ರಾಹುಲ್ ಗಾಂಧಿ ಟೀ ಶರ್ಟ್ ಮೇಲೆ ಬಿಜೆಪಿ ಕೆಂಗಣ್ಣು; ಮೋದಿ ಸೂಟ್ ಬೆಲೆ 10 ಲಕ್ಷ ರೂ.: ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ಗುರುವಾರದಿಂದ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಬಿಜೆಪಿ ರಾಹುಲ್ ಗಾಂಧಿ ಧರಿಸಿದ್ದ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಗುರುವಾರದಿಂದ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಬಿಜೆಪಿ ರಾಹುಲ್ ಗಾಂಧಿ ಧರಿಸಿದ್ದ ಟೀ ಶರ್ಟ್ ಬಗ್ಗೆ ಟೀಕೆ ಮಾಡುತ್ತಿದ್ದು, ಇದರ ಬೆಲೆಯನ್ನು ರಾಹುಲ್ ಗಾಂಧಿ ಅವರ ಫೋಟೋ ಸಮೇತ ಟ್ವೀಟ್ ಮಾಡಿದೆ.

ಭಾರತ ನೋಡಿ ಎಂದು ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ಟೀ ಶರ್ಟ್ ಬೆಲೆ 41 ಸಾವಿರ ಎಂದು ಬಹಿರಂಗಪಡಿಸಿದೆ. ಹೌದು ಬ್ಲೂಬೆರಿ ಟೀ ಶರ್ಟ್ ನ ಬೆಲೆ 41,000 ರೂಪಾಯಿಗಳಿಗಿಂತ ಹೆಚ್ಚು ಎಂದು ಸೂಚಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನಾನು ಯಾತ್ರೆಯ ನೇತೃತ್ವ ವಹಿಸುತ್ತಿಲ್ಲ. ಅದರಲ್ಲಿ ಭಾಗವಹಿಸುತ್ತಿದ್ದೇನೆ. ದೇಶದಲ್ಲಿ ದ್ವೇಷವನ್ನು ಹರಡುವ ಮೂಲಕ ಬಿಜೆಪಿ-ಆರ್‌ಎಸ್‌ಎಸ್ ಮಾಡಿದ ಹಾನಿಯನ್ನು ಸರಿಪಡಿಸುವ ಗುರಿಯನ್ನು ಈ ಯಾತ್ರೆ ಹೊಂದಿದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಕೂಡ ಬಿಜೆಪಿಗೆ ತಿರುಗೇಟು ನೀಡಿದ್ದು, “ಪ್ರಧಾನಿ ನರೇಂದ್ರ ಮೋದಿಯವರ ಸೂಟ್‌ನ ಬೆಲೆ 10 ಲಕ್ಷ ರೂಪಾಯಿ ಎಂದು ಹೇಳಿದೆ. ಏಯ್… ನಿನಗೆ ಹೆದರಿಕೆಯಾ? ‘ಭಾರತ್ ಜೋಡೋ ಯಾತ್ರೆಯಲ್ಲಿ ನೆರೆದಿದ್ದ ಜನಸಮೂಹವನ್ನು ನೋಡಿ. ಸಮಸ್ಯೆಯ ಬಗ್ಗೆ ಮಾತನಾಡಿ… ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ. ನಾವು ಬಟ್ಟೆಯ ಬಗ್ಗೆ ಚರ್ಚಿಸಬೇಕಾದರೆ, ಮೋದಿ ಜಿ ಅವರ 10 ಲಕ್ಷ ಬೆಲೆಯ ಸೂಟ್ ಮತ್ತು 1.5 ಲಕ್ಷ ಬೆಲೆಯ ಕನ್ನಡಕದ ಬಗ್ಗೆಯೂ ಮಾತನಾಡಬೇಕಾಗುತ್ತದೆ, ”ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com