ಬಿಜೆಪಿ ನಾಯಕಿ ಸೋನಾಲಿ ಫೋಗಟ್ ರನ್ನು ಗೋವಾದಲ್ಲಿ ಹತ್ಯೆ ಮಾಡಲಾಗಿದೆ: ಸಹೋದರ ಆರೋಪ

ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರು ಸಹೋದ್ಯೋಗಿಗಳೊಂದಿಗೆ ಗೋವಾಕ್ಕೆ ತೆರಳಿದಾಗ ಮಂಗಳವಾರ ಬೆಳಗ್ಗೆ ಗೋವಾದಲ್ಲಿ ನಿಧನರಾಗಿದ್ದು, ಹೃದಯಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು.
ಸೋನಾಲಿ ಪೋಗಟ್
ಸೋನಾಲಿ ಪೋಗಟ್
Updated on

ಪಣಜಿ: ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರು ಸಹೋದ್ಯೋಗಿಗಳೊಂದಿಗೆ ಗೋವಾಕ್ಕೆ ತೆರಳಿದಾಗ ಮಂಗಳವಾರ ಬೆಳಗ್ಗೆ ಗೋವಾದಲ್ಲಿ ನಿಧನರಾಗಿದ್ದು, ಹೃದಯಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದು ಸಹಜ ಸಾವಲ್ಲ, ಕೊಲೆ ಎಂದು ಸೋನಾಲಿ ಫೋಗಟ್ ಸಹೋದರ ರಿಂಕು ಧಾಕಾ ಅವರು ಆರೋಪಿಸಿದ್ದಾರೆ.

ಸೋನಾಲಿ ಫೋಗಟ್ ಅವರ ಇಬ್ಬರು ಸಹಚರರು ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸೋನಾಲಿ ಅವರು ಸಾಯುವ ಸ್ವಲ್ಪ ಸಮಯದ ಮೊದಲು, ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದರು. ಈ ಸಮಯದಲ್ಲಿ ಅವರು ತೀವ್ರ ಗೊಂದಲಕ್ಕೊಳಗಾಗಿದ್ದರು ಮತ್ತು ತನ್ನ ಇಬ್ಬರು ಸಹೋದ್ಯೋಗಿಗಳ ವಿರುದ್ಧ ದೂರಿದ್ದಳು ಎಂದು ಅವರ ಸಹೋದರ ರಿಂಕು ಢಾಕಾ ಹೇಳಿದ್ದಾರೆ.

ಸೋನಾಲಿ ಸಾವಿನ ನಂತರ ಹರಿಯಾಣದಲ್ಲಿರುವ ಅವರ ಫಾರ್ಮ್‌ಹೌಸ್‌ನಿಂದ ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‌ಟಾಪ್ ಮತ್ತು ಇತರ ಪ್ರಮುಖ ವಸ್ತುಗಳು ನಾಪತ್ತೆಯಾಗಿವೆ ಎಂದು ರಿಂಕು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಅಂಜುನ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋನಾಲ್ ಫೋಗಟ್ 2016 ರಲ್ಲಿ ಧಾರಾವಾಹಿ ಏಕ್ ಮಾ ಜೋ ಲಾಖೋಂ ಕೆ ಲಿಯೇ ಬಾನಿ ಅಮ್ಮಾ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ ಅವರು ಹರ್ಯಾನ್ವಿ ಚಲನಚಿತ್ರ ಛೋರಿಯನ್ ಛೋರೋನ್ ಎಸ್ ಕಾಮ್ ನಹಿ ಹೋತಿಯಲ್ಲಿ ಕಾಣಿಸಿಕೊಂಡರು. ಅವರು ಹಲವಾರು ಪಂಜಾಬಿ ಮತ್ತು ಹರ್ಯಾನ್ವಿ ಸಂಗೀತ ವೀಡಿಯೊಗಳ ಭಾಗವಾಗಿದ್ದಾರೆ. ಕೊನೆಯದಾಗಿ ದಿ ಸ್ಟೋರಿ ಆಫ್ ಬದ್ಮಾಶ್‌ಗಢ್ (2019) ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.

ಡಿಸೆಂಬರ್ 2016ರಲ್ಲಿ, ಅವರು ತಮ್ಮ ಪತಿ ಸಂಜಯ್ ಫೋಗಟ್ ಅವರನ್ನು ಕಳೆದುಕೊಂಡಿದ್ದರು. ಇವರಿಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com