ಜಾವ 4.35 ಗಂಟೆಗೆ ಡ್ರೋನ್ ನ್ನು ಗುರುತಿಸಿದ್ದಾರೆ. ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪಡೆ ತಕ್ಷಣವೇ ಗುಂಡು ಹಾರಿಸಿ ಡ್ರೋನ್ ನ್ನು ಹೊಡೆದುರುಳಿಸಿತು.

ಡ್ರೋನ್ ನಲ್ಲಿ ಯಾವುದಾದರೂ ಸರಕು ಸಾಮಾನುಗಳಿವೆಯೇ ಎಂದು ಪರಿಶೀಲಿಸಲು ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದರು. ಡ್ರೋನ್‌ನಲ್ಲಿ ಪಾಕಿಸ್ತಾನದಿಂದ ಸರಕು ಸಾಗಣೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಡ್ರೋನ್ ನಲ್ಲಿ ಸರಕು ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಗಸ್ತು ತಿರುಗುತ್ತಿದ್ದ ನಮ್ಮ ಪಡೆ ಭಾರತದ ಗಡಿಯೊಳಗೆ ಪ್ರವೇಶಿಸಿದ ಯುಎವಿ ಮೇಲೆ ಗುಂಡು ಹಾರಿಸಿದ್ದು, ಡ್ರೋನ್ ನ ಬ್ಲೇಡ್ ಹಾನಿಯಾಗಿದೆ. ಡ್ರೋನ್ ಪಾಕಿಸ್ತಾನದಿಂದ ಬಂದಿರುವುದು ಪತ್ತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷ ಇದುವರೆಗೆ ಸುಮಾರು 170 ಡ್ರೋನ್‌ಗಳು ಪಂಜಾಬ್ ಸೆಕ್ಟರ್‌ನಲ್ಲಿ ನೆರೆಯ ದೇಶದಿಂದ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದನ್ನು ಬಿಎಸ್ ಎಫ್ ಗುರುತಿಸಿತ್ತು. ಹತ್ತಕ್ಕೂ ಹೆಚ್ಚು ಡ್ರೋನ್‌ಗಳನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸೈನಿಕರು ಹೊಡೆದುರುಳಿಸಿದ್ದಾರೆ. 

ಪಂಜಾಬ್ ಗಡಿಯಲ್ಲಿ ಡ್ರೋನ್ ಅಕ್ರಮವಾಗಿ ಪ್ರವೇಶಿಸುವ ಘಟನೆಗಳು ಹೆಚ್ಚಿವೆ. ಈ ಡ್ರೋನ್‌ಗಳನ್ನು ಹೆಚ್ಚಾಗಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಭಾರತದ ಭೂಪ್ರದೇಶದೊಳಗೆ ಕಳುಹಿಸಲು  ಬಳಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಕಳೆದ ತಿಂಗಳು, ಗುರುದಾಸ್‌ಪುರದ ಇಂಡೋ-ಪಾಕ್ ಅಂತರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಒಳನುಗ್ಗುವಿಕೆಯನ್ನು ಗುರುತಿಸಿದ ನಂತರ ಬಿಎಸ್‌ಎಫ್ ಅದನ್ನು ವಿಫಲಗೊಳಿಸಿತು. ಯೋಧರು ಹಲವು ಸುತ್ತಿನ ಗುಂಡುಗಳನ್ನು ಹಾರಿಸಿ ಅದನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com