ಸಿಎಂ ಹೇಮಂತ್ ಸೊರೇನ್ ವಿರುದ್ಧ ಪಿಐಎಲ್ ಹಾಕಿದ್ದ ವಕೀಲನ ಬಂಧನ!

ಭ್ರಷ್ಟಾಚಾರ ಕುರಿತು ಛತ್ತೀಸಗಢ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್ ) ಸಲ್ಲಿಸಿದ್ದ ವಕೀಲ ರಾಜೀವ್ ಕುಮಾರ್ ಎಂಬಾತನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. 
ಹೇಮಂತ್ ಸೊರೇನ್
ಹೇಮಂತ್ ಸೊರೇನ್

ಕೋಲ್ಕತ್ತಾ: ಭ್ರಷ್ಟಾಚಾರ ಕುರಿತು ಛತ್ತೀಸಗಢ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್ ) ಸಲ್ಲಿಸಿದ್ದ ವಕೀಲ ರಾಜೀವ್ ಕುಮಾರ್ ಎಂಬಾತನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. 

ಕೋಲ್ಕತ್ತಾ ಪೊಲೀಸ್ ಡಿಟೆಕ್ಟಿವ್ ಡಿಪಾರ್ಟ್ಮೆಂಟ್(ಡಿಡಿ) ಜನರಿಗೆ ಹಣ ವಂಚಿಸಿದ ಆರೋಪದ ಮೇಲೆ ರಾಜೀವ್ ಕುಮಾರ್ ನನ್ನು ಬಂಧಿಸಿದೆ. ಜಾರ್ಖಂಡ್ ಪೊಲೀಸರು ಆತನ ವಿರುದ್ಧ ವಾರಂಟ್ ಹೊರಡಿಸಿದ್ದು ಹರೇ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್‌ನಿಂದ ಅವರನ್ನು ಕರೆದೊಯ್ಯಲಾಯಿತು. ಬಂಧನ ವೇಳೆ ರಾಜೀವ್ ಕುಮಾರ್ ಬಳಿ 50 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಾಹಿತಿಯ ಪ್ರಕಾರ, ರಾಜೀವ್ ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರ ವಿರುದ್ಧ ರಾಂಚಿ ಹೈಕೋರ್ಟ್‌ನಲ್ಲಿ ಒಂದು ಪಿಐಎಲ್ ಸಲ್ಲಿಸಿದ್ದರು. ಪಿಐಎಲ್ ಹಿಂಪಡೆಯಲು 10 ಕೋಟಿ ರೂ. ಆರಂಭಿಕ ಮಾತುಕತೆಯಲ್ಲಿ 4 ಕೋಟಿಗೆ ಗೋಚಾಡಿ ಅಂತಿಮವಾಗಿ 1 ಕೋಟಿಗೆ ಒಪ್ಪಿಕೊಂಡರು. ನಿನ್ನೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಆತನ ಬಳಿ ಮೊದಲ ಕಂತಿನ 50 ಲಕ್ಷ ರೂಪಾಯಿ ಇತ್ತು ಎಂದರು. 

ರಾಜೀವ್ ತನಗೆ ಕೇಂದ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕವಿದೆ. ಅವುಗಳನ್ನು ಬಳಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿದ್ದನು. 600ಕ್ಕೂ ಹೆಚ್ಚು ಪಿಐಎಲ್‌ಗಳ ಹಿಂದೆ ಈತನ ಕೈಯಿದೆ ಎಂದು ತಿಳಿದು ಬಂದಿದೆ.

ಸಿಎಂ ಸೋರೆನ್ ವಿರುದ್ಧ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅವರಲ್ಲಿ ಒಬ್ಬರು ಸೋರೆನ್ ಗಣಿ ಖಾತೆಯನ್ನು ಹೊಂದಿದ್ದಾಗ ಸ್ವತಃ ಗಣಿಗಾರಿಕೆ ಗುತ್ತಿಗೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಇನ್ನೊಬ್ಬರು ಸೊರೆನ್‌ಗೆ ಶೆಲ್ ಕಂಪನಿಗಳು ಮತ್ತು ಮನಿ ಲಾಂಡರಿಂಗ್‌ಗೆ ಸಂಬಂಧವಿದೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com