ಮಂಕಿಪಾಕ್ಸ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಕಾರ್ಯಪಡೆ ರಚಿಸಿದ ಕೇಂದ್ರ ಸರ್ಕಾರ 

 ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಕಾರ್ಯಪಡೆಯನ್ನು ರಚಿಸಿದೆ. 
ಮಂಕಿಪಾಕ್ಸ್ (ಸಂಗ್ರಹ ಚಿತ್ರ)
ಮಂಕಿಪಾಕ್ಸ್ (ಸಂಗ್ರಹ ಚಿತ್ರ)
Updated on

ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಕಾರ್ಯಪಡೆಯನ್ನು ರಚಿಸಿದೆ. 

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಈ ಸೋಂಕಿಗೆ ಲಸಿಕೆ ಕಂಡುಕೊಳ್ಳಲು ಡಯಾಗ್ನೋಸ್ಟಿಕ್ ಸೌಲಭ್ಯಗಳ ವಿಸ್ತರಣೆಗೆ ಸರ್ಕಾರಗಳಿಗೆ ಮಾರ್ಗದರ್ಶನವನ್ನು ಈ ಕಾರ್ಯಪಡೆ ನೀಡಲಿದೆ.

ಇದನ್ನೂ ಓದಿ: ಕೇರಳ: ಮಂಕಿಪಾಕ್ಸ್ ಕಾಯಿಲೆ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿ ಸಾವು

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ ಪೌಲ್ ನೇತೃತ್ವದ ತಂಡ ಇದಾಗಿದ್ದು, ಇದರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ, ಫಾರ್ಮಾ ಹಾಗೂ ಬಯೋಟೆಕ್ ನ  ಕಾರ್ಯದರ್ಶಿಗಳು ಇರಲಿದ್ದಾರೆ.

ಭಾರತದಲ್ಲಿ ಈ ವರೆಗೂ ನಾಲ್ಕು ಮಂಕಿಪಾಕ್ಸ್ ಸೋಂಕು ಪತ್ತೆಯಾಗಿದ್ದು, ಮೂರು ಕೇರಳದಲ್ಲಿ ಪತ್ತೆಯಾಗಿದ್ದರೆ, ದೆಹಲಿಯಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.
 
ಜಾಗತಿಕ ಮಟ್ಟದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವಂತೆ ಕೇಂದ್ರ ಸರ್ಕಾರ ಅಲರ್ಟ್ ಮೋಡ್ ನಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತು ಎಂದು ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com