ತ್ರಿವರ್ಣದ ಪೇಟ ಧರಿಸಿ ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ!
ದೆಹಲಿಯ ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸುವ ಸಾಂಪ್ರದಾಯಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಳಿ ಪೇಟವನ್ನು ಧರಿಸಿದ್ದರು.
Published: 15th August 2022 09:22 AM | Last Updated: 15th August 2022 09:22 AM | A+A A-

ಬಿಳಿ ಪೇಟವನ್ನು ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ (ಚಿತ್ರ- ಎಎನ್‌ಐ ಟ್ವಿಟರ್)
ನವದೆಹಲಿ: ದೆಹಲಿಯ ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸುವ ಸಾಂಪ್ರದಾಯಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಳಿ ಪೇಟವನ್ನು ಧರಿಸಿದ್ದರು. ಪೇಟದ ಬಟ್ಟೆ ಹಲವಾರು ಸಣ್ಣ ತ್ರಿವರ್ಣ ಧ್ವಜದ ಮಾದರಿಯನ್ನು ಒಳಗೊಂಡಿತ್ತು. ಬಿಳಿ ಕುರ್ತಾ-ಪೈಜಾಮಾ ಮತ್ತು ನೇವಿ ಬ್ಲೂ ವೇಸ್ಟ್‌ಕೋಟ್ ಧರಿಸಿದ್ದ ಮೋದಿ ಅವರು, ಐತಿಹಾಸಿಕ ಕಟ್ಟಡದಲ್ಲಿ 9ನೇ ಭಾರಿಗೆ ಭಾಷಣ ಮಾಡುವಾಗ ಪೇಟವು ಎದ್ದು ಕಾಣುತ್ತಿತ್ತು.
ಭಾರತವು ಇಂದು 75ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಚರಣೆಯ ನೇತೃತ್ವ ವಹಿಸಿದ್ದಾರೆ. ರಾಷ್ಟ್ರದ ಧ್ವಜಾರೋಹಣ ನೆರವೇರಿಸಿದ ಅವರು, ಕೆಂಪು ಕೋಟೆಯ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು.
ಇದನ್ನೂ ಓದಿ: 76ನೇ ಸ್ವಾತಂತ್ರ್ಯೋತ್ಸವ; ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ
ಈ ವರ್ಷದ ವಿಶೇಷ ಆಚರಣೆ ವೇಳೆ ತ್ರಿವರ್ಣ ಧ್ವಜವು ಹೆಚ್ಚಾಗಿ ಕಾಣಿಸಿಕೊಂಡಿದೆ. ಪ್ರತಿಯೊಂದು ಮನೆಯಲ್ಲೂ ಭಾರತದ ರಾಷ್ಟ್ರ ಧ್ವಜವನ್ನು ಹಾಕುವ ಗುರಿಯೊಂದಿಗೆ ಸರ್ಕಾರವು 'ಹರ್ ಘರ್ ತಿರಂಗ' ಅಭಿಯಾನವನ್ನು ಘೋಷಿಸಿದ್ದರು. ದೇಶದಾದ್ಯಂತ ಹಲವಾರು 'ತಿರಂಗಾ ಯಾತ್ರೆಗಳನ್ನು' ಸಚಿವರು ಮತ್ತು ಬಿಜೆಪಿ ನಾಯಕರು ಕೈಗೊಂಡಿದ್ದಾರೆ.
ಇಂದು ರಾಷ್ಟ್ರ ರಾಜಧಾನಿಯಲ್ಲಿ ಮನೆಗಳು, ಅಪಾರ್ಟ್‌ಮೆಂಟ್ ಸಂಕೀರ್ಣಗಳು, ಕಚೇರಿಗಳು, ವಾಣಿಜ್ಯ ಕಟ್ಟಡಗಳು, ಸಾರ್ವಜನಿಕ ಉದ್ಯಾನಗಳು ಮತ್ತು ವಾಹನಗಳಲ್ಲಿ ಭಾರತದ ಧ್ವಜವನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಹಾರಾಡುತ್ತಿದೆ: ಪ್ರಧಾನಿ ಮೋದಿ
ಮಾರ್ಚ್ 2021 ರಲ್ಲಿ ಪ್ರಾರಂಭವಾದ ಆಜಾದಿ ಕಾ ಅಮೃತ ಮಹೋತ್ಸವ ಎಂಬ ಮೆಗಾ ಕಾರ್ಯಕ್ರಮದ ಮೂಲಕ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯನ್ನು ಗುರುತಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಜನರು ತಮ್ಮ ಮನೆಗಳಲ್ಲಿ ಮೂರು ದಿನಗಳ ಕಾಲ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ.