'ಬ್ಲ್ಯಾಕ್ ಮ್ಯಾಜಿಕ್' ಬಗ್ಗೆ ಮಾತನಾಡಿ ಪ್ರಧಾನಿ ಹುದ್ದೆ ಗೌರವ ಕಳೆಯಬೇಡಿ: ಮೋದಿಗೆ ರಾಹುಲ್ ಗಾಂಧಿ ತಿರುಗೇಟು!

ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಮಾತನಾಡಿ ಪ್ರಧಾನಿ ಹುದ್ದೆಯ ಗೌರವ ಕಳೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಮಾತನಾಡಿ ಪ್ರಧಾನಿ ಹುದ್ದೆಯ ಗೌರವನ್ನು ಕಳೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ರಾಷ್ಟ್ರದಲ್ಲಿನ ಬೆಲೆ ಏರಿಕೆ ಅಥವಾ ನಿರುದ್ಯೋಗ ಪರಿಸ್ಥಿತಿ ಕಾಣಿಸುತ್ತಿಲ್ಲವೇ? ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. ಪ್ರಧಾನಿಯಾದವರು ಪ್ರಜೆಗಳ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದು ರಾಷ್ಟ್ರ ಬಯಸುತ್ತದೆ.

'ಪ್ರಧಾನ ಮಂತ್ರಿ ಅವರೇ ನಿಮ್ಮ ಕರಾಳತನವನ್ನು ಮುಚ್ಚಿಕೊಳ್ಳಲು 'ಬ್ಲ್ಯಾಕ್ ಮ್ಯಾಜಿಕ್' ಬಗ್ಗೆ ಮಾತನಾಡುತ್ತ ರಾಷ್ಟ್ರದ ಜನತೆಯ ದಾರಿ ತಪ್ಪಿಸುವುದನ್ನು ನಿಲ್ಲಿಸಿ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಪ್ರಧಾನಿ ಹುದ್ದೆಯ ಗೌರವ ಕಳೆಯುವುದನ್ನು ನಿಲ್ಲಿಸಿ' ಎಂದು ರಾಹುಲ್‌ ಆಗ್ರಹಿಸಿದ್ದಾರೆ.

‘ಆಗಸ್ಟ್ 5 ರಂದು ಬ್ಲ್ಯಾಕ್ ಮ್ಯಾಜಿಕ್ ಮಾಡುವ ಪ್ರಯತ್ನವನ್ನು ನಾವು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರೆ ತಮ್ಮ ಹತಾಶೆ ಅವಧಿ ಮುಗಿಯಲಿದೆ ಎಂದು ಕಾಂಗ್ರೆಸ್ ನವರು ತಿಳಿದುಕೊಂಡಿದ್ದಾರೆ. ಆದರೆ ಅವರು ಎಷ್ಟೇ ಅಬ್ಬರಿಸಿದರೂ, ಎಷ್ಟೇ ಮ್ಯಾಜಿಕ್ ಮಾಡಿದ್ರೂ, ಸಾರ್ವಜನಿಕರ ವಿಶ್ವಾಸವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿತಿಲ್ಲ ಎಂದು ಪ್ರಧಾನಿ ಮೋದಿ ಟೀಕಿಸಿದ್ದರು.

ಕಪ್ಪು ಬಟ್ಟೆ ಧರಿಸಿದರೆ ಅವರ ಕೆಟ್ಟ ದಿನಗಳು ಕೊನೆಯಾಗುತ್ತವೆ ಎಂದು ಭಾವಿಸಿಕೊಂಡಿದ್ದಾರೆ. ಆದರೆ, ಅಂತಹ ಕೃತ್ಯಗಳಿಗೆ, ಮೌಢ್ಯಗಳಿಗೆ ಮೊರೆ ಹೋಗುವುದರಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ' ಎಂದಿದ್ದರು.

ಬೆಲೆ ಏರಿಕೆ ವಿರುದ್ಧ ಆಗಸ್ಟ್‌ 5ರಂದು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರು. ಪಾಣಿಪತ್‌ನಲ್ಲಿ 909 ಕೋಟಿ ರೂಪಾಯಿ ವೆಚ್ಚದಲ್ಲಿ 35 ಎಕರೆ ಪ್ರದೇಶದಲ್ಲಿ ಎರಡನೇ ತಲೆಮಾರಿನ (2ಜಿ) ಎಥೆನಾಲ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com