ಅನಾಹಿತಾ ಪಾಂಡೋಲೆ
ಅನಾಹಿತಾ ಪಾಂಡೋಲೆ

ಸೈರಸ್ ಮಿಸ್ತ್ರಿ ಕಾರು ಅಪಘಾತ: ಕಾರು ಚಲಾಯಿಸುತ್ತಿದ್ದ ಡಾ. ಅನಾಹಿತಾ ಪಾಂಡೋಲೆಗೆ ಶಸ್ತ್ರಚಿಕಿತ್ಸೆ

ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸಾವನ್ನಪ್ಪಿದ ಕಾರು ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಮುಂಬೈನ ಟಾಪ್ ಸ್ತ್ರೀರೋಗತಜ್ಞೆ ಡಾ. ಅನಾಹಿತಾ ಪಾಂಡೋಲೆ ಅವರಿಗೆ ಪೆಲ್ವಿಕ್ ಸರ್ಜರಿ ಮಾಡಲಾಗಿದೆ.

ಮುಂಬೈ: ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸಾವನ್ನಪ್ಪಿದ ಕಾರು ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಮುಂಬೈನ ಟಾಪ್ ಸ್ತ್ರೀರೋಗತಜ್ಞೆ ಡಾ. ಅನಾಹಿತಾ ಪಾಂಡೋಲೆ ಅವರಿಗೆ ಪೆಲ್ವಿಕ್ ಸರ್ಜರಿ ಮಾಡಲಾಗಿದೆ.

 ಗುರುವಾರ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸೆಪ್ಟೆಂಬರ್ 4 ರಂದು ಅಪಘಾತ ಸಂಭವಿಸಿದಾಗ ಮಿಸ್ತ್ರಿ ಹಿಂಭಾಗದಲ್ಲಿ ಕುಳಿತಿದ್ರೆ,  ಸಿಲ್ವರ್ ಮರ್ಸಿಡಿಸ್ ಕಾರನ್ನು ಡಾ ಅನಾಹಿತಾ ಪಾಂಡೋಲೆ  ಓಡಿಸುತ್ತಿದ್ದರು. ಕಾರು ಅಪಘಾತದಲ್ಲಿ ಗಾಯಗೊಂಡ ಅವರ ಪತಿ ಡೇರಿಯಸ್ ಪಾಂಡೋಲ್ ಅವರು ವೈದ್ಯರ ನಿಗಾದಲ್ಲಿದ್ದು ಮತ್ತು ಸ್ಥಿರರಾಗಿದ್ದಾರೆ. ಸೆಪ್ಟೆಂಬರ್ 8 ರಂದು ಅವರಿಗೆ ಮುಂದೋಳಿನ ಸಣ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಪರಿಣಿತ ವೈದ್ಯರ ತಂಡದಿಂದ ಪೆಲ್ವಿಕ್ ಪುನರ್ನಿರ್ಮಾಣಕ್ಕಾಗಿ ಡಾ ಅನಾಹಿತಾ ಪಾಂಡೋಲ್ ಅವರನ್ನು ಇಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಸಂಕೀರ್ಣವಾಗಿದ್ದರಿಂದ  ಯುಎಸ್ಎ, ಯುಕೆ, ಯುರೋಪ್ ವೈದ್ಯರು ಸೇರಿದಂತೆ ವಿಶ್ವದಾದ್ಯಂತದ ವಿವಿಧ ತಜ್ಞರ ಬಹು ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸಿಇಒ ಡಾ ತರಂಗ್ ಗಿಯಾಂಚಂದಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲೀಡ್ಸ್ ವಿಶ್ವವಿದ್ಯಾನಿಲಯದ ಅಪಘಾತ ಮತ್ತು ಮೂಳೆ ಶಸ್ತ್ರಚಿಕಿತ್ಸಾ ವಿಭಾಗದ ಅಕಾಡೆಮಿಕ್ ವಿಭಾಗದ ಅಧ್ಯಕ್ಷರಾದ ಡಾ.ಪೀಟರ್ ವಿ ಜಿಯಾನೌಡಿಸ್ ಅವರ ಸಲಹೆ ಪಡೆಯಲಾಗಿದೆ

ಡಾ ಅನಾಹಿತಾ ಪಾಂಡೋಲ್ ಅವರು ಸಂತಾನಹೀನತೆ ನಿರ್ವಹಣೆ, ಹೆಚ್ಚಿನ ಅಪಾಯದ ಪ್ರಸೂತಿ ಮತ್ತು ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com