ಜಮ್ಮು-ಕಾಶ್ಮೀರ: ಶೋಪಿಯಾನ್ ನಿಂದ ವಲಸೆ ಹೋಗಿಲ್ಲ ಎಂದ ಅಧಿಕಾರಿಗಳು; ನಾವೆಂದಿಗೂ ಹಿಂತಿರುಗುವುದಿಲ್ಲ ಎನ್ನುತ್ತಿರುವ ಕಾಶ್ಮೀರ ಪಂಡಿತರು

ಜಮ್ಮು-ಕಾಶ್ಮೀರದ ಶೋಪಿಯಾನ್ ನಿಂದ ಕಾಶ್ಮೀರಿ ಪಂಡಿತರ ವಲಸೆ ನಡೆದಿಲ್ಲ ಎಂದು ಹೇಳುವ ಮೂಲಕ ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದರೂ ಕೂಡ ಜಮ್ಮುವಿನಲ್ಲಿ ಕ್ಯಾಂಪ್ ಮಾಡುತ್ತಿರುವ ತಂಗಿರುವ ಈ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು, ಇನ್ನು ಕಣಿವೆ ಪ್ರದೇಶವಾದ ಜಮ್ಮು-ಕಾಶ್ಮೀರಕ್ಕೆ ಹಿಂತಿರುಗುವ ಯೋಜನೆಯನ್ನು ತಳ್ಳಿಹಾಕಿದ್ದಾರೆ.  
ಕಾಶ್ಮೀರ ಪಂಡಿತರು(ಸಂಗ್ರಹ ಚಿತ್ರ)
ಕಾಶ್ಮೀರ ಪಂಡಿತರು(ಸಂಗ್ರಹ ಚಿತ್ರ)

ಶ್ರೀನಗರ:ಜಮ್ಮು-ಕಾಶ್ಮೀರದ ಶೋಪಿಯಾನ್ ನಿಂದ ಕಾಶ್ಮೀರಿ ಪಂಡಿತರ ವಲಸೆ ನಡೆದಿಲ್ಲ ಎಂದು ಹೇಳುವ ಮೂಲಕ ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದರೂ ಕೂಡ ಜಮ್ಮುವಿನಲ್ಲಿ ಕ್ಯಾಂಪ್ ಮಾಡುತ್ತಿರುವ ತಂಗಿರುವ ಈ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು, ಇನ್ನು ಕಣಿವೆ ಪ್ರದೇಶವಾದ ಜಮ್ಮು-ಕಾಶ್ಮೀರಕ್ಕೆ ಹಿಂತಿರುಗುವ ಯೋಜನೆಯನ್ನು ತಳ್ಳಿಹಾಕಿದ್ದಾರೆ.  

ಶೋಪಿಯಾನ್‌ನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪರಿಶೀಲಿಸಿದ ಟ್ವಿಟರ್ ಖಾತೆಯಲ್ಲಿ "ಕಾಶ್ಮೀರಿ ವಲಸಿಗರಲ್ಲದ ಹಿಂದೂ ಜನರು ತೊರೆಯುವ ಸುದ್ದಿ ಆಧಾರ ರಹಿತ ಎಂದು ಹೇಳಿದರೆ, ಮೊನ್ನೆ ಅಕ್ಟೋಬರ್‌ 16ರಂದು ಭಯೋತ್ಪಾದಕರ ಗುಂಡಿಗೆ ಬಲಿಯಾದ ಪುರಾನ್ ಕ್ರಿಶನ್ ಭಟ್ ಅವರ ಸೋದರ ಅಶ್ವನಿ ಕುಮಾರ್ ಭಟ್, ತಾವು ವಲಸೆ ಹೋಗಿದ್ದು ಇನ್ನೆಂದಿಗೂ ಕಾಶ್ಮೀರಕ್ಕೆ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. 

ಅಧಿಕಾರಿಗಳು ಟ್ವಿಟರ್‌ನಲ್ಲಿ "ಗ್ರಾಮದಲ್ಲಿ ಸರಿಯಾದ ಮತ್ತು ದೃಢವಾದ ಭದ್ರತಾ ವ್ಯವಸ್ಥೆಗಳನ್ನು ಇರಿಸಲಾಗಿದೆ. ಕಾಶ್ಮೀರಿ ವಲಸೆ-ಅಲ್ಲದ ಹಿಂದೂ ವಾಸಸ್ಥಳಗಳು ಮತ್ತು ಹಳ್ಳಿಗಳ ಇತರ ಕಡೆಗಳಲ್ಲಿಯೂ ಸಹ ಇದೇ ರೀತಿಯ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿವೆ" ಎಂದು ಹೇಳಿಕೊಂಡಿದ್ದಾರೆ.

ಶೋಪಿಯಾನ್‌ನ ಚೌಧರಿಗುಂಡ್ ಪ್ರದೇಶದಲ್ಲಿ 20 ಮೀಟರ್‌ನಲ್ಲಿ ಅಲ್ಪಸಂಖ್ಯಾತ ಪೊಲೀಸ್ ಪಿಕೆಟ್ ಮತ್ತು ಹತ್ತಿರದ ಸೇನಾ ಶಿಬಿರವನ್ನು ಹೊಂದಿದ್ದ ಸ್ಥಳದಲ್ಲಿ ಪುರನ್ ಕ್ರಿಶನ್ ಭಟ್ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುರನ್ ಕೃಷ್ಣನ್ ಭಟ್, ನಾನು ಎಂದಿಗೂ ಹಿಂತಿರುಗುವುದಿಲ್ಲ, ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡುತ್ತೇನೆ, ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಇನ್ನು ಬರುವುದಿಲ್ಲ, ನನ್ನ ಮಕ್ಕಳನ್ನು ಹೋಗಲು ಬಿಡುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com