ಸಿನಿಮಾ ಸುದ್ದಿ

Oscars 2027: ಆಸ್ಕರ್ ಅಂಗಳಕ್ಕೆ ಭಾರತದ 'ಗೊಂಡಲ್' ಎಂಟ್ರಿ

ಮರಾಠಿ ಸಿನಿಮಾ 'ಗೊಂಡಲ್' ಆಸ್ಕರ್ ಪ್ರಶಸ್ತಿಗೆ ಪರಿಗಣನೆಗೆ ಅರ್ಹವಾಗಿರುವ 104 ಚಲನಚಿತ್ರಗಳ ಪಟ್ಟಿಯಲ್ಲಿದೆ. ಇಷ್ಟೊಂದು ಸಿನಿಮಾಗಳು ಪರಿಗಣನೆಯಲ್ಲಿರುವುದು ದಾಖಲೆಯಾಗಿದೆ.

Oscars 2027: ಆಸ್ಕರ್ ಅಂಗಳಕ್ಕೆ ಭಾರತದ 'ಗೊಂಡಲ್' ಎಂಟ್ರಿ
ಗೊಂಡಲ್ ಸಿನಿಮಾದ ಸ್ಟಿಲ್
Published On :

ಭಾರತದ 'ಗೊಂಡಲ್' ಸಿನಿಮಾ ಆಸ್ಕರ್ 2027(99ನೇ ಅಕಾಡೆಮಿ ಪ್ರಶಸ್ತಿಗಳು)ರ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದು, 99ನೇ ಅಕಾಡಮಿ ಪ್ರಶಸ್ತಿಗಳ ‘ಅಂತರರಾಷ್ಟ್ರೀಯ ಚಲನಚಿತ್ರ’ ವಿಭಾಗದಲ್ಲಿ ಪರಿಗಣನೆಗೆ ಅರ್ಹವಾಗಿದೆ ಎಂದು ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸಸ್’ ಮಂಗಳವಾರ ಘೋಷಿಸಿದೆ.

ಮರಾಠಿ ಸಿನಿಮಾ 'ಗೊಂಡಲ್' ಆಸ್ಕರ್ ಪ್ರಶಸ್ತಿಗೆ ಪರಿಗಣನೆಗೆ ಅರ್ಹವಾಗಿರುವ 104 ಚಲನಚಿತ್ರಗಳ ಪಟ್ಟಿಯಲ್ಲಿದೆ. ಇಷ್ಟೊಂದು ಸಿನಿಮಾಗಳು ಪರಿಗಣನೆಯಲ್ಲಿರುವುದು ದಾಖಲೆಯಾಗಿದೆ.

'ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ'(Best Animated Feature Film) ಮತ್ತು 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' (Best International Feature Film) ವಿಭಾಗಗಳಲ್ಲಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚು ಸಂಖ್ಯೆಯ ಚಲನಚಿತ್ರಗಳು ಅರ್ಹತೆ ಪಡೆದಿವೆ.

'ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ' ವಿಭಾಗದಲ್ಲಿ ಒಟ್ಟು 38 ಚಲನಚಿತ್ರಗಳು ಪರಿಗಣನೆಗೆ ಅರ್ಹವಾಗಿವೆ.

'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' ವಿಭಾಗದ ಆರಂಭಿಕ ಪಟ್ಟಿಯಲ್ಲಿ(longlist) ಪ್ರಪಂಚದಾದ್ಯಂತದ 104 ಚಲನಚಿತ್ರಗಳು ಸೇರಿವೆ.

ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿರುವ 'ಗೊಂಡಲ್' (Gondhal) ಎಂಬ ಮರಾಠಿ ಸಿನಿಮಾ ಈ ಅರ್ಹ ಚಲನಚಿತ್ರಗಳ ಪಟ್ಟಿಯಲ್ಲಿದೆ.

'ಅತ್ಯುತ್ತಮ ಸಾಕ್ಷ್ಯಚಿತ್ರ' (Best Documentary Feature) ವಿಭಾಗದಲ್ಲಿಯೂ 190 ಚಲನಚಿತ್ರಗಳು ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.

ಆಸ್ಕರ್ 2027ಕ್ಕಾಗಿ ಪ್ರಾಥಮಿಕ ಮತದಾನವು ಡಿಸೆಂಬರ್ 11ರಂದು ಮುಕ್ತಾಯಗೊಳ್ಳಲಿದ್ದು, ಅಂತಿಮ ಪಟ್ಟಿಗೆ ಆಯ್ಕೆಯಾದ (shortlisted) ಚಲನಚಿತ್ರಗಳನ್ನು ಡಿಸೆಂಬರ್ 15ರಂದು ಪ್ರಕಟಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.