ದಾವೂದ್ ಸಹಚರ ಸಲೀಂ ಖುರೇಷಿ ಆಗಸ್ಟ್ 17 ರವರೆಗೆ ಎನ್ ಐಎ ಕಸ್ಟಡಿಗೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ನಗರದ ನಿವಾಸಿ ಸಲೀಂ ಖುರೇಷಿಯನ್ನು ಆಗಸ್ಟ್ 17ರವರೆಗೂ ರಾಷ್ಟ್ರೀಯ ತನಿಖಾ ದಳದ ಕಸ್ಟಡಿಗೆ ವಿಶೇಷ ನ್ಯಾಯಾಲಯ ಶುಕ್ರವಾರ ಕಳುಹಿಸಿದೆ.
ದಾವೂದ್ ಸಹಚರ ಸಲೀಂ ಖುರೇಷಿ
ದಾವೂದ್ ಸಹಚರ ಸಲೀಂ ಖುರೇಷಿ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ನಗರದ ನಿವಾಸಿ ಸಲೀಂ ಖುರೇಷಿಯನ್ನು ಆಗಸ್ಟ್ 17ರವರೆಗೂ ರಾಷ್ಟ್ರೀಯ ತನಿಖಾ ದಳದ ಕಸ್ಟಡಿಗೆ ವಿಶೇಷ ನ್ಯಾಯಾಲಯ ಶುಕ್ರವಾರ ಕಳುಹಿಸಿದೆ.

ಎನ್ ಐಎ ಪ್ರಕಾರ, ಸಲೀಂ ಫ್ರೂಟ್ ಎಂದು ಹೆಸರಾಗಿದ್ದ ಖುರೇಷಿ ಚೋಟಾ ಶಕೀಲ್ ನ ಆಪ್ತ ಸಹಚರನಾಗಿದ್ದ ಎನ್ನಲಾಗಿದೆ. ಖುರೇಷಿಯನ್ನು ಗುರುವಾರ ಬಂಧಿಸಲಾಗಿತ್ತು. ಇಂದು  ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.  ಶಕೀಲ್ ಹೆಸರಿನಲ್ಲಿ ಆಸ್ತಿ, ಡೀಲಿಂಗ್, ಡಿ ಕಂಪನಿಯ ಉಗ್ರ ಚಟುವಟಿಕೆಗಾಗಿ ಹಣಕಾಸು ಸಂಗ್ರಹಣೆ ಸೇರಿದಂತೆ ಅಪಾರ ಪ್ರಮಾಣದ ಹಣ ಸುಲಿಗೆಯನ್ನು ಖುರೇಷಿ ಪ್ರಮುಖ ಪಾತ್ರ ವಹಿಸಿದ್ದು, 15 ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕೆಂದು ಕೇಂದ್ರೀಯ ತನಿಖಾ ತಂಡ ಕೋರಿತು.

ದಾವೋದ್ ಇಬ್ರಾಹಿಂ ಮತ್ತು ಆತನ ಸಹಚರರಿಂದ ಲಷ್ಕರ್ -ಇ- ತೊಯ್ಬಾ, ಜೈಸ್ -ಇ-ಮೊಹಮ್ಮದ್ ಮತ್ತಿತರ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ಸಹಯೋಗದೊಂದಿಗೆ ಕೆಲಸ ಮತ್ತು ಹಣ ವರ್ಗಾವಣೆ, ಕಳ್ಳ ಸಾಗಣೆ, ಉಗ್ರ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಜೆನ್ಸಿ ಫೆಬ್ರವರಿ 3 ರಂದು ಕೇಸ್ ದಾಖಲಿಸಿತ್ತು.

ಮೇ ತಿಂಗಳಲ್ಲಿ ಮುಂಬೈ ನಗರದಾದ್ಯಂತ 29 ಕಡೆಗಳಲ್ಲಿ ದಾಳಿ ನಡೆಸಿ, ಅಕ್ರಮ ಆಸ್ತಿಗೆ ಸಂಬಂಧಿಸಿಂತೆ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ತಿಳಿಸಿತು. ದಾವೋದ್ ಗ್ಯಾಂಗ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಡವಲಪರ್ಸ್ ಗಳನನ್ನು ಹೆದರಿಸುತ್ತಿದ್ದ ಖುರೇಷಿ ಅವರಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಎಂದು ಎನ್ ಐಎ ಹೇಳಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com