bigg boss kannada: ದೊಡ್ಮನೆಗೆ ಮಾಡ್ರನ್ ಮಹಾಕವಿ ಮಂಜ ರೀ ಎಂಟ್ರಿ, ನಿದ್ದೆಯಿಂದ ಎದ್ದ ಸ್ಪರ್ಧಿಗಳಿಗೆ ಶಾಕ್‌ ಮೇಲೆ ಶಾಕ್‌..!

ಬಿಗ್‌ ಬಾಸ್‌ ಮನೆಯಲ್ಲಿ ಅನುಚಿತ ಪದಗಳ ಬಳಕೆ ಹಾಗೂ ವರ್ತನೆಯ ಕಾರಣಕ್ಕೆ ಮಂಜ ಅವರನ್ನು ಈ ಹಿಂದೆ ಎಲಿಮಿನೇಟ್‌ ಮಾಡಲಾಗಿತ್ತು. ಆದರೆ, ಅವರಿಗೆ ರೆಡ್‌ ಕಾರ್ಡ್‌ ತೋರಿಸಿ ಹೊರಹಾಕಿರಲಿಲ್ಲ.
Manja
ಮಾಡ್ರನ್ ಮಹಾಕವಿ ಮಂಜ
Updated on: 

ಬೆಂಗಳೂರು: ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ಮನೆಗೆ ಮಾಡ್ರನ್‌ ಮಹಾಕವಿ ಮಂಜ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರ ಅನಿರೀಕ್ಷಿತ ಆಗಮನದಿಂದ ಮನೆಯ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

ಅದರಲ್ಲೂ ಬೆಳ್ಳಂಬೆಳಗ್ಗೆ ಸುಖನಿದ್ರೆಯಲ್ಲಿದ್ದ ಸ್ಪರ್ಧಿಗಳಿಗೆ ಎದ್ದ ಕೂಡಲೇ ಕಸದ ರಾಶಿಯ ದರ್ಶನವಾಗಿದೆ. ಸುಂದರವಾಗಿ ಅಚ್ಚುಕಟ್ಟಾಗಿದ್ದ ದೊಡ್ಮನೆಯನ್ನು ಮಂಜ ಕ್ಷಣಾರ್ಧದಲ್ಲಿ ಅಸ್ತವ್ಯಸ್ತಗೊಳಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ 13ನೇ ಆವೃತ್ತಿ ಇದೀಗ ಒಂಬತ್ತನೇ ವಾರಕ್ಕೆ ಕಾಲಿಟ್ಟಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ವಾರ ಯಾವುದೇ ಸ್ಪರ್ಧಿಯನ್ನು ಮನೆಯಿಂದ ಹೊರಹಾಕಿಲ್ಲ.

ಬದಲಾಗಿ, ಮನೆಯೊಳಗೆ ಹೊಸ ಸಂಚಲನ ಮೂಡಿಸಲು ಮಾಡ್ರನ್‌ ಮಹಾಕವಿ ಮಂಜ ಅವರನ್ನು ಮತ್ತೆ ಕರೆತರಲಾಗಿದೆ. ಆದರೆ, ಈ ಬಾರಿ ಅವರು ಸ್ಪರ್ಧಿಯಾಗಿ ಬಂದಿಲ್ಲ. ಅತಿಥಿಯಾಗಿ ದೊಡ್ಮನೆ ಪ್ರವೇಶಿಸಿರುವ ಮಂಜ, ಕೆಲ ದಿನಗಳ ಕಾಲ ಮನೆಯಲ್ಲಿದ್ದು, ಮಂಕಾಗಿರುವ ಸ್ಪರ್ಧಿಗಳ ಆಟಕ್ಕೆ ಹೊಸ ಕಳೆ ತರುವ ಜವಾಬ್ದಾರಿ ಹೊತ್ತಿದ್ದಾರೆ.

Manja
ಬಿಗ್ ಬಾಸ್ ಕನ್ನಡ ಖ್ಯಾತಿಯ ತಾಂಡವ್ ರಾಮ್ ನಟನೆಯ 'ಬಂಬೂ ಸವಾರಿ' ಬಿಡುಗಡೆಗೆ ಸಿದ್ಧ; ಮೊದಲ ಹಾಡು ರಿಲೀಸ್!

ಬಿಗ್‌ ಬಾಸ್‌ ಮನೆಯಲ್ಲಿ ಅನುಚಿತ ಪದಗಳ ಬಳಕೆ ಹಾಗೂ ವರ್ತನೆಯ ಕಾರಣಕ್ಕೆ ಮಂಜ ಅವರನ್ನು ಈ ಹಿಂದೆ ಎಲಿಮಿನೇಟ್‌ ಮಾಡಲಾಗಿತ್ತು. ಆದರೆ, ಅವರಿಗೆ ರೆಡ್‌ ಕಾರ್ಡ್‌ ತೋರಿಸಿ ಹೊರಹಾಕಿರಲಿಲ್ಲ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌, “ರೆಡ್‌ ಕಾರ್ಡ್‌ ತೋರಿಸುವುದು ಸರಿಯಲ್ಲ. ಆದರೆ, ಅದು ನನ್ನ ಬಳಿ ಇದೆ ಎಂಬುದನ್ನು ಮರೆಯಬೇಡಿ. ಮಂಜು, ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ” ಎಂದು ಎಚ್ಚರಿಕೆ ನೀಡಿ ಅತಿಥಿಯಾಗಿ ಮತ್ತೆ ಮನೆಯೊಳಗೆ ಕಳುಹಿಸಿದ್ದರು. ಇದೇ ವಿಚಾರವನ್ನು ಮನೆಯ ಇತರ ಸ್ಪರ್ಧಿಗಳಿಗೆ ತಿಳಿಸಬಾರದು ಎಂಬ ಸೂಚನೆಯನ್ನೂ ನೀಡಿದ್ದರು.

ಬಿಗ್‌ ಬಾಸ್‌ ಮನೆಗೆ ರೀ ಎಂಟ್ರಿ ಕೊಟ್ಟಿರುವ ಮಂಜ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಎರಡು ಕಸದ ಚೀಲಗಳನ್ನು ಹಿಡಿದು ಮನೆಯೊಳಗೆ ಪ್ರವೇಶಿಸಿದ ಅವರು, ಮನೆಯಾದ್ಯಂತ ಕಸವನ್ನು ಚೆಲ್ಲಿ ಅವಾಂತರ ಸೃಷ್ಟಿಸಿದ್ದಾರೆ. ಅಚ್ಚುಕಟ್ಟಾಗಿದ್ದ ಮನೆಯನ್ನು ಕೆಲವೇ ಕ್ಷಣಗಳಲ್ಲಿ ಅಸ್ತವ್ಯಸ್ತಗೊಳಿಸಿ ಸ್ಪರ್ಧಿಗಳಿಗೆ ದೊಡ್ಡ ಆಘಾತ ನೀಡಿದ್ದಾರೆ.

ಸಿಹಿನಿದ್ರೆಯಿಂದ ಎದ್ದು ಕಣ್ಣುಬಿಟ್ಟ ಸ್ಪರ್ಧಿಗಳಿಗೆ ಮನೆಯ ಸ್ಥಿತಿ ಕಂಡು ದಂಗಾಗಿದ್ದಾರೆ. ಅದರಲ್ಲೂ ತಮ್ಮ ಬಟ್ಟೆಗಳನ್ನೂ ಹಾಳು ಮಾಡಿರುವ ಮಂಜನ ಕಿತಾಪತಿ ಕಂಡು ಸ್ಪರ್ಧಿಗಳು ಕಂಗಾಲಾಗಿದ್ದಾರೆ.

ಒಟ್ಟಿನಲ್ಲಿ ಮಾಡ್ರನ್‌ ಮಹಾಕವಿ ಮಂಜನ ದೀಪಾವಳಿ ಧಮಾಕಾ ದೊಡ್ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಮನೆಯೊಳಗೆ ಯಾವ ರೀತಿಯ ಹೈಡ್ರಾಮಾ ನಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X