ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ: 50 ಸಾವಿರ ರೂ. ದಂಡ, 1 ವರ್ಷ ಜೈಲು

ಮಹತ್ವದ ಬೆಳವಣಿಗೆಯಲ್ಲಿ ಅಪರಾಧ ಪ್ರಕರಣಗಳಲ್ಲಿನ ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ನೀಡುವವರಿಗೆ 50 ಸಾವಿರ ದಂಡ,1 ವರ್ಷ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಅಪರಾಧ ಪ್ರಕರಣಗಳಲ್ಲಿನ ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ನೀಡುವವರಿಗೆ 50 ಸಾವಿರ ದಂಡ,1 ವರ್ಷ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ.

ಟೆಲಿಕಾಂ ಬಳಕೆದಾರರ ಆನ್‌ಲೈನ್ ವಂಚನೆ (Online fraud) ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ಕರಡು ಮಸೂದೆಯಲ್ಲಿ  ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಮೊಬೈಲ್ ಸಿಮ್ ಕಾರ್ಡ್ (SIM Card) ಅನ್ನು ಪಡೆಯಲು ಹಾಗೂ ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್‌ಗಳಂತಹ ಒಟಿಟಿ ಪ್ಲಾಟ್‌ಪಾರ್ಮ್‌ಗಳಲ್ಲಿ (OTT Platform) ಸೇವೆಯನ್ನು ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದರೆ ಅಂತಹವರಿಗೆ 1 ವರ್ಷದ ಜೈಲು ಹಾಗೂ 50,000 ರೂ. ದಂಡ ವಿಧಿಸಲು ಕರಡಿನಲ್ಲಿ ಅವಕಾಶವಿದೆ ಎನ್ನಲಾಗಿದೆ.

ಸೈಬರ್ ವಂಚಕರು ಅಪರಾಧವನ್ನು ಮಾಡಲು ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಾರೆ. ಈ ಮೂಲಕ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ತಮ್ಮ ಗುರುತನ್ನು ಮರೆ ಮಾಡಿ, ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಗಳಿಂದ ರಕ್ಷಿಸಲು ಭಾರತೀಯ ದೂರಸಂಪರ್ಕ ಮಸೂದೆ, 2022ರ ಕರಡು ಭಾಗವಾಗಿ ಭದ್ರತಾ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ದೂರಸಂಪರ್ಕ ಇಲಾಖೆ ಈಗ ಕರಡು ಮಸೂದೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ‌. 

ಕರಡು ಮಸೂದೆಯ ಸೆಕ್ಷನ್ 4ರ ಅಡಿಯಲ್ಲಿ ಉಪ-ವಿಭಾಗ 7ರ ಪ್ರಕಾರ, ತಪ್ಪು ಗುರುತು ನೀಡುವುದರಿಂದ 1 ವರ್ಷದ ಜೈಲು, 50,000 ರೂ. ವರೆಗೆ ದಂಡ ಹಾಗೂ ದೂರಸಂಪರ್ಕ ಸೇವೆಗಳಿಂದ ಅಮಾನತಾಗಬಹುದು. ಈ ಅಪರಾಧ ಎಸಗಿದವರನ್ನು ಪೊಲೀಸರು ಯಾವುದೇ ವಾರಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೇ ಬಂಧಿಸಬಹುದಾಗಿದೆ. 

ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಮಸೂದೆಯು ಸೈಬರ್ ಅಪರಾಧವನ್ನು ಬಹು ರಂಗಗಳಲ್ಲಿ ತಿಳಿಸುತ್ತದೆ. OTT ಗಳಲ್ಲಿ ದೃಢವಾದ ನೋ ಯುವರ್ ಕಸ್ಟಮರ್ (KYC) ಅನುಸರಣೆಯು ವಂಚನೆ ಪ್ರಮಾಣವನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com