ತೀವ್ರ ಮಳೆ, ಪ್ರವಾಹದ ಪರಿಣಾಮ 3 ವರ್ಷಗಳಲ್ಲಿ 6,000 ಮಂದಿ ಸಾವು; 59 ಸಾವಿರ ಕೋಟಿ ರೂ ನಷ್ಟ! 

ಹವಾಮಾನ ಬದಲಾವಣೆ ತೀವ್ರವಾದ ಹವಾಮಾನಗಳ ಅಪಾಯವನ್ನು ಹೆಚ್ಚಿಸುತ್ತಿದ್ದು, ಪ್ರವಾಹ, ಅತಿ ಹೆಚ್ಚು ಮಳೆಗಳಿಂದ ಕಳೆದ 3 ವರ್ಷಗಳಲ್ಲಿ 6,000 ಮಂದಿ ಸಾವನ್ನಪ್ಪಿದ್ದು, 59 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.
ಪ್ರವಾಹ (ಸಂಗ್ರಹ ಚಿತ್ರ)
ಪ್ರವಾಹ (ಸಂಗ್ರಹ ಚಿತ್ರ)
Updated on

ನವದೆಹಲಿ: ಹವಾಮಾನ ಬದಲಾವಣೆ ತೀವ್ರವಾದ ಹವಾಮಾನಗಳ ಅಪಾಯವನ್ನು ಹೆಚ್ಚಿಸುತ್ತಿದ್ದು, ಪ್ರವಾಹ, ಅತಿ ಹೆಚ್ಚು ಮಳೆಗಳಿಂದ ಕಳೆದ 3 ವರ್ಷಗಳಲ್ಲಿ 6,000 ಮಂದಿ ಸಾವನ್ನಪ್ಪಿದ್ದು, 59 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ನಷ್ಟದ ಪ್ರಮಾಣ ದೇಶದ ರಸ್ತೆ ಹಾಗೂ ಹೆದ್ದಾರಿ ವಿಭಾಗದ ಮೂಲಸೌಕರ್ಯ ಬಜೆಟ್ ನ ಮೂರನೇ ಒಂದರಷ್ಟಕ್ಕೆ ಸಮನಾಗಿದೆ. 

ಈಗ ಸಿಕ್ಕಿರುವ ಅಂಕಿ-ಅಂಶಗಳು ಶೇ.70 ರಷ್ಟು ರಾಜ್ಯಗಳಿಂದ ಮಾತ್ರವೇ ಲಭ್ಯವಾಗಿದ್ದು, ಮಹಾರಾಷ್ಟ್ರ-ತಮಿಳುನಾಡು ಸೇರಿದಂತೆ 12 ಕ್ಕೂ ಹೆಚ್ಚು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪ್ರವಾಹ ಪರಿಸ್ಥಿತಿಯಿಂದ ಉಂಟಾದ ಸಾವು, ನಷ್ಟದ ಬಗ್ಗೆ ಅಂಕಿ-ಅಂಶಗಳನ್ನು ಹಂಚಿಕೊಂಡಿಲ್ಲ. ಒಂದು ವೇಳೆ ಇಡೀ ದೇಶದ ಅಂಕಿ-ಅಂಶಗಳು ಲಭ್ಯವಾದಲ್ಲಿ ನಷ್ಟದ ಮೊತ್ತ ಇನ್ನೂ ಹೆಚ್ಚಳವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
 
ರಾಜ್ಯಗಳಿಂದ ದೃಢೀಕರಣ ಪಡೆದ ಬಳಿಕ, ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ), ಪ್ರವಾಹದಿಂದ ಉಂಟಾದ ನಷ್ಟದ ಅಂಕಿ-ಅಂಶಗಳನ್ನು ಸಿದ್ಧಪಡಿಸಿದೆ.
 
2018 ರಲ್ಲಿ 1,839 ಮಂದಿ ಸಾವನ್ನಪ್ಪಿದ್ದು, 21,849 ಕೋಟಿ ರೂಪಾಯಿ ಮೌಲ್ಯದ ಬೆಳೆಗಳು, ಮನೆ ಹಾಗೂ ಇನ್ನಿತರ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೀಡಾಗಿತ್ತು. 2020 ರಲ್ಲಿ 1365 ಮಂದಿ ಸಾವನ್ನಪ್ಪಿದ್ದರೆ, 21,190 ಕೋಟಿ ರೂಪಾಯಿ ನಷ್ಟ ಸಂಭವಿಸಿತ್ತು ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಜಲಶಕ್ತಿ ಸಚಿವಾಲ ಪ್ರತಿಕ್ರಿಯೆ ನೀಡಿದೆ. 

2030 ರ ವೇಳೆಗೆ ಕೇಂದ್ರ ಪರಿಸರ ಸಚಿವಾಲಯದ ವಲಯ ಮತ್ತು ಪ್ರಾದೇಶಿಕ ವಿಶ್ಲೇಷಣೆಯ ಮೌಲ್ಯಮಾಪನ ವರದಿಯ ಪ್ರಕಾರ ತಾಪಮಾನ ಏರಿಕೆ ಶತಮಾನದ ಕೊನೆ (2071-2100) ವೇಳೆಗೆ ಪ್ರವಾಹದಂತಹ ಪರಿಸ್ಥಿತಿಗಳನ್ನು ಹೆಚ್ಚಿಸುತ್ತದೆ. 

ಹಿಮಾಲಯದ ಪ್ರದೇಶಗಳಲ್ಲಿ ತಾಪಮಾನದಲ್ಲಿ 2030 ರ ವೇಳೆಗೆ ಶೇ.2.6 ಡಿಗ್ರಿ ಸೆಲ್ಷಿಯಸ್ ನಷ್ಟು ಏರಿಕೆಯನ್ನು ಪ್ರಕ್ಷೇಪಿಸಲಾಗಿದೆ ಹಾಗೂ ತೀವ್ರತೆ ಶೇ.2-12 ರಷ್ಟು ಏರಿಕೆಯಾಗಲಿದೆ, ತತ್ಪರಿಣಾಮವಾಗಿ ಪ್ರವಾಹದಂತಹ ಪರಿಸ್ಥಿತಿಗಳು ಭೂಕುಸಿತ ಹಾಗೂ ಕೃಷಿ ಪ್ರದೇಶಗಳ ನಷ್ಟವನ್ನು ಏರಿಕೆ ಮಾಡಲಿದ್ದು, ಆಹಾರ ಭದ್ರತೆಗೆ ಹೊಡೆತ ಬೀಳಲಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com