ಸುಪ್ರೀಂ ಕೋರ್ಟ್ ನಲ್ಲಿ ದಶಕದಿಂದ ಇತ್ಯರ್ಥವಾಗದ ಸುಮಾರು 10,000 ಪ್ರಕರಣ ಬಾಕಿ!

ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 71,000 ಕೇಸ್ ಗಳ ವಿಚಾರಣೆ ಬಾಕಿಯಲ್ಲಿದೆ. ಈ ಪೈಕಿ ಸುಮಾರು 10, 000 ಕೇಸ್ ಗಳು ದಶಕದಿಂದಲೂ ಇತ್ಯರ್ಥವಾಗದೆ ಹಾಗೆಯೇ ಇರುವುದಾಗಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಗುರುವಾರ ಮಾಹಿತಿ ನೀಡಿದರು.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಸುಮಾರು 71,000 ಕೇಸ್ ಗಳ ವಿಚಾರಣೆ ಬಾಕಿಯಲ್ಲಿದೆ. ಈ ಪೈಕಿ ಸುಮಾರು 10,000 ಕೇಸ್ ಗಳು ದಶಕದಿಂದಲೂ ಇತ್ಯರ್ಥವಾಗದೆ ಹಾಗೆಯೇ ಇರುವುದಾಗಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಗುರುವಾರ ಮಾಹಿತಿ ನೀಡಿದರು.

ಸುಪ್ರೀಂ ಕೋರ್ಟ್ ಮುಂದೆ ಆಗಸ್ಟ್ 2ರವರೆಗೂ ಸುಮಾರು 71,411 ಕೇಸ್ ಗಳು ಬಾಕಿಯಿದ್ದವು. ಇವುಗಳಲ್ಲಿ ಸುಮಾರು 56, 000 ನಾಗರಿಕ ವಿಷಯಗಳಾದರೆ, ಸುಮಾರು 15,000 ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದ ಕೇಸ್ ಗಳಾಗಿವೆ. ಈ ಪೈಕಿ 10,491 ಕೇಸ್ ಗಳು ದಶಕದಿಂದಲೂ ವಿಚಾರಣೆಯಾಗದೆ ಬಾಕಿ ಉಳಿದಿರುವುದಾಗಿ ಕಿರಣ್ ರಿಜಿಜು ಲಿಖಿತ ಉತ್ತರದಲ್ಲಿ ತಿಳಿಸಿದರು.

42,000 ಕೇಸ್ ಗಳು ಐದು ವರ್ಷಕ್ಕಿಂತ ಕಡಿಮೆ ವರ್ಷದಿಂದ ಬಾಕಿಯಿದ್ದರೆ 18, 134 ಕೇಸ್ ಗಳು ಐದು ಮತ್ತು 10 ವರ್ಷಗಳ ನಡುವಿನಿಂದ ಬಾಕಿ  ಉಳಿದಿವೆ ಎಂದು ಅವರು ಹೇಳಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, 2016ರವರೆಗೂ ವಿವಿಧ ಹೈಕೋರ್ಟ್ ಗಳಲ್ಲಿ 40,28,591 ಕೇಸ್ ಗಳು ಬಾಕಿಯಿದ್ದವು. ಇದೇ ವರ್ಷದ ಜುಲೈ 29ರ ವೇಳೆಗೆ ಅವುಗಳ ಸಂಖ್ಯೆ 59,55,907ಕ್ಕೆ ಅಂದರೆ ಶೇ. 50 ರಷ್ಟು ಹೆಚ್ಚಾಗಿದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿಯೂ 2016 ಮತ್ತು ಈ ವರ್ಷದ ಜುಲೈ 29 ರ ನಡುವಿನ ಅಧಿಯಲ್ಲಿ ಬಾಕಿ ಉಳಿದಿರುವ ಕೇಸ್ ಗಳ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com