ಕೋವಿಡ್-19: ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ, 24 ಗಂಟೆಗಳಲ್ಲಿ 27 ಜನರು ಸಾವು
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,734 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,40,50,009ಕ್ಕೆ ಏರಿಕೆಯಾಗಿದೆ. ಇದೇ ವೇಳೆ 17,897 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Published: 02nd August 2022 11:07 AM | Last Updated: 02nd August 2022 11:13 AM | A+A A-

ಪ್ರಾತಿನಿಧಿಕ ಚಿತ್ರ
ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,734 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,40,50,009ಕ್ಕೆ ಏರಿಕೆಯಾಗಿದೆ. ಇದೇ ವೇಳೆ 17,897 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮುಂಜಾನೆ 8 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಇದೇ ಅವಧಿಯಲ್ಲಿ 27 ಜನರು ಸೋಂಕಿನಿಂದ ಸಾವಿಗೀಡಾಗಿದ್ದು, ಈವರೆಗೆ 5,26,430 ಜನರು ಮೃತಪಟ್ಟಿದ್ದಾರೆ.
13,734 new COVID19 cases in India today; Active cases at 1,39,792 pic.twitter.com/NVRO566sqO
— ANI (@ANI) August 2, 2022
ಸದ್ಯ ದೇಶದಲ್ಲಿ 1,39,792 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕು ಪ್ರಕಣಗಳ ಪೈಕಿ ಶೇ 0.32ರಷ್ಟಿದೆ. ರಾಷ್ಟ್ರೀಯ ಚೇತರಿಕೆ ದರವು ಶೇ 98.49ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ದೈನಂದಿನ ಪಾಸಿಟಿವಿಟಿ ದರ ಶೇ 3.34ರಷ್ಟಿದ್ದರೆ, ವಾರದ ಪಾಸಿಟಿವಿಟಿ ದರ ಶೇ 4.79ರಷ್ಟಿದೆ. ಮರಣ ಪ್ರಮಾಣ ಶೇ 1.20ರಷ್ಟಿದೆ. ಸದ್ಯ ಈವರೆಗೆ ಒಟ್ಟು 4,33,83,787 ಜನರು ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 992 ಸೇರಿ ರಾಜ್ಯದಲ್ಲಿ 1287 ಮಂದಿಗೆ ಪಾಸಿಟಿವ್; ಇಬ್ಬರು ಸಾವು
ಲಸಿಕೆ ಅಭಿಯಾನದ ಅಡಿಯಲ್ಲಿ ಈವರೆಗೆ ದೇಶದಲ್ಲಿ 204.6 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ.