ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣ: ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳು ಬಿಡುಗಡೆ!
2002 ಗೋಧ್ರಾ ಗಲಭೆ ವೇಳೆ ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.
Published: 16th August 2022 03:16 PM | Last Updated: 16th August 2022 03:16 PM | A+A A-

ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣ
ಮುಂಬೈ: 2002 ಗೋಧ್ರಾ ಗಲಭೆ ವೇಳೆ ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.
11 ಅಪರಾಧಿಗಳು ಗೋಧ್ರಾ ಸಬ್ ಜೈಲಿನಲ್ಲಿದ್ದು ಇಂದು ಬಿಡುಗಡೆ ಮಾಡಲಾಗಿದೆ. ಇನ್ನು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವುದು ಬಿಲ್ಕಿಸ್ ಬಾನು ಕುಟುಂಬವನ್ನು ಆಶ್ಚರ್ಯಕ್ಕೀಡು ಮಾಡಿದೆ.
ಬಿಲ್ಕಿಸ್ ಬಾನು ಅವರ ಪತಿ ಯಾಕೂಬ್ ರಸುಲ್ ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು ಘಟನೆಯ 20 ವರ್ಷಗಳ ನಂತರ ತಾನು, ತನ್ನ ಪತ್ನಿ ಮತ್ತು ಐವರು ಪುತ್ರರು, ಹಿರಿಯ ಈಗ 20 ವರ್ಷ ವಯಸ್ಸಿನವನು ಈಗಲು ಸ್ಥಿರ ವಿಳಾಸವಿಲ್ಲದೆ ಬದುಕುತ್ತಿದೆ ಎಂದಿದ್ದಾರೆ.
ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಕುರಿತು ಮಾಹಿತಿ ನೀಡಿರುವ ಗುಜರಾತ್ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಅವರು, ಅಪರಾಧಿಗಳು ಜೈಲಿನಲ್ಲಿ 14 ವರ್ಷ ಪೂರ್ಣಗೊಳಿಸಿದ್ದಾರೆ. ಅಪರಾಧಿಗಳ ವಯಸ್ಸು, ಜೈಲಿನಲ್ಲಿನ ಅವರ ನಡವಳಿಕೆ ಮತ್ತು ಮುಂತಾದ ಇತರ ಅಂಶಗಳನ್ನು ಪರಿಗಣಿಸಿ ಕ್ಷಮಾಪಣೆಗಾಗಿ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದರು.
ಗುಜರಾತ್ ನ ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲೂಕಿನಲ್ಲಿ 2002 ಮಾರ್ಚ್ 3ರಂದು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೆ 14 ಮಂದಿಯನ್ನು ಗುಂಪೊಂದು ಹೊಡೆದು ಕೊಂದಿತ್ತು.