ಮುಸ್ಲಿಮ್ ಕಾನೂನು ಬಹುತೇಕ ಕುರಾನ್ ಆಧಾರಿತವಲ್ಲ: ಸಲ್ಮಾನ್ ರಶ್ದಿ ದಾಳಿ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್
ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ನಡೆದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Published: 14th August 2022 04:39 AM | Last Updated: 14th August 2022 04:43 AM | A+A A-

ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್
ತಿರುವನಂತಪುರಂ: ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯ ಬಗ್ಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ನಡೆದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ದಿ ಮೇಲಿನ ಮಾರಣಾಂತಿಕ ದಾಳಿ ಕುರಾನ್ ನ ಬೋಧನೆಗಳಿಗೆ ವಿರುದ್ಧವಾಗಿದೆ ಆದರೆ ಇಂತಹ ದಾಳಿಗಳಿಗೆ ಅವಕಾಶ ನೀಡುವ ಕಾನೂನುಗಳಿಗೆ ಮುಸ್ಲಿಂ ಕಾನೂನು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ದಿಯೋಬಂದ್ ಹಾಗೂ ನದ್ವಾತುಲ್ ಉಲೇಮಾದಂತಹ ಪ್ರಮುಖ ಮದರಸಾಗಳಲ್ಲಿನ ಪಠ್ಯ ಕ್ರಮದ ಭಾಗವಾಗಿವೆ ಎಂದು ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ರಶ್ದಿ ಜೀವಂತ, ಪರಿಸ್ಥಿತಿ ಮೇಲ್ವಿಚಾರಣೆ: ನ್ಯೂಯಾರ್ಕ್ ಗವರ್ನರ್
ಇಸ್ಲಾಮ್ ಹೆಸರಿನಲ್ಲಿ ಏನೇ ನಡೆದರೂ ಅದಕ್ಕೆ ಪುಸ್ತಕದ ಅನುಮೋದನೆ ಇರಬೇಕು, ಈಗ ನಡೆಯುತ್ತಿರುವುದು ಮುಸ್ಲಿಮ್ ಸಾಮ್ರಾಜ್ಯದ ಅವಧಿಯಲ್ಲಿ ಬಂದಂತಹ ಕಾನೂನಿಗೆ ಅನುಗುಣವಾಗಿದೆ ಆದರೆ ನಡೆಯುತ್ತಿರುವುದೆಲ್ಲಾ ದೇವ ವಿಶ್ವಾಸಿಗಳಿಗೆ ವ್ಯರ್ಥ ಮತ್ತು ನೋಯಿಸುವ ಅಂಶಗಳಿಂದ ದೂರ ಇರುವಂತೆ ಹೇಳುವ ಕುರಾನ್ ಬೋಧನೆಗಳಿಗೆ ವಿರುದ್ಧವಾಗಿಯೇ ಇದೆ.
ಇಂತಹ ಕೃತ್ಯಗಳನ್ನು ಇಸ್ಲಾಮಿಕ್ ಎಂದು ಹೇಳುವುದು ಸೂಕ್ತವಲ್ಲ ಎಂಬುದು ನನ್ನ ಭಾವನೆ, ಆದರೆ, ಇಂತಹ ಕೃತ್ಯಗಳಿಗೆ ಅನುಮೋದನೆ ನೀಡುವ ಕಾನೂನನ್ನು ಮುಸ್ಲಿಮ್ ಕಾನೂನು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಸಮಸ್ಯೆ ಏನಾಗಿದೆ ಎಂದರೆ ಮುಸ್ಲಿಮ್ ಕಾನೂನು ಎಂದು ಹೇಳುತ್ತಿರುವುದು ಬಹುತೇಕ ಕುರಾನ್ ಆಧರಿತವಾಗಿಲ್ಲ, ಅಂದಿನ ಸರ್ಕಾರಗಳಲ್ಲಿದ್ದ ವ್ಯಕ್ತಿಗಳು ನಿರ್ಮಿಸಿರುವಂತಹ ನಿಬಂಧನೆಗಳಾಗಿವೆ ಎಂದು ರಾಜ್ಯಪಾಲರು ಹೇಳಿದ್ದಾರೆ.