ಅಂಬಾಲಾ ಸೆಂಟ್ರಲ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಕೊಲೆ ಆರೋಪಿ ಆತ್ಮಹತ್ಯೆ
ಅಂಬಾಲಾ: 2019ರ ಕೊಲೆ ಪ್ರಕರಣದ ಆರೋಪಿಯಾಗಿದ್ದ 40 ವರ್ಷದ ವ್ಯಕ್ತಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದ ತನ್ನ ಬ್ಯಾರಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗೊಂಡಾ ಗ್ರಾಮದ ನಿವಾಸಿಯಾದ ಸರ್ವೇಶ್ ಸೇವಕ್ ಭಾನುವಾರ ಜೈಲಿನ ಬ್ಯಾರಕ್‌ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, 2019ರಲ್ಲಿ ಸೇವಕ್ ಕೆಲಸ ಹುಡುಕಿಕೊಂಡು ಅಂಬಾಲಾ ನಗರಕ್ಕೆ ಬಂದಿದ್ದ. ಈ ವೇಳೆ ಈಗಾಗಲೇ ವಲಸೆ ಕಾರ್ಮಿಕನಾಗಿದ್ದ ನಿಕ್ಕು ಎಂಬಾತ ವಾಸಿಸುತ್ತಿದ್ದ ಮೋಟಾರ್ ಮಾರ್ಕೆಟ್ ಪ್ರದೇಶದಲ್ಲಿ ಬಾಡಿಗೆಗೆ ಮನೆಯನ್ನು ತೆಗೆದುಕೊಂಡಿದ್ದ. ಅದೇ ವರ್ಷ ಏಪ್ರಿಲ್‌ನಲ್ಲಿ ಸೇವಕ್ ಮತ್ತು ನಿಕ್ಕು ನಡುವೆ ಕೆಲವು ವಿಚಾರಗಳಿಗೆ ಅಸಮಾಧಾನ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, 2019ರ ಏಪ್ರಿಲ್ 6 ರಂದು ಟೆರೇಸ್ ಮೇಲೆ ಮಲಗಿದ್ದಾಗ ನಿಕ್ಕುನನ್ನು ಸೇವಕ್ ಹಗ್ಗದಿಂದ ಕತ್ತು ಹಿಸುಕಿ ಕೊಂದಿದ್ದಾನೆ. ನಿಕ್ಕು ಅವರ ದೇಹವು ಹಾಸಿಗೆಯ ಕೆಳಗೆ ಬಿದ್ದಿರುವುದು ಕಂಡುಬಂದಿದೆ ಮತ್ತು ಘಟನೆಯ ನಂತರ ಸೇವಕ್ ಪರಾರಿಯಾಗಿದ್ದನು ಎಂದು ಅವರು ತಿಳಿಸಿದ್ದಾರೆ.
ಬಲಿಕ ಸೇವಕ್‌ನನ್ನು ಬಂಧಿಸಲಾಯಿತು ಮತ್ತು ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ