ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ- ಪ್ರಧಾನಿ ಮೋದಿ

ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಶುದ್ದ ಕುಡಿಯುವ ನೀರು ಪೂರೈಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಪಣಜಿ: ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಶುದ್ದ ಕುಡಿಯುವ ನೀರು ಪೂರೈಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗೋವಾದಲ್ಲಿ ನಡೆದ 'ಹರ್ ಘರ್ ಜಲ ಉತ್ಸವ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಂದು ಕುಟುಂಬಕ್ಕೂ ನೀರು ಪೂರೈಸುವ ಸರ್ಕಾರದ ಅಭಿಯಾನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಎಲ್ಲರ ಪ್ರಯತ್ನಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ದಾದ್ರಾ ನಗರ್ ಹವೇಲಿ ಮತ್ತು ಡಾಮನ್, ಡಿಯೂ ಕೂಡಾ ಹರ್ ಘರ್ ಜಲ ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿವೆ ಎಂದರು.

ಈ ಸಾಧನೆಗೆ ಕಾರಣಿಭೂತರಾದ ಪ್ರತಿಯೊಬ್ಬರನ್ನು ವಿಶೇಷವಾಗಿ ಮಹಿಳೆಯರು ಮತ್ತು ಸಹೋದರಿಯರನ್ನು ಅಭಿನಂದಿಸುವುದಾಗಿ ಪ್ರಧಾನಿ ಹೇಳಿದರು. ಗೋವಾ  ಹರ್ ಘರ್ ಜಲ ಪ್ರಮಾಣೀಕೃತ ಮೊದಲ ರಾಜ್ಯವಾಗಿದೆ. ಈ ಸಂಬಂಧ ದೇಶ ಮಹತ್ವದ ಮೈಲುಗಲ್ಲು ಸಾಧಿಸಿದೆ. ಇದೀಗ ಬೇರೆ ಬೇರೆ ರಾಜ್ಯಗಳ 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಬಯಲು ಮುಕ್ತ ಪ್ರದೇಶಗಳಾಗಿವೆ. ಮೂರನೇ ಸಾಧನೆ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದ್ದಾಗಿದೆ. ಎಲ್ಲಾ ದೇಶ ವಾಸಿಗಳ ಪ್ರಯತ್ನದ ಫಲವಾಗಿದೆ ದೇಶ ಬಯಲು ಮುಕ್ತ ಪ್ರದೇಶವಾಗಿದೆ ಎಂದರು.

ದೇಶ ನಿರ್ಮಾಣದ ಹಾದಿಯನ್ನು ನಾವೆಲ್ಲ ಆಯ್ಕೆ ಮಾಡಬೇಕಾಗಿದೆ. ಇದರಿಂದಾಗಿ ದೇಶದಲ್ಲಿನ ಪ್ರಸ್ತುತ ಹಾಗೂ ಭವಿಷ್ಯದ ಸವಾಲುಗಳನ್ನು  ಪರಿಹರಿಸಬಹುದಾಗಿದೆ. ದೇಶದ ಬಗ್ಗೆ ಕಾಳಜಿ ಇಲ್ಲದವರು ದೇಶದ ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಮಾತನಾಡಬಾರದು. ಅಂತವರು ನೀರಿಗಾಗಿ ದೊಡ್ಡ ಭರವಸೆ ನೀಡುತ್ತಾರೆ ಆದರೆ, ಆ ಕೆಲಸವನ್ನು ದೂಡ್ಡ ಮಟ್ಟದಲ್ಲಿ ಮಾಡುವುದಿಲ್ಲ, ಇದೀಗ ದೇಶದಲ್ಲಿನ ಜೌಗು ಪ್ರದೇಶಗಳ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಈ ಪೈಕಿ 50 ಪ್ರದೇಶಗಳು ಕಳೆದ 8 ವರ್ಷಗಳಿಂದಾಚೆಗೆ ಸೇರಿವೆ. ನೀರಿನ ಸುರಕ್ಷತೆಗಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೋದಿ ತಿಳಿಸಿದರು. 

ಕೇವಲ ಮೂರು ವರ್ಷಗಳಲ್ಲಿ ಜಲ ಜೀವನ್ ಮಿಷನ್ ಅಭಿಯಾನದಡಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದು ಸಾಮಾನ್ಯ ಸಾಧನೆಯಲ್ಲ, ಸ್ವತಂತ್ರಗೊಂಡ 7 ದಶಕಗಳಲ್ಲಿ ದೇಶದಲ್ಲಿ ಕೇವಲ 3 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು ಎಂದು ಪ್ರಧಾನ ಮಂತ್ರಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com