ಇಸ್ರೊದ SSLV-D1/EOS-02 ಮಿಷನ್: ಮೊದಲ ಹಂತದ ಉಡಾವಣೆ ಪೂರ್ಣ, ಟರ್ಮಿನಲ್ ಹಂತದಲ್ಲಿ ಡೇಟಾ ನಷ್ಟ

ಇಸ್ರೊ ಸಂಸ್ಥೆಯ ಚೊಚ್ಚಲ ಸಣ್ಣ ಉಪಗ್ರಹ ಉಡಾವಣಾ ವಾಹಕ(SSLV) ಟರ್ಮಿನಲ್ ಹಂತದಲ್ಲಿ ಡೇಟಾ ಕಳೆದುಕೊಂಡಿದ್ದು ಅದಕ್ಕೆ ಮೊದಲು ಮೂರು ಹಂತಗಳಲ್ಲಿ ಉತ್ತಮವಾಗಿ ಪ್ರದರ್ಶನ ತೋರಿ ವಾಹಕದಿಂದ ಕಕ್ಷೆಗೆ ಬೇರ್ಪಟ್ಟಿತು ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
ಭಾರತದ ಹೊಚ್ಚಹೊಸ ರಾಕೆಟ್ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ-ಡಿ1) ವನ್ನು ಭೂ ವೀಕ್ಷಣಾ ಉಪಗ್ರಹ-02 (ಇಒಎಸ್-02) ನೊಂದಿಗೆ ಈ ಹಿಂದೆ ಮೈಕ್ರೋಸ್ಯಾಟಲೈಟ್-2 ಎಂದು ಕರೆಯಲಾಗುತ್ತಿತ್ತು
ಭಾರತದ ಹೊಚ್ಚಹೊಸ ರಾಕೆಟ್ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ-ಡಿ1) ವನ್ನು ಭೂ ವೀಕ್ಷಣಾ ಉಪಗ್ರಹ-02 (ಇಒಎಸ್-02) ನೊಂದಿಗೆ ಈ ಹಿಂದೆ ಮೈಕ್ರೋಸ್ಯಾಟಲೈಟ್-2 ಎಂದು ಕರೆಯಲಾಗುತ್ತಿತ್ತು

ಶ್ರೀಹರಿಕೋಟ: ಇಸ್ರೊ ಸಂಸ್ಥೆಯ ಚೊಚ್ಚಲ ಸಣ್ಣ ಉಪಗ್ರಹ ಉಡಾವಣಾ ವಾಹಕ(SSLV) ಟರ್ಮಿನಲ್ ಹಂತದಲ್ಲಿ ಡೇಟಾ ಕಳೆದುಕೊಂಡಿದ್ದು ಅದಕ್ಕೆ ಮೊದಲು ಮೂರು ಹಂತಗಳಲ್ಲಿ ಉತ್ತಮವಾಗಿ ಪ್ರದರ್ಶನ ತೋರಿ ವಾಹಕದಿಂದ ಕಕ್ಷೆಗೆ ಬೇರ್ಪಟ್ಟಿತು ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.

ಸದ್ಯ ವಾಹಕ ಮತ್ತು ಉಪಗ್ರಹ ಎಲ್ಲಿದೆ ಯಾವ ಸ್ಥಿತಿಯಲ್ಲಿದೆ ಎಂದು ಇಸ್ರೊ ವಿಶ್ಲೇಷಣೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎಸ್ಎಸ್ ಎಲ್ ವಿ-ಡಿ1/ಇಒಎಸ್ 02 ಇಂದು ಬೆಳಗ್ಗೆ ಸ್ಥಳೀಯ ಕಾಲಮಾನ 9.18ಕ್ಕೆ ಭೂ ವೀಕ್ಷಣಾ ಉಪಗ್ರಹ ಮತ್ತು ವಿದ್ಯಾರ್ಥಿ ಉಪಗ್ರಹವನ್ನು ಹೊತ್ತೊಯ್ದಿತ್ತು. ಎಲ್ಲಾ ಹಂತಗಳು ನಿರೀಕ್ಷೆಯಂತೆಯೇ ಕೆಲಸ ಮಾಡಿದ್ದವು.

ಮೊದಲ ಹಂತ, ಎರಡನೇ ಹಂತ, ಮೂರನೇ ಹಂತ ಸಹ ನಿರ್ವಹಿಸಿ ಪ್ರತ್ಯೇಕವಾಗಿವೆ. ಕಾರ್ಯಾಚರಣೆಯ ಟರ್ಮಿನಲ್ ಹಂತದಲ್ಲಿ, ಕೆಲವು ಡೇಟಾ ನಷ್ಟ ಸಂಭವಿಸುತ್ತಿದೆ. ನಾವು ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ ಉಪಗ್ರಹ ಮತ್ತು ವಾಹಕದ ಕಾರ್ಯಕ್ಷಮತೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡುತ್ತೇವೆ. ಉಡಾವಣಾ ವಾಹನವು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಮೇಲಕ್ಕೆತ್ತಿದ ನಿಮಿಷಗಳ ನಂತರ ಇಲ್ಲಿನ ಮಿಷನ್ ಕಂಟ್ರೋಲ್ ಸೆಂಟರ್‌ನಿಂದ ಇಸ್ರೊ ಅಧ್ಯಕ್ಷ ಸೋಮನಾಥ್ ಹೇಳಿದರು.

ಸ್ಥಿರ ಕಕ್ಷೆಯನ್ನು ಸಾಧಿಸಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಯ ಅಂತಿಮ ಫಲಿತಾಂಶವನ್ನು ತೀರ್ಮಾನಿಸಲು ನಾವು ಪ್ರಸ್ತುತ ಡೇಟಾವನ್ನು ವಿಶ್ಲೇಷಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

EOS02 ಭೂಮಿಯ ವೀಕ್ಷಣಾ ಉಪಗ್ರಹವಾಗಿದೆ. ಇದು 10 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಕೆಲಸ ಮಾಡಲಿದೆ. ಇದರ ತೂಕ 142 ಕೆ.ಜಿ. ಇದು ಮಧ್ಯಮ ಮತ್ತು ದೀರ್ಘ ತರಂಗಾಂತರದ ಇನ್ಫಾರೇಡ್ ಕ್ಯಾಮೆರಾವನ್ನು ಹೊಂದಿದೆ. ಇದರ ರೆಸಲ್ಯೂಶನ್ 6 ಮೀಟರ್ ಹೊಂದಿದೆ. ಅಂದರೆ, ಇದು ರಾತ್ರಿಯೂ ಸಹ ನಿಗಾ ಇಡಬಲ್ಲದು. AzaadiSAT ಉಪಗ್ರಹಗಳು SpaceKidz ಇಂಡಿಯಾ ಹೆಸರಿನ ಸ್ಥಳೀಯ ಖಾಸಗಿ ಸ್ಪೇಸ್ ಏಜೆನ್ಸಿಯ ವಿದ್ಯಾರ್ಥಿಗಳ ಉಪಗ್ರಹವಾಗಿದೆ. ದೇಶದ 750 ಮಂದಿ ವಿದ್ಯಾರ್ಥಿನಿಯರು ಸೇರಿ ಇದನ್ನು ತಯಾರಿಸಿದ್ದಾರೆ.

ಪಿಎಸ್ಎಲ್‌ವಿ ಹಾಗೂ ಎಸ್ಎಸ್ಎಲ್‌ವಿ ವ್ಯತ್ಯಾಸ :

ಪಿಎಸ್ಎಲ್‌ವಿ (PSLV) ಅಂದರೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 44 ಮೀಟರ್ ಉದ್ದ ಮತ್ತು 2.8 ಮೀಟರ್ ವ್ಯಾಸದ ರಾಕೆಟ್ ಆಗಿದೆ. ಆದರೆ, SSLV ಯ ಉದ್ದ 34 ಮೀಟರ್. ಇದರ ವ್ಯಾಸವು 2 ಮೀಟರ್. PSLV ನಾಲ್ಕು ಹಂತಗಳನ್ನು ಹೊಂದಿದೆ. ಆದರೆ SSLV ಕೇವಲ ಮೂರು ಹಂತಗಳನ್ನು ಹೊಂದಿದೆ. ಪಿಎಸ್‌ಎಲ್‌ವಿ ತೂಕ 320 ಟನ್‌ಗಳಾಗಿದ್ದರೆ, ಎಸ್‌ಎಸ್‌ಎಲ್‌ವಿಯ ತೂಕ 120 ಟನ್. ಪಿಎಸ್‌ಎಲ್‌ವಿ 1750 ಕೆಜಿ ತೂಕದ ಪೇಲೋಡ್ ಅನ್ನು 600 ಕಿಮೀ ದೂರಕ್ಕೆ ಸಾಗಿಸಬಲ್ಲದು. ಎಸ್‌ಎಸ್‌ಎಲ್‌ವಿ 10 ರಿಂದ 500 ಕೆ.ಜಿ ತೂಕದ ಪೇಲೋಡ್‌ಗಳನ್ನು 500 ಕಿ.ಮೀ ದೂರಕ್ಕೆ ಸಾಗಿಸಬಲ್ಲದು. 60 ದಿನಗಳಲ್ಲಿ ಪಿಎಸ್‌ಎಲ್‌ವಿ ಸಿದ್ಧವಾದರೆ, SSLV ಕೇವಲ 72 ಗಂಟೆಗಳಲ್ಲಿ ಸಜ್ಜುಗೊಳಿಸಲಾಗುತ್ತದೆ.

SSLV ಎಂದರೇನು (SSLV ರಾಕೆಟ್ ಎಂದರೇನು?)
SSLVಯ ಪೂರ್ಣ ರೂಪವು ಸಣ್ಣ ಉಪಗ್ರಹ ಉಡಾವಣಾ ವಾಹನವಾಗಿದೆ. ಅಂದರೆ, ಈಗ ಈ ರಾಕೆಟ್ ಅನ್ನು ಸಣ್ಣ ಉಪಗ್ರಹಗಳ ಉಡಾವಣೆಗಾಗಿ ಬಳಸಲಾಗುತ್ತದೆ. ಇದು ಸಣ್ಣ-ಲಿಫ್ಟ್ ಉಡಾವಣಾ ವಾಹನವಾಗಿದ್ದು, ಇದರ ಮೂಲಕ 500 ಕೆಜಿವರೆಗಿನ ಉಪಗ್ರಹಗಳನ್ನು ಕೆಳ ಕಕ್ಷೆಗೆ ಅಂದರೆ 500 ಕಿಮೀಗಿಂತ ಕೆಳಗಿರುವ ಅಥವಾ 300 ಕೆಜಿ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಯಲ್ಲಿರುವ ಸನ್ ಸಿಂಕ್ರೊನಸ್ ಆರ್ಬಿಟ್‌ಗೆ ಕಳುಹಿಸಲಾಗುತ್ತದೆ.

ಭವಿಷ್ಯದಲ್ಲಿ SSLV ಗಾಗಿ ಪ್ರತ್ಯೇಕ ಲಾಂಚ್ ಪ್ಯಾಡ್
ಪ್ರಸ್ತುತ, SSLV ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಲಾಂಚ್ ಪ್ಯಾಡ್ 1 ರಿಂದ ಉಡಾವಣೆ ಮಾಡಲಾಗುತ್ತಿದೆ. ಆದರೆ ಸ್ವಲ್ಪ ಸಮಯದ ನಂತರ, ಈ ರಾಕೆಟ್ ಉಡಾವಣೆಗಾಗಿ ಪ್ರತ್ಯೇಕ ಸಣ್ಣ ಉಪಗ್ರಹ ಉಡಾವಣಾ ಸಂಕೀರ್ಣವನ್ನು (SSLC) ಇಲ್ಲಿ ಸ್ಥಾಪಿಸಲಾಗುತ್ತದೆ. ಇದಾದ ನಂತರ ತಮಿಳುನಾಡಿನ ಕುಲಶೇಖರಪಟ್ಟಣದಲ್ಲಿ ಹೊಸ ಬಾಹ್ಯಾಕಾಶ ಬಂದರು ನಿರ್ಮಾಣವಾಗುಲಿದ್ದು, ಅಲ್ಲಿಂದ ಎಸ್‌ಎಸ್‌ಎಲ್‌ವಿ ಉಡಾವಣೆ ಮಾಡಲಾಗುವುದು.

ನಮಗೆ SSLV ರಾಕೆಟ್ ಏಕೆ ಬೇಕು?
ಸಣ್ಣ ಉಪಗ್ರಹಗಳು ಉಡಾವಣೆಗೊಳ್ಳಲು ಹೆಚ್ಚು ಕಾಯಬೇಕಾಗುತ್ತದೆ. ಹೀಗಾಗಿ ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್‌ಎಸ್‌ಎಲ್‌ವಿ) ಅಗತ್ಯವಿತ್ತು. ಇವುಗಳನ್ನು ದೊಡ್ಡ ಉಪಗ್ರಹಗಳೊಂದಿಗೆ ಸ್ಪೇಸ್‌ಬಸ್ ಅನ್ನು ಜೋಡಿಸಿ ಕಳುಹಿಸಬೇಕಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಣ್ಣ ಉಪಗ್ರಹಗಳ ಉಡಾವಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಇಂತಹವುಗಳ ಉಡಾವಣೆಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಇಸ್ರೋ ಈ ಹೊಸ ಹೆಜ್ಜೆ ಇರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com