'ಯೇಸು ನಿಜವಾದ ದೇವರು' ರಾಹುಲ್ ಭೇಟಿ ವೇಳೆ ಪಾದ್ರಿ ಹೇಳಿಕೆ, ಕಾಂಗ್ರೆಸ್- ಬಿಜೆಪಿ ನಡುವೆ ಮಾತಿನ ಚಕಮಕಿ

ರಾಹುಲ್ ಗಾಂಧಿ ಜೊತೆಗೆ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಸಂವಾದ ನಡೆಸುತ್ತಿರುವ ವೇಳೆ ಹಿಂದೂ ಶಕ್ತಿ ದೇವತೆ ಬಗ್ಗೆ ಪ್ರಸ್ತಾಪಿಸಿದ ವಿಡಿಯೋವೊಂದನ್ನು ಶನಿವಾರ ಉಲ್ಲೇಖಿಸಿರುವ ಬಿಜೆಪಿ, ಇದು ವಿರೋಧ ಪಕ್ಷದ ಹಿಂದೂ ವಿರೋಧಿ ಮುಖವನ್ನು ತೋರಿಸುತ್ತದೆ ಎಂದು ಆರೋಪಿಸಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ರಾಹುಲ್ ಗಾಂಧಿ ಜೊತೆಗೆ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಸಂವಾದ ನಡೆಸುತ್ತಿರುವ ವೇಳೆ ಹಿಂದೂ ಶಕ್ತಿ ದೇವತೆ ಬಗ್ಗೆ ಪ್ರಸ್ತಾಪಿಸಿದ ವಿಡಿಯೋವೊಂದನ್ನು ಶನಿವಾರ ಉಲ್ಲೇಖಿಸಿರುವ ಬಿಜೆಪಿ, ಇದು ವಿರೋಧ ಪಕ್ಷದ ಹಿಂದೂ ವಿರೋಧಿ ಮುಖವನ್ನು ತೋರಿಸುತ್ತದೆ ಎಂದು ಆರೋಪಿಸಿದೆ.

ಇದಕ್ಕೆ ಕಾಂಗ್ರೆಸ್ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿರುವ ಕಾಂಗ್ರೆಸ್,  ಬಿಜೆಪಿ ತನ್ನ ದ್ವೇಷದ ಕಾರ್ಖಾನೆ  ಮೂಲಕ ಕಿಡಿಗೇಡಿತನವನ್ನು ಹರಡುತ್ತಿದೆ ಎಂದು ಆರೋಪಿಸಿದೆ ಮತ್ತು 'ಭಾರತ್ ಜೋಡೋ ಯಾತ್ರೆ'ಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಆಡಳಿತ ಪಕ್ಷವು ಹೆಚ್ಚು ಹತಾಶವಾಗಿದೆ ಎಂದು ಟೀಕಿಸಿದೆ. 

ಹಲವಾರು ಬಿಜೆಪಿ ನಾಯಕರು ಹಂಚಿಕೊಂಡಿರುವ ವೀಡಿಯೊದಲ್ಲಿ, ಜಾರ್ಜ್ ಪೊನ್ನಯ್ಯ ಎಂದು ಗುರುತಿಸಲ್ಪಟ್ಟ ಪಾದ್ರಿಯು, ಜೀಸಸ್ ಕ್ರಿಸ್ತ ನಿಜವಾದ ದೇವರು, ಶಕ್ತಿ ದೇವತೆಯಂತೆ ಅಲ್ಲ ಎಂದು ರಾಹುಲ್ ಗಾಂಧಿಗೆ ಹೇಳುವಂತೆ ಕೇಳಿಸುತ್ತದೆ. ಯೇಸುವನ್ನು ದೇವರೆಂದು ಪರಿಗಣಿಸಲಾಗುತ್ತದೋ ಇಲ್ಲವೋ ಎಂಬ ಕಾಂಗ್ರೆಸ್ ಮುಖಂಡರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. 

 'ಭಾರತ್ ಜೋಡೋ ಯಾತ್ರೆ'ಯ ನೈಜತೆಯನ್ನು ಈ ವೀಡಿಯೊ ಬಹಿರಂಗಪಡಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ. ನವರಾತ್ರಿ ಆರಂಭಕ್ಕೂ ಮುನ್ನ ಶಕ್ತಿ ದೇವತೆಯನ್ನು ಅವಮಾನಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ರಾಮನ ಅಸ್ತಿತ್ವವನ್ನು ಕಾಂಗ್ರೆಸ್ ಪಕ್ಷವು ಈ ಹಿಂದೆಯೇ ಪ್ರಶ್ನಿಸಿದ್ದರಿಂದ ಇಂತಹ ಘಟನೆಗಳಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ ಎಂದು ಅವರು ಹೇಳಿದರು.

ಚುನಾವಣೆಯ ಸಮಯದಲ್ಲಿ, ಗಾಂಧಿ ದೇವಸ್ಥಾನಗಳಿಗೆ ಹೋಗುವಂತೆ ನಟಿಸುತ್ತಾರೆ ಆದರೆ ಚುನಾವಣೆ ಮುಗಿದ ನಂತರ  ಹಿಂದೂ ವಿರೋಧಿ ಮುಖವು ಮುನ್ನೆಲೆಗೆ ಬರುತ್ತದೆ ಎಂದು ಅವರು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com