ವಾಣಿಜ್ಯ ನಗರಿ ಮುಂಬೈನಲ್ಲಿ ಇಂದಿನಿಂದ ಜನವರಿ 2 ರವರೆಗೂ ಕರ್ಫ್ಯೂ ಜಾರಿಗೆ
ವಾಣಿಜ್ಯ ನಗರಿ ಮುಂಬೈನಲ್ಲಿ ಇಂದಿನಿಂದ ಜನವರಿ 2 ರವರೆಗೂ ಕರ್ಫ್ಯೂವನ್ನು ಪೊಲೀಸರು ಘೋಷಿಸಿದ್ದಾರೆ. ಸಾರ್ವಜನಿಕ ಕಾನೂನು ಸುವ್ಯವಸ್ಥೆಯಲ್ಲಿನ ತೊಡಕನ್ನು ತಡೆಗಟ್ಟುವುದು ಮತ್ತು ಶಾಂತಿಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Published: 02nd December 2022 12:59 PM | Last Updated: 02nd December 2022 01:44 PM | A+A A-

ಮುಂಬೈ ಪೊಲೀಸರ ಸಾಂದರ್ಭಿಕ ಚಿತ್ರ
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಇಂದಿನಿಂದ ಜನವರಿ 2 ರವರೆಗೂ ಕರ್ಫ್ಯೂವನ್ನು ಪೊಲೀಸರು ಘೋಷಿಸಿದ್ದಾರೆ. ಸಾರ್ವಜನಿಕ ಕಾನೂನು ಸುವ್ಯವಸ್ಥೆಯಲ್ಲಿನ ತೊಡಕನ್ನು ತಡೆಗಟ್ಟುವುದು ಮತ್ತು ಶಾಂತಿಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಅವಧಿಯಲ್ಲಿ ನಗರಾದಾದ್ಯಂತ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರದಂತೆ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಘೋಷಣೆ, ಪ್ರದರ್ಶನಗಳನ್ನು ಕೂಡಾ ನಿಷೇಧಿಸಲಾಗಿದೆ. ಡಿಸೆಂಬರ್ 4 ರಿಂದ ಜನವರಿ 2 ರವರೆಗೆ ಗರಿಷ್ಠ ನಗರದಲ್ಲಿ ಶಸ್ತ್ರಾಸ್ತ್ರ ನಿಷೇಧವನ್ನು ಸಹ ಜಾರಿಗೊಳಿಸಲಾಗಿದೆ.
ವಿವಾಹ ಮಹೋತ್ಸವ, ಅಂತ್ಯಕ್ರಿಯೆ, ಕಂಪನಿಗಳು, ಕ್ಲಬ್ ಗಳು, ಸಹಕಾರ ಸಂಘಗಳು ಮತ್ತಿತರ ಅಸೋಸಿಯೇಷನ್ ಗಳ ದೊಡ್ಡ ಮಟ್ಟದ ಸಭೆಗಳನ್ನು ಕೂಡಾ ನಿರ್ಬಂಧಿಸಲಾಗಿದೆ. ಸರ್ಕಾರಿ ಕಚೇರಿಗಳು, ಕೋರ್ಟ್ ಗಳು ಮತ್ತು ಸ್ಥಳೀಯ ಆಡಳಿತಗಳ ಕಾರ್ಯಕ್ರಮಗಳಲ್ಲೂ ಐದಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ.
ಶಾಲಾ-ಕಾಲೇಜುಗಳು ಮತ್ತಿತರ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮತ್ತಿತರ ಸಾಮಾನ್ಯ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರುವಂತಿಲ್ಲ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.