ಒಡಿಶಾ ಪೊಲೀಸರು, ಬಿಎಸ್ಎಫ್ ಮುಂದೆ 700 ಮಾವೋವಾದಿ ಬೆಂಬಲಿಗರು ಶರಣಾಗತಿ

ಒಡಿಶಾ-ಆಂಧ್ರಪ್ರದೇಶ ಗಡಿಯಲ್ಲಿರುವ ವಿವಿಧ ಗ್ರಾಮಗಳ ಸುಮಾರು 700 ಸಕ್ರಿಯ ಮಾವೋವಾದಿ ಬೆಂಬಲಿಗರು ಶನಿವಾರ ಮಲಕಂಗಿರಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ಬಿಎಸ್‌ಎಫ್ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಭುವನೇಶ್ವರ: ಒಡಿಶಾ-ಆಂಧ್ರಪ್ರದೇಶ ಗಡಿಯಲ್ಲಿರುವ ವಿವಿಧ ಗ್ರಾಮಗಳ ಸುಮಾರು 700 ಸಕ್ರಿಯ ಮಾವೋವಾದಿ ಬೆಂಬಲಿಗರು ಶನಿವಾರ ಮಲಕಂಗಿರಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ಬಿಎಸ್‌ಎಫ್ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲಾ ಗ್ರಾಮಗಳು ಒಡಿಶಾ-ಆಂಧ್ರ ಪ್ರದೇಶದ ಗಡಿಯಲ್ಲಿದ್ದು, ಮಾವೋವಾದಿಗಳ ಹಿಂದಿನ ಭದ್ರಕೋಟೆಯಾಗಿತ್ತು.

ಈ ಮಾವೋವಾದಿ ಬೆಂಬಲಿಗರು ಹಿಂಸಾತ್ಮಕ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದರು ಮತ್ತು ಭದ್ರತಾ ಪಡೆಗಳು ಹಾಗೂ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದರು. ಇದಲ್ಲದೆ ದಟ್ಟ ಅರಣ್ಯಗಳಲ್ಲಿ ಆಶ್ರಯ ಪಡೆದಿರುವ ಮಾವೋವಾದಿಗಳಿಗೆ ಲಾಗಿಸ್ಟಿಕ್ಸ್ ಸರಬರಾಜು ಮಾಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಶರಣಾಗಿರುವ ಉಗ್ರರು/ಬೆಂಬಲಿಗರು ಮಾವೋವಾದಿಗಳ ಉಡುಗೆಗಳು ಮತ್ತು ಪ್ರತಿಕೃತಿಗಳನ್ನು ಸುಟ್ಟು ಮಾವೋವಾದಿ ಸಿದ್ಧಾಂತದ ವಿರುದ್ಧ ತಮ್ಮ ವಿರೋಧವನ್ನು ಪ್ರದರ್ಶಿಸಿದರು. ಶರಣಾಗುವ ಮೊದಲು ಮಾಧ್ಯಮಗಳ ಮುಂದೆ 'ಮಾವೋವಾದಿ ಮುರ್ದಾಬಾದ್ ಅಮ್ ಸರ್ಕಾರ್ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿದರು.

ಹೊಸ ರಸ್ತೆಗಳು, ಸೇತುವೆಗಳು, ವೈದ್ಯಕೀಯ ಸೌಲಭ್ಯಗಳು, ಮೊಬೈಲ್ ಟವರ್‌ಗಳ ಅಳವಡಿಕೆ, ಮತ್ತು ಈ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜು ಮಾಡುವ ಯೋಜನೆಗಳಂತಹ ಸರಣಿ ಅಭಿವೃದ್ಧಿ ಕಾರ್ಯಗಳು ಈ ಹಿಂದೆ ಮಾವೋವಾದಿಗಳನ್ನು ಬೆಂಬಲಿಸುತ್ತಿದ್ದ ಜನರ ಮೇಲೆ ಪರಿಣಾಮ ಬೀರಿದೆ. ಈ ಜನರು ಮುಖ್ಯವಾಹಿನಿಗೆ ಸೇರಲು ಪಣ ತೊಟ್ಟಿದ್ದಾರೆ ಎಂದು ಬಿಎಸ್‌ಎಫ್‌ನ ಡಿಐಜಿ ಮದನ್ ಲಾಲ್ ಹೇಳಿದರು.

ಈ ವರ್ಷ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ 1,647 ಮಾವೋವಾದಿ ಬೆಂಬಲಿಗರು ಮತ್ತು ಇತರ ಸಂಘಟನೆಗಳ ಜನರು ಸೇನಾಪಡೆಗಳು ಪೊಲೀಸ್ ಮತ್ತು ಬಿಎಸ್‌ಎಫ್ ಮುಂದೆ ಶರಣಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಶರಣಾಗಲು ಇತರರ ಮೇಲೂ ಪರಿಣಾಮ ಬೀರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com