ದೇಶಕ್ಕಾಗಿ ಖಾದಿ ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್: ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರ ಮಾತು ಮತ್ತು ನಡೆ ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಖಾದಿಯು ಸ್ವಾತಂತ್ರ್ಯಾನಂತರ ನಿರ್ಲಕ್ಷಕ್ಕೊಳಗಾಗಿದೆ ಎಂದಿದ್ದ ಪ್ರಧಾನಿ ವಿರುದ್ಧ ಭಾನುವಾರ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾತು ಮತ್ತು ನಡೆ ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಖಾದಿಯು ಸ್ವಾತಂತ್ರ್ಯಾನಂತರ ನಿರ್ಲಕ್ಷಕ್ಕೊಳಗಾಗಿದೆ ಎಂದಿದ್ದ ಪ್ರಧಾನಿ ವಿರುದ್ಧ ಭಾನುವಾರ ಕಿಡಿಕಾರಿದ್ದಾರೆ.

ಖಾದಿಯು ಸ್ವಾತಂತ್ರ್ಯದ ನಂತರ ನಿರ್ಲಕ್ಷಕ್ಕೊಳಗಾಗಿದೆ. ಆದರೆ, ಅದು ಇದೀಗ ಆತ್ಮನಿರ್ಭರ ಭಾರತದ ಸ್ಫೂರ್ತಿಯ ಮೂಲವಾಗಬಲ್ಲದು. ಸ್ವಾತಂತ್ರ್ಯಾನಂತರ ಖಾದಿಯನ್ನು ಕಡೆಗಣಿಸಲಾಗಿದೆ. ಹೀಗಾಗಿ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾದಿ ಎಳೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾದಂತೆ ಇದೀಗ ದೇಶದ ಬೆಳವಣಿಗೆ ಮತ್ತು ಆತ್ಮನಿರ್ಭರ ಭಾರತಕ್ಕೂ ಸ್ಫೂರ್ತಿಯ ಸೆಲೆಯಾಗಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದರು.

ಈ ಕುರಿತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, 'ಖಾದಿ ಫಾರ್ ನೇಷನ್' ಬಟ್, ಚೈನೀಸ್ ಪಾಲಿಸ್ಟರ್ ಫಾರ್ ರಾಷ್ಟ್ರಧ್ವಜ! (ದೇಶಕ್ಕೆ ಖಾದಿ ಆದರೆ, ರಾಷ್ಟ್ರಧ್ವಜಕ್ಕೆ ಚೀನಾದ ಪಾಲಿಸ್ಟರ್) ಎಂದಿರುವ ಅವರು, ಎಂದಿನಂತೆ ಪ್ರಧಾನಿಯವರ ಮಾತುಗಳು ಮತ್ತು ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ; ಎಂದು ದೂರಿದ್ದಾರೆ.

ರಾಷ್ಟ್ರಧ್ವಜವು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಲ್ಪಟ್ಟ ಹತ್ತಿ / ಪಾಲಿಸ್ಟರ್ / ಉಣ್ಣೆ / ರೇಷ್ಮೆ ಹಾಗೂ ಖಾದಿಯಿಂದ ಮಾತ್ರ ಮಾಡಬಹುದು ಎಂದು ತಿಳಿಸುವ ರಾಷ್ಟ್ರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವ ಕೇಂದ್ರವು, ಪಾಲಿಸ್ಟರ್‌ ಧ್ವಜಗಳಿಗೆ ಅನುಮತಿ ನೀಡಿರುವ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ. ಈ ಮೊದಲು, ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ.

ಅಹಮದಾಬಾದ್‌ನ ಸಬರಮತಿ ನದಿಯ ಮುಂಭಾಗದಲ್ಲಿ ನಡೆದ 'ಖಾದಿ ಉತ್ಸವ' (ಖಾದಿ ಉತ್ಸವ) ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾಭಿಮಾನದ ಸಂಕೇತವಾದ ಖಾದಿಯನ್ನು ಸ್ವಾತಂತ್ರ್ಯ ನಂತರ ಕೀಳು ಉತ್ಪನ್ನವೆಂದು ಪರಿಗಣಿಸಲಾಗಿದೆ ಎಂದು ದೂರಿದ ಅವರು, ಮುಂಬರುವ ಹಬ್ಬ ಹರಿದಿನಗಳಲ್ಲಿ ಖಾದಿ ಗ್ರಾಮೋದ್ಯೋಗದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡುವಂತೆ ಜನರಿಗೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com