ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಮಾಯಕರ ಹತ್ಯೆಗಳ ವಿರುದ್ಧ ಜನರು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಮಾಯಕರ ಹತ್ಯೆಗಳ ವಿರುದ್ಧ ಜನರು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಉದ್ದೇಶಿತ ಹತ್ಯೆಗಳಿಂದ ಭಯದ ವಾತಾವರಣ; ಕಣಿವೆ ತೊರೆಯುತ್ತಿರುವ ಕಾಶ್ಮೀರಿ ಪಂಡಿತರು

ಅಕ್ಟೋಬರ್ 15 ರಂದು ಜಿಲ್ಲೆಯಲ್ಲಿ ಉಗ್ರರು ಕಾಶ್ಮೀರಿ ಪಂಡಿತ ರೈತನನ್ನು ಕೊಂದ ನಂತರ ಕನಿಷ್ಠ ಒಂಬತ್ತು ವಲಸಿಗರಲ್ಲದ ಕಾಶ್ಮೀರಿ ಪಂಡಿತ್ ಕುಟುಂಬಗಳು ಸೋಮವಾರ ಕಣಿವೆಯ ಶೋಪಿಯಾನ್ ಜಿಲ್ಲೆಯಿಂದ ಜಮ್ಮುವಿಗೆ ಸ್ಥಳಾಂತರಗೊಂಡಿವೆ ಎಂದು ಕಾಶ್ಮೀರಿ ಪಂಡಿತ್ ಗುಂಪು ತಿಳಿಸಿದೆ.
Published on

ಶ್ರೀನಗರ: ಅಕ್ಟೋಬರ್ 15 ರಂದು ಜಿಲ್ಲೆಯಲ್ಲಿ ಉಗ್ರರು ಕಾಶ್ಮೀರಿ ಪಂಡಿತ ರೈತನನ್ನು ಕೊಂದ ನಂತರ ಕನಿಷ್ಠ ಒಂಬತ್ತು ವಲಸಿಗರಲ್ಲದ ಕಾಶ್ಮೀರಿ ಪಂಡಿತ್ ಕುಟುಂಬಗಳು ಸೋಮವಾರ ಕಣಿವೆಯ ಶೋಪಿಯಾನ್ ಜಿಲ್ಲೆಯಿಂದ ಜಮ್ಮುವಿಗೆ ಸ್ಥಳಾಂತರಗೊಂಡಿವೆ ಎಂದು ಕಾಶ್ಮೀರಿ ಪಂಡಿತ್ ಗುಂಪು ತಿಳಿಸಿದೆ.

ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಕನಿಷ್ಠ 17 ಕಾಶ್ಮೀರಿ ಪಂಡಿತ್ ಕುಟುಂಬಗಳು ಕಾಶ್ಮೀರವನ್ನು ತೊರೆದಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಚೌದರಿ ಗುಂಡ್ ಪ್ರದೇಶದಲ್ಲಿ ವಾಸಿಸುತ್ತಿರುವ ಒಂಬತ್ತು ವಲಸಿಗರಲ್ಲದ ಪಂಡಿತ್ ಕುಟುಂಬಗಳು ಸೋಮವಾರ ಜಮ್ಮುವಿಗೆ ತೆರಳಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್) ಅಧ್ಯಕ್ಷ ಸಂಜಯ್ ಟಿಕೂ ಟಿಎನ್‌ಐಇಗೆ ತಿಳಿಸಿದ್ದಾರೆ.

ಸೇಬಿನ ಇಳುವರಿ ಅವರ ಜಮೀನಿನಲ್ಲಿ ಮಾರಾಟವಾಗದೆ ಬಿದ್ದಿರುವಾಗಲೂ ಕಾಶ್ಮೀರಿ ಪಂಡಿತ್ ಕುಟುಂಬಗಳು ಜಮ್ಮುವಿಗೆ ತೆರಳಿದ್ದಾರೆ. 1989 ರಲ್ಲಿನ ಉಗ್ರರ ಸ್ಫೋಟದ ನಂತರ ಸಮುದಾಯದ ಸದಸ್ಯರು ಸಾಮೂಹಿಕವಾಗಿ ಜಮ್ಮುವಿಗೆ ವಲಸೆ ಹೋದಾಗಲೂ ಈ ಒಂಬತ್ತು ಕುಟುಂಬಗಳು ಕಣಿವೆಯಿಂದ ವಲಸೆ ಹೋಗಿರಲಿಲ್ಲ ಎಂದು ಟಿಕೂ ಹೇಳಿದರು.

ಈಗ, ಈ ವರ್ಷದ ಉದ್ದೇಶಿತ ಹತ್ಯೆಗಳು ಮತ್ತೆ ಕಣಿವೆಯಲ್ಲಿ ಭಯದ ಅಲೆಯನ್ನು ಹರಡಿವೆ. ಅಕ್ಟೋಬರ್ 15 ರಂದು ಚೌದರಿ ಗುಂಡ್ ಪ್ರದೇಶದ ಅವರ ನಿವಾಸದ ಬಳಿ ಪುರನ್ ಕ್ರಿಶನ್ ಭಟ್ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ 17 ವಲಸಿಗರಲ್ಲದ ಪಂಡಿತ್ ಕುಟುಂಬಗಳು ತಮ್ಮ ಮನೆಗಳಿಂದ ಜಮ್ಮುವಿಗೆ ಪಲಾಯನ ಮಾಡಿದ್ದು, ತಮ್ಮ ಆಸ್ತಿ ಸೇರಿದಂತೆ ಎಲ್ಲವನ್ನೂ ತೊರೆದಿದ್ದಾರೆ ಎಂದು ಟಿಕೂ ಹೇಳಿದರು.

1990ರಲ್ಲಿ 800ಕ್ಕೂ ಹೆಚ್ಚು ಪಂಡಿತ್ ಕುಟುಂಬಗಳು ಕಣಿವೆಯಿಂದ ವಲಸೆ ಹೋಗಿರಲಿಲ್ಲ, ಬಹುಸಂಖ್ಯಾತ ಸಮುದಾಯದೊಂದಿಗೆ ಮತ್ತೆ ಉಳಿಯಲು ನಿರ್ಧರಿಸಿದರು. ಅವುಗಳಲ್ಲಿ, 600 ಕುಟುಂಬಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್, ಅನಂತನಾಗ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದರೆ, 200 ಕುಟುಂಬಗಳು ಮಧ್ಯ ಕಾಶ್ಮೀರದಲ್ಲಿ ಮತ್ತು ಸುಮಾರು 25 ಕುಟುಂಬಗಳು ಉತ್ತರ ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ವಾಸಿಸುತ್ತಿವೆ ಎಂದರು.

ಸಮುದಾಯದ ಸದಸ್ಯರು ತಮ್ಮ ಸಲಹೆಯನ್ನು ಪಡೆಯಲು ಕರೆಗಳನ್ನು ಮಾಡುತ್ತಾರೆ. ವೈಯಕ್ತಿಕ ಸನ್ನಿವೇಶಗಳಿಗೆ ಅನುಗುಣವಾಗಿ ಅವರು ನಿರ್ಧಾರ ತೆಗೆದುಕೊಳ್ಳುವಂತೆ ನಾನು ಸೂಚಿಸುತ್ತೇ ನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಂಡಿತರು ವಾಸಿಸುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದರೂ, ಭಟ್ ಅವರ ಮನೆಯ ಆವರಣದಲ್ಲೇ ಅವರನ್ನು ಕೊಲ್ಲಲಾಯಿತು. 'ಈ ಹತ್ಯೆಯು ಪಂಡಿತ್ ಸಮುದಾಯದಲ್ಲಿ ಮತ್ತಷ್ಟು ಭಯವನ್ನು ಉಂಟುಮಾಡಿದೆ' ಎಂದು ಟಿಕೂ ಹೇಳಿದರು.

ಭಟ್ ಅವರ ಹತ್ಯೆಯು ಕಳೆದ ಐದು ತಿಂಗಳಲ್ಲಿ ಕಣಿವೆಯಲ್ಲಿ ಉಗ್ರಗಾಮಿಗಳು ನಡೆಸಿದ ಮೂರನೇ ಉದ್ದೇಶಿತ ಪಂಡಿತ್ ಹತ್ಯೆಯಾಗಿದೆ.

ಆಗಸ್ಟ್ 16 ರಂದು ಶೋಪಿಯಾನ್‌ನ ಚೊಂಟಿಪೋರಾ ಗ್ರಾಮದಲ್ಲಿ ಉಗ್ರರು ಸುನೀಲ್ ಕುಮಾರ್ ಭಟ್ ಅವರನ್ನು ಗುಂಡಿಕ್ಕಿ ಕೊಂದರು ಮತ್ತು ಅವರ ಸೋದರಸಂಬಂಧಿ ಪಿತಾಂಬರ್ ನಾಥ್ ಬಾತ್ ಅವರನ್ನು ಗಾಯಗೊಳಿಸಿದ್ದರು. ಮೇ 12 ರಂದು, ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ತಹಸಿಲಾರ್ ಕಚೇರಿಯೊಳಗೆ ಉಗ್ರರು ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಂದರು. ಪ್ರಧಾನಿ ಪ್ಯಾಕೇಜ್ ಅಡಿಯಲ್ಲಿ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 5,000 ಪಂಡಿತ್ ನೌಕರರು ರಾಹುಲ್ ಹತ್ಯೆಯ ನಂತರ ತಮ್ಮ ಅಧಿಕೃತ ಕರ್ತವ್ಯಗಳಿಗೆ ಹಾಜರಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com