ಸ್ವಾರಸ್ಯಕರ, ಒನ್ ಲೈನರ್ ನೆನೆದು ಉಪರಾಷ್ಟ್ರಪತಿ ನಾಯ್ಡುಗೆ ರಾಜ್ಯಸಭೆಯಲ್ಲಿ ಬೀಳ್ಕೊಡುಗೆ: ಪ್ರಧಾನಿಯಿಂದ ವಂದನಾರ್ಪಣೆ

ಸದನದ ಒಳಗೆ ಹಾಗೂ ಹೊರಗೆ ಚಮತ್ಕಾರಭರಿತವಾಗಿ, ಸ್ವಾರಸ್ಯಕರ ಒನ್ ಲೈನರ್ ಗಳನ್ನು ಭಾಷಣದಲ್ಲಿ ಮೂಡಿಸುತ್ತಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಅವಧಿ ಪೂರ್ಣಗೊಳಿಸಿ ಆ.10 ರಂದು ನಿವೃತ್ತರಾಗುತ್ತಿದ್ದಾರೆ. 
ಪ್ರಧಾನಿ ಮೋದಿ- ವೆಂಕಯ್ಯ ನಾಯ್ಡು
ಪ್ರಧಾನಿ ಮೋದಿ- ವೆಂಕಯ್ಯ ನಾಯ್ಡು

ನವದೆಹಲಿ: ಸದನದ ಒಳಗೆ ಹಾಗೂ ಹೊರಗೆ ಚಮತ್ಕಾರಭರಿತವಾಗಿ, ಸ್ವಾರಸ್ಯಕರ ಒನ್ ಲೈನರ್ ಗಳನ್ನು ಭಾಷಣದಲ್ಲಿ ಮೂಡಿಸುತ್ತಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಅವಧಿ ಪೂರ್ಣಗೊಳಿಸಿ ಆ.10 ರಂದು ನಿವೃತ್ತರಾಗುತ್ತಿದ್ದಾರೆ. 

ರಾಜ್ಯಸಭೆಯ ಸಭಾಧ್ಯಕ್ಷರೂ ಆಗಿರುವ ವೆಂಕಯ್ಯ ನಾಯ್ಡು ಅವರಿಗೆ ಸದನ ಆತ್ಮೀಯ ಬೀಳ್ಕೊಡುಗೆ ನೀಡಿತು. 

ಪ್ರಧಾನಿ ನರೇಂದ್ರ ಮೋದಿ ವೆಂಕಯ್ಯ ನಾಯ್ಡು ಅವರ ಚಮತ್ಕಾರಭರಿತ, ಸ್ವಾರಸ್ಯಕರ ಒನ್ ಲೈನರ್ ಗಳನ್ನು ನೆನೆದು, ಅವರ ಅವಧಿಯಲ್ಲಿ ಸದನದ ಉತ್ಪಾದಕತೆ ಶೇ.70ಕ್ಕೆ ಏರಿಕೆಯಾಗಿರುವುದನ್ನು ಸ್ಮರಿಸಿದರು.
 
"ರಾಜ್ಯಸಭೆಯಲ್ಲಿ ವಂದನಾರ್ಪಣೆ ಮಾಡಿದ ಪ್ರಧಾನಿ ಮೋದಿ, ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿಗಳು ಸಂವಾದವನ್ನು ಉತ್ತೇಜಿಸಿದರು, ಅವರು ತಮ್ಮ ಉತ್ತರಾಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತಹ ಗುಣಮಟ್ಟ ಮತ್ತು ಪರಂಪರೆಯನ್ನು ಕೊಡುಗೆಯಾಗಿ ನೀಡಿದ್ದಾರೆ" ಎಂದು ಮೋದಿ ಹೇಳಿದ್ದಾರೆ.

ಸದನದ ಕಾರ್ಯನಿರ್ವಹಣೆಗೆ ಒಂದು ಮಿತಿಯನ್ನೂ ದಾಟಿ ಅಡ್ಡಿಪಡಿಸುವುದು ಸದನದ ಅವಹೇಳನ ಎಂಬ ಅಭಿಪ್ರಾಯವನ್ನು ನಾಯ್ಡು ಅವರು ಹೊಂದಿದ್ದರು, ಸರ್ಕಾರ ಪ್ರಸ್ತಾವಿಸಲಿ, ವಿಪಕ್ಷಗಳು ಪ್ರತಿಭಟಿಸಲು, ಸದನ ಯಶಸ್ವಿಯಾಗಿ ಪೂರ್ತಿಯಾಗಲಿ ಎಂಬ ತತ್ವದ ಆಧಾರದಲ್ಲಿ ವೆಂಕಯ್ಯ ನಾಯ್ಡು ಕಾರ್ಯನಿರ್ವಹಿಸಿದ್ದರು ಎಂದು ಮೋದಿ ಹೇಳಿದ್ದಾರೆ. 

ಉಪರಾಷ್ಟ್ರಪತಿಗಳು ಭಾರತೀಯ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ಮಾತೃಭಾಷೆಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದರು ಎಂದು ಮೋದಿ ಸ್ಮರಿಸಿದ್ದಾರೆ. 

ವೆಂಕಯ್ಯ ನಾಯ್ಡು ಅವರೊಂದಿಗೆ ದೀರ್ಘ ಅವಧಿಯಿಂದಲೂ ಕೆಲಸ ಮಾಡಿದ್ದೇನೆ. ಅವರು ವಿವಿಧ ಹುದ್ದೆಗಳನ್ನು ಸಮರ್ಪಣೆಯಿಂದ ನಿರ್ವಹಿಸಿದ್ದನ್ನು ಕಂಡಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಹಾಗೂ ವೆಂಕಯ್ಯ ನಾಯ್ಡು ಅವರ ನಡುವಿನ ಒಡನಾಟವನ್ನು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com