ಸಲ್ಮಾನ್ ರಶ್ದಿ ಜೀವಂತ, ಪರಿಸ್ಥಿತಿ ಮೇಲ್ವಿಚಾರಣೆ: ನ್ಯೂಯಾರ್ಕ್ ಗವರ್ನರ್

ವೇದಿಕೆ ಮೇಲೆಯೇ ಚಾಕು ಇರಿತಕ್ಕೊಳಗಾಗಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿದ ನಂತರ ಜೀವಂತವಾಗಿದ್ದಾರೆ. ಪರಿಸ್ಥಿತಿಯನ್ನು ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು  ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್ ಶುಕ್ರವಾರ ತಿಳಿಸಿದ್ದಾರೆ.
ದಾಳಿಯಿಂದ ನೆಲದ ಮೇಲೆ ಬಿದ್ದ ಸಲ್ಮಾನ್ ರಶ್ದಿ
ದಾಳಿಯಿಂದ ನೆಲದ ಮೇಲೆ ಬಿದ್ದ ಸಲ್ಮಾನ್ ರಶ್ದಿ

ನ್ಯೂಯಾರ್ಕ್: ವೇದಿಕೆ ಮೇಲೆಯೇ ಚಾಕು ಇರಿತಕ್ಕೊಳಗಾಗಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿದ ನಂತರ ಜೀವಂತವಾಗಿದ್ದಾರೆ. ಪರಿಸ್ಥಿತಿಯನ್ನು ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು  ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್ ಶುಕ್ರವಾರ ತಿಳಿಸಿದ್ದಾರೆ.

ಸಲ್ಮಾನ್ ರಶ್ದಿಯವರ ‘ದಿ ಸೈಟಾನಿಕ್ ವರ್ಸಸ್’ ಪುಸ್ತಕ ಮುಸ್ಲಿಮರ ಧರ್ಮನಿಂದನೆಯಾಗಿದೆ ಎಂಬ ಕಾರಣದಿಂದ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆ ಎದುರಿಸುತ್ತಿರುವ 75 ವರ್ಷದ ಸಲ್ಮಾನ್ ರಶ್ದಿ ಅವರು ಶುಕ್ರವಾರ ಪಶ್ಚಿಮ ನ್ಯೂಯಾರ್ಕ್ ನ ಚೌಟ ಸಂಸ್ಥೆಯ ವೇದಿಕೆಯಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಅವರಿಗೆ ಕುತ್ತಿಗೆಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಸಲ್ಮಾನ್ ರಶ್ದಿ ರಕ್ತದ ಕೈಗಳೊಂದಿಗೆ ವೇದಿಕೆ ಬಿದ್ದ ನಂತರ ಪ್ರೇಕ್ಷಕರು ದಾಳಿಕೋರನನ್ನು ತಡೆದಿದ್ದಾರೆ. ತದನಂತರ ರಶ್ದಿ ಅವರನ್ನು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. 

ಸಲ್ಮಾನ್ ರಶ್ದಿ ಭಾಷಣ ಮಾಡುವ ಸ್ವಲ್ಪ ಸಮಯದ ಮೊದಲು ವೇದಿಕೆ ಮೇಲೆ ದಾಳಿ ಮಾಡಿರುವುದು ಹೃದಯ ವಿದ್ರಾವಕವಾಗಿದೆ. ಅವರು ಜೀವಂತವಾಗಿದ್ದಾರೆ, ಅವರನ್ನು  ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಹೋಚುಲ್ ಹೇಳಿದ್ದಾರೆ. ರಶ್ದಿ ಅವರು ಸತ್ಯ ಮಾತನಾಡುತ್ತಾ ದಶಕಗಳ ಕಾಲ ಕಳೆದಿದ್ದಾರೆ. ಯಾರೋ ಒಬ್ಬರು ದಾಳಿ ಮಾಡುವುದರಿಂದ ಅವರು ಹೆದರುವುದಿಲ್ಲ ಎಂದಿದ್ದಾರೆ.

ರಶ್ದಿಯವರ ಜೀವ ಉಳಿಸಿದ ನ್ಯೂಯಾರ್ಕ್ ರಾಜ್ಯದ ಪೋಲೀಸ್ ಮತ್ತು ರಾಜ್ಯದ ಪೋಲೀಸ್ ಅಧಿಕಾರಿಯನ್ನು ಅವರು ಶ್ಲಾಘಿಸಿದರು. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ರಶ್ದಿ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಅಗತ್ಯವಿರುವ ಆರೈಕೆಯಲ್ಲಿದ್ದಾರೆ. ಸಂಚುಕೋರನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com