ಅಮ್ಮ ಚಾಕೊಲೇಟ್ ಕದ್ದಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ 3 ವರ್ಷದ ಮಗು, ವಿಡಿಯೋ ವೈರಲ್

ತನ್ನ ಅಮ್ಮ ಚಾಕೊಲೇಟ್ ಕದ್ದಿದ್ದಾಳೆ ಎಂದು ಆರೋಪಿಸಿ ಮೂರು ವರ್ಷದ ಬಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
ಅಮ್ಮನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ 3 ವರ್ಷದ ಮಗು!
ಅಮ್ಮನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ 3 ವರ್ಷದ ಮಗು!

ಭೋಪಾಲ್: ತನ್ನ ಅಮ್ಮ ಚಾಕೊಲೇಟ್ ಕದ್ದಿದ್ದಾಳೆ ಎಂದು ಆರೋಪಿಸಿ ಮೂರು ವರ್ಷದ ಬಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಮೂರು ವರ್ಷದ ಬಾಲಕ ಹಮ್ಜಾ ಅಲಿಯಾಸ್ ಸದ್ದಾಂ ಸೋಮವಾರ ತನ್ನ ತಂದೆಯ ಸಹಾಯದೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ಮಿಠಾಯಿಗಳು ಮತ್ತು ಚಾಕೊಲೇಟ್‌ಗಳನ್ನು ಕದ್ದಿದ್ದಾಳೆ ಎಂದು ದೂರು ನೀಡಿದ್ದಾನೆ.

ಮಿತಿಮೀರಿದ ಮಿಠಾಯಿಗಳು ಮತ್ತು ಚಾಕೊಲೇಟ್‌ಗಳನ್ನು ನೀಡಲು ತಾಯಿ ನಿರಾಕರಿಸುತ್ತಿದ್ದರಿಂದ ಕೋಪಗೊಂಡ ಬಾಲಕ ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದಾನೆ.

ಚಾಕೊಲೇಟ್ ಮತ್ತು ಮಿಠಾಯಿಗಳ ನೀಡಲು ನಿರಾಕರಿಸಿದ ತಾಯಿ ನನ್ನ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಬಂಧಿಸಬೇಕೆಂದು ಬಾಲಕ ಒತ್ತಾಯಿಸಿದ್ದಾನೆ.

"ಅಮ್ಮಿ ನನ್ನ ಟೋಫಿ ಮಿಠಾಯಿಗಳು ಮತ್ತು ಚಾಕೊಲೇಟ್‌ಗಳನ್ನು ಕದ್ದು ನನಗೆ ಕಪಾಳಮೋಕ್ಷ ಮಾಡಿದ್ದಾಳೆ. ದಯವಿಟ್ಟು ಕೇಸ್ ದಾಖಲಿಸಿ ಅವಳನ್ನು ಜೈಲಿಗೆ ಹಾಕಿ" ಎಂದು ದೇಧತಲೈ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಪ್ರಿಯಾಂಕಾ ನಾಯಕ್ ಅವರಿಗೆ ಕೇಳಿಕೊಂಡಿದ್ದಾನೆ. ಈ ವಿಲಕ್ಷಣ ಘಟನೆಯ ವಿಡಿಯೋ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ವಿಡಿಯೋ ಕರೆ ಮೂಲಕ ಸಂಪರ್ಕ ಸಾಧಿಸಿ ಬಾಲಕನ ಜೊತೆ ಮಾತನಾಡಿದ್ದಾರೆ. ದೀಪಾವಳಿ ಉಡುಗೊರೆಯಾಗಿ ನಿನಗೆ ಏನು ಬೇಕು ಎಂದು ಕೇಳಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿದ ಬಾಲಕ, ಚಾಕೊಲೇಟ್ ಮತ್ತು ಸೈಕಲ್ ಎಂದು ಹೇಳಿದ್ದಾನೆ.

ಗೃಹ ಸಚಿವರು ತಾವು ನೀಡಿದ ಭರವಸೆಯಂತೆ ದೀಪಾವಳಿ ಉಡುಗೊರೆಯಾಗಿ ಕೆಲವೇ ಗಂಟೆಗಳಲ್ಲಿ ಮಂಗಳವಾರವೇ ಬಾಲಕನಿಗೆ ಚಾಕೊಲೇಟ್ ಮತ್ತು ಸೈಕಲ್ ನೀಡಿದ್ದಾರೆ. ಖಕ್ನಾರ್ ಪೊಲೀಸ್ ಠಾಣೆಯ ಪೊಲೀಸರು ಚಾಕೊಲೇಟ್ ಮತ್ತು ಹೊಸ ಸೈಕಲ್‌ನೊಂದಿಗೆ ಡೆಡ್ತಲೈ ಗ್ರಾಮದ ಬಾಲಕನ ಮನೆಗೆ ತಲುಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com