ವಾರಣಾಸಿ: ಗ್ಯಾನ್ ವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸಲು ಮನವಿ ಮಾಡಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಗುರುವಾರ ಅಂಗೀಕರಿಸಿದ್ದು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಮಸೀದಿಯ ಆಡಳಿತಕ್ಕೆ ಹೇಳಿ, ಮುಂದಿನ ವಿಚಾರಣೆಯನ್ನು ಸೆ.29 ಕ್ಕೆ ನಿಗದಿಪಡಿಸಿದೆ.
ಗ್ಯಾನ್ ವಾಪಿ ಮಸೀದಿ- ಶೃಂಗಾರ್ ಗೌರಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಯೋಗ್ಯವೆಂದು ಸೆ.12 ರಂದು ಆದೇಶ ನೀಡಿದ್ದ ಕೋರ್ಟ್ ನ ನ್ಯಾ. ಎ.ಕೆ ವಿಶೇಷ್ ಗುರುವಾರ ವಿಚಾರಣೆ ಆರಂಭಿಸಿದರು.
ಮಸೀದಿಯ ಆವರಣದಲ್ಲಿ ಇರುವ ಹಿಂದೂ ದೇವತೆಗಳ ವಿಗ್ರಹ ಅಥವಾ ಕೆತ್ತನೆಗಳಿಗೆ ಪ್ರತಿ ದಿನ ಪೂಜೆ ಸಲ್ಲಿಸಲು ಅನುಮತಿ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ಅರ್ಜಿದಾರ ಮಹಿಳೆಯ ಪರವಾಗಿ ವಾದ ಮಂಡಿಸಿರುವ ವಿಷ್ಣು ಶಂಕರ್ ಜೈನ್, ಇಂದಿನ ವಿಚಾರಣೆಯಲ್ಲಿ ಕೋರ್ಟ್ ಎದುರು ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡುವ ಮನವಿಯನ್ನಿಟ್ಟರು. ಅರ್ಜಿ ಅಂಗೀಕರಿಸಿದ ನ್ಯಾಯಾಧೀಶರು, ಸೆ.29 ಎಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
Advertisement