ಕಳಪೆ ರಸ್ತೆ ಕಾಮಗಾರಿಗಳಿಂದಾಗುವ ಅಪಘಾತಗಳಿಗೆ ಅಧಿಕಾರಿಗಳೇ ಹೊಣೆ: ಹೆದ್ದಾರಿ ಪ್ರಾಧಿಕಾರ

ಕಳಪೆ ರಸ್ತೆ ಕಾಮಗಾರಿಗಳಿಂದಾಗಿ ಸಂಭವಿಸುವ ಯಾವುದೇ ಮಾರಣಾಂತಿಕ ಅಥವಾ ಗಂಭೀರ ಅಪಘಾತಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ...
ಬೆಂಗಳೂರು-ಮೈಸೂರು ಹತ್ತು ಪಥದ ಹೆದ್ದಾರಿ ಕಾಮಗಾರಿ
ಬೆಂಗಳೂರು-ಮೈಸೂರು ಹತ್ತು ಪಥದ ಹೆದ್ದಾರಿ ಕಾಮಗಾರಿ

ನವದೆಹಲಿ: ಕಳಪೆ ರಸ್ತೆ ಕಾಮಗಾರಿಗಳಿಂದಾಗಿ ಸಂಭವಿಸುವ ಯಾವುದೇ ಮಾರಣಾಂತಿಕ ಅಥವಾ ಗಂಭೀರ ಅಪಘಾತಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಮಂಗಳವಾರ ಸುತ್ತೋಲೆ ಹೊರಡಿಸಿದೆ.

ತಾತ್ಕಾಲಿಕ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ತೊಡಗಿರುವ ಎನ್ಎಚ್ಎಐ/ಐಇ/ಎಇಯ ಪ್ರತಿನಿಧಿಗಳಿಂದ ಕರ್ತವ್ಯ ಲೋಪವಾದರೆ. ಅವರ ನಿರ್ಲಕ್ಷ್ಯದಿಂದ ಬಳಕೆದಾರರ ಸುರಕ್ಷತೆಗೆ ಧಕ್ಕೆಯಾದರೆ ಅದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

“ಆದಾಗ್ಯೂ, ರಸ್ತೆ ಗುರುತು, ರಸ್ತೆ ಸಂಕೇತಗಳು, ಕ್ರಾಶ್ ಬ್ಯಾರಿಯರ್‌ ಹಾಕಿರುವುದನ್ನೇ ಆಧಾರವಾಗಿಟ್ಟುಕೊಂಡು ಕಾಮಗಾರಿ ಪೂರ್ಣಗೊಳಿಸಿರುವ ಕುರಿತು ತಾತ್ಕಾಲಿಕ ಪ್ರಮಾಣಪತ್ರಗಳನ್ನು ನೀಡಲಾಗುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದು ಬಳಕೆದಾರರ ಸುರಕ್ಷತೆ ಬಗ್ಗೆ ರಾಜಿ ಮಾಡಿಕೊಂಡಂತೆ ಮತ್ತು ಇದರಿಂದ ಪ್ರಾಧಿಕಾರಕ್ಕೂ ಕೆಟ್ಟ ಹೆಸರು ಬರುತ್ತದೆ" ಎಂದು ಸುತ್ತೋಲೆ ಹೇಳಿದೆ.

"ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡುವ ಮೊದಲು ಯೋಜನಾ ಹೆದ್ದಾರಿಯಲ್ಲಿನ ರಸ್ತೆ ಸುರಕ್ಷತಾ ಕಾಮಗಾರಿಗಳು ಎಲ್ಲಾ ರೀತಿಯಲ್ಲೂ ಪೂರ್ಣಗೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಕಳಪೆ ರಸ್ತೆ ಕಾಮಗಾರಿಯಿಂದಾಗಿ ಸಂಭವಿಸುವ ಯಾವುದೇ ಮಾರಣಾಂತಿಕ / ಗಂಭೀರ ಅಪಘಾತಗಳಿಗೆ ಪ್ರಾದೇಶಿಕ ಅಧಿಕಾರಿಗಳು/ ಯೋಜನಾ ನಿರ್ದೇಶಕರು/ ಸಂಬಂಧಪಟ್ಟ ಇಂಜಿನಿಯರ್ ಅನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ”ಎಂದು ಎನ್ಎಚ್ಎಐ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com