ರೈಲಿನ ಮುಂಭಾಗ ತಳ್ಳಿ ಮಕ್ಕಳೊಂದಿಗೆ ಪರಾರಿಯಾದ ಪತಿ
ರೈಲಿನ ಮುಂಭಾಗ ತಳ್ಳಿ ಮಕ್ಕಳೊಂದಿಗೆ ಪರಾರಿಯಾದ ಪತಿ

ನಡತೆ ಬಗ್ಗೆ ಅನುಮಾನ: ಚಲಿಸುತ್ತಿದ್ದ ರೈಲಿನ ಮುಂಭಾಗ ಪತ್ನಿ ತಳ್ಳಿ ಕೊಲೆಗೈದ ಪತಿಯ ಬಂಧನ

ಚಲಿಸುತ್ತಿದ್ದ ರೈಲೊಂದರ ಮುಂಭಾಗ ಪತ್ನಿಯನ್ನು ತಳ್ಳಿ ಕೊಲೆಗೈದ ಆರೋಪದ ಮೇರೆಗೆ ವ್ಯಕ್ತಿಯೊರ್ವನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಾಸೈ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Published on

ಥಾಣೆ: ಚಲಿಸುತ್ತಿದ್ದ ರೈಲೊಂದರ ಮುಂಭಾಗ ಪತ್ನಿಯನ್ನು ತಳ್ಳಿ ಕೊಲೆಗೈದ ಆರೋಪದ ಮೇರೆಗೆ ವ್ಯಕ್ತಿಯೊರ್ವನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಾಸೈ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ರೈಲ್ವೆ ಫ್ಲಾಟ್ ಪಾರಂ ಅಂಚಿಗೆ ತನ್ನ ಹೆಂಡತಿಯನ್ನು ಎಳೆದುಕೊಂಡು ಬರುವ ವ್ಯಕ್ತಿಯೊಬ್ಬ, ಔಧಾ ಎಕ್ಸ್ ಪ್ರೆಸ್ ರೈಲು ಬರುತ್ತಿದ್ದ ಹಳಿಯ ಮೇಲೆ ತಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ತದನಂತರ ಛಿದ್ರಗೊಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಘಟನೆ ನಂತರ ತನ್ನ ಇಬ್ಬರು ಮಕ್ಕಳೊಂದಿಗೆ ಪಾಪಿ ಪತಿ ಪರಾರಿಯಾಗುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಸೋಮವಾರ ತಡರಾತ್ರಿ ಥಾಣೆಯ ಬಿವಾಂಡಿ ಪಟ್ಟಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಪತಿಯ ಸ್ನೇಹಿತನೊಂದಿಗೆ ಎರಡು ದಿನ ಮಹಿಳೆ ಪರಾರಿಯಾಗಿದ್ದಳು,ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ನಡತೆ ಬಗ್ಗೆ ಪತಿಗೆ ಅನುಮಾನವಿತ್ತು. ಇದೇ ಈ ಘಟನೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com