'ಜೈ ಭೀಮ್' ವಿವಾದ: ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧದ ಎಫ್ ಐಆರ್ ರದ್ದುಪಡಿಸಿದ ಹೈಕೋರ್ಟ್ 

ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್ ಸಮುದಾಯವನ್ನು ತಪ್ಪಾಗಿ ತೋರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸೂರ್ಯ ಕುಮಾರ್ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾದ ಎಫ್ ಐಆರ್ ನ್ನು  ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ಜೈಭೀಮ್ ಚಿತ್ರದಲ್ಲಿ ನಟ ಸೂರ್ಯ
ಜೈಭೀಮ್ ಚಿತ್ರದಲ್ಲಿ ನಟ ಸೂರ್ಯ

ಚೆನ್ನೈ: ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್  ಸಮುದಾಯವನ್ನು ತಪ್ಪಾಗಿ ತೋರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸೂರ್ಯ ಕುಮಾರ್ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾದ ಎಫ್ ಐಆರ್ ನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.

ಇವರಿಬ್ಬರೂ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಸಂತೋಷ್ ಕುಮಾರ್ ಈ ತೀರ್ಪು ಪ್ರಕಟಿಸಿದ್ದು, ಎಫ್ ಐಆರ್ ರದ್ದುಪಡಿಸಿದ್ದಾರೆ. ಚಿತ್ರದಲ್ಲಿ ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ನಗರದ ಚೆನ್ನೈ ಮೂಲದ ವಕೀಲ ಕೆ. ಸಂತೋಷ್ ಮೆಟ್ರೋಪಾಲಿಯನ್ ಮ್ಯಾಜಿಸ್ಟ್ರೇಟ್ ಮೆಟ್ಟಿಲೇರಿದ್ದರು.

ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ  ಮೇ 6 ರಂದು ಆದೇಶ ಹೊರಡಿಸಿತ್ತು. ನಂತರ ವೆಲಾಚೇರಿ ಪೊಲೀಸರು ಮೇ 17 ರಂದು ಸೂರ್ಯ ಮತ್ತು ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ. ಚಂದ್ರು ಅವರು ವಕೀಲರಾಗಿದ್ದಾಗ ನಡೆಸಿದ ಕೇಸ್ ವೊಂದರ ಆಧಾರದ ಮೇಲೆ ಈ ಸಿನಿಮಾ ಮಾಡಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಕೆ ಚಂದ್ರು, ಮಾಜಿ ಐಪಿಪಿ ಪೆರುಮಾಳ ಸ್ವಾಮಿ ಹೆಸರು ಹೊರತುಪಡಿಸಿದರೆ ಉಳಿದ ಎಲ್ಲಾ ಪಾತ್ರಗಳ ಹೆಸರುಗಳನ್ನು ಬದಲಾಯಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com