ಬಿಹಾರದಲ್ಲಿ ಮಹಾಘಟಬಂಧನ್ 2.0: ನಿತೀಶ್ ನೂತನ ಸರ್ಕಾರದಲ್ಲಿ ತೇಜಸ್ವಿ ಯಾದವ್ ಡಿಸಿಎಂ?

ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಮಹಾಘಟಬಂಧನ್ ಮೂಲಕ ಹೊಸ ಸರ್ಕಾರ ರಚಿಸಲು ಮುಂದಾಗಿದ್ದಾರೆ.
ತೇಜಸ್ವಿ ಯಾದವ್-ನಿತೀಶ್ ಕುಮಾರ್
ತೇಜಸ್ವಿ ಯಾದವ್-ನಿತೀಶ್ ಕುಮಾರ್

ಪಾಟ್ನಾ: ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಮಹಾಘಟಬಂಧನ್ ಮೂಲಕ ಹೊಸ ಸರ್ಕಾರ ರಚಿಸಲು ಮುಂದಾಗಿದ್ದಾರೆ.

ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳ ನಡುವಿನ ಮೊದಲ ಮೈತ್ರಿ ಮುರಿದು ಬಿದ್ದ ಸ್ಥಳದಲ್ಲಿ ಮಹಾಘಟಬಂಧನ್ 2.0 ಪ್ರಾರಂಭವಾಗಲಿದೆ ಎಂದು ಲಾಲು ಯಾದವ್ ಪಕ್ಷದ ಮೂಲಗಳು ಸೂಚಿಸಿವೆ. ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಮರಳಲಿದ್ದಾರೆ ಮತ್ತು ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಅವರು ಸಂಪುಟದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯೊಂದಿಗಿನ ನಿತೀಶ್ ಕುಮಾರ್ ಅವರ ವಿಘಟನೆಯನ್ನು ರಕ್ತರಹಿತ ದಂಗೆ ಎಂದು ಬಣ್ಣಿಸಲಾಗಿದ್ದರೂ, ಸರ್ಕಾರದ ವಿಭಜನೆಯ ಹಾದಿ ಮತ್ತು ಮುಂದಿನ ಸರ್ಕಾರದ ವಿವರಗಳನ್ನು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ರೂಪಿಸಲಾಗುತ್ತಿತ್ತು ಎಂದು ಮೂಲಗಳು ಸೂಚಿಸಿವೆ.

ಮೇ ತಿಂಗಳಲ್ಲಿ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಅವರ ಮನೆಗೆ ಇಫ್ತಾರ್ ಕೂಟಕ್ಕಾಗಿ ಸೇರಿದಾಗಲೇ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಬೀಳುವ ಲಕ್ಷಣಗಳು ಗೋಚರವಾಗಿದ್ದವು.  ಅದರ ನಂತರ ನಿತೀಶ್ ಕುಮಾರ್ ಅವರ ಇಫ್ತಾರ್ ಕೂಟದಲ್ಲಿ ತೇಜಸ್ವಿ ಯಾದವ್ ಭಾಗಿಯಾದ ಬಳಿಕ ರಾಜಕೀಯ ಅಂಗಳದಲ್ಲಿ ಇಬ್ಬರ ಭೇಟಿಯ ಚರ್ಚೆ ಜೋರಾಯಿತು.

ಇಂದು ಸಂಜೆ 4 ಗಂಟೆಗೆ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು ಹೊಸ ಸರ್ಕಾರ ರಚನೆಯಲ್ಲಿ ಯಾರಿರಲಿದ್ದಾರೆ ಎಂಬುದು ಗೊತ್ತಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com