ಬಿಜೆಪಿಯ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಆರ್‌ಎಸ್‌ಎಸ್ ನಿಂದ ಧರ್ಮ ದಂಗಲ್: ಮಾಯಾವತಿ

ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌ಎಸ್ ಧಾರ್ಮಿಕ ಮತಾಂತರ ಮತ್ತು ಜನಸಂಖ್ಯಾ ನೀತಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ...
ಮಾಯಾವತಿ
ಮಾಯಾವತಿ
Updated on: 

ಲಖನೌ: ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆರ್‌ಎಸ್‌ಎಸ್ ಧಾರ್ಮಿಕ ಮತಾಂತರ ಮತ್ತು ಜನಸಂಖ್ಯಾ ನೀತಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಶನಿವಾರ ಆರೋಪಿಸಿದ್ದಾರೆ.

ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) "ಮೌನ" ಹಾನಿಕಾರಕ ಎಂದು ಅವರು ಮಾಯಾವತಿ ಹೇಳಿದ್ದಾರೆ.

"ಬೃಹತ್ ಹಣದುಬ್ಬರ, ನಿರುದ್ಯೋಗ, ಹಿಂಸಾಚಾರ ಮತ್ತು ಅವ್ಯವಸ್ಥೆಯ ಶಾಪದಿಂದ ತತ್ತರಿಸಿರುವ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹೊಸ ಜನಸಂಖ್ಯಾ ನೀತಿ ಮತ್ತು ಧಾರ್ಮಿಕ ಮತಾಂತರದ ಬಗ್ಗೆ ಆರ್‌ಎಸ್‌ಎಸ್ ಈಗ ಅಪಶ್ರುತಿ ಧ್ವನಿ ಎತ್ತುತ್ತಿದೆ. ಇದು ಪೂರ್ವ ಯೋಜಿತ. ಬಿಜೆಪಿ ಸರ್ಕಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಷಡ್ಯಂತ್ರ” ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, "ವಾಸ್ತವವಾಗಿ, ಬಿಜೆಪಿ ಮತ್ತು ಅದರ ಸರ್ಕಾರವನ್ನು ಬೆಂಬಲಿಸುವ ಪಿತೂರಿಯ ಭಾಗವಾಗಿ ಮುಂದಿನ (2024) ಲೋಕಸಭೆ ಚುನಾವಣೆಯ ಮುನ್ನ ಆರ್‌ಎಸ್‌ಎಸ್‌ನ ಈ ಅಭಿಯಾನವನ್ನು ಆರಂಭಿಸುತ್ತಿದೆ. ಆದರೆ ಈ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಬಹಳ ಮುಖ್ಯ" ಎಂದು ಮಾಯಾವತಿ ಹೇಳಿದ್ದಾರೆ.

ಆರ್ ಎಸ್ಎಸ್ ತನ್ನ "ಕಣ್ಣು ಮುಚ್ಚಿ" ಪ್ರತಿ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಬೆಂಬಲಿಸುತ್ತದೆ. ಆದರೆ "ಬಿಜೆಪಿ ಸರ್ಕಾರದ ತಪ್ಪು ಮತ್ತು ಜನವಿರೋಧಿ ನೀತಿಗಳನ್ನು ಎಂದಿಗೂ ಬಹಿರಂಗವಾಗಿ ವಿರೋಧಿಸುವುದಿಲ್ಲ" ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com