ಉತ್ತರ ಪ್ರದೇಶ ಉಪ ಚುನಾವಣೆ: ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅಜಂ ಖಾನ್ ವಿರುದ್ಧ ಕೇಸ್ ದಾಖಲು

ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ, ಶಾಸಕ ಸ್ಥಾನ ಕಳೆದುಕೊಂಡಿರುವ ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕ ಅಜಂ ಖಾನ್ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ...
ಸಮಾಜವಾದಿ ಪಕ್ಷದ ನಾಯಕ ಅಜಂಖಾನ್
ಸಮಾಜವಾದಿ ಪಕ್ಷದ ನಾಯಕ ಅಜಂಖಾನ್

ರಾಮ್‌ಪುರ: ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ, ಶಾಸಕ ಸ್ಥಾನ ಕಳೆದುಕೊಂಡಿರುವ ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕ ಅಜಂ ಖಾನ್ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ಶೆಹನಾಜ್ ಬೇಗಂ ಎಂಬ ಮಹಿಳೆ ಅಜಂ ಖಾನ್ ಅವರ ವಿರುದ್ಧ ದೂರು ನೀಡಿದ್ದು, ಶುತಾ ಖಾನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಸ್ ಪಿ ನಾಯಕ ಮಾಡಿದ ಭಾಷಣದ ಆಡಿಯೋ ಫೈಲ್ ಅನ್ನು ಸಹ ಪೊಲೀಸರಿಗೆ ನೀಡಿದ್ದಾರೆ.

ದೂರುದಾರರ ಪ್ರಕಾರ, ಅಜಮ್ ಖಾನ್ ಸಭೆಯಲ್ಲಿ, "ನಾನು ಎಸ್‌ಪಿ ಸರ್ಕಾರದಲ್ಲಿ ನಾಲ್ಕು ಅವಧಿಗೆ ಸಚಿವನಾಗಿದ್ದೆ. ಆದರೆ ಈಗೀನ ಬಿಜೆಪಿ ಸರ್ಕಾರದ ರೀತಿ ಅಧಿಕಾರ ನಡೆಸಿದ್ದರೆ ಆಗ ಹುಟ್ಟುವ ಮಕ್ಕಳು ತಾವು ಹುಟ್ಟಲು ಅಜಂ ಖಾನ್ ಅನುಮತಿ ನೀಡಿದ್ದಾರಾ ಎಂದು ತಮ್ಮ ತಾಯಿಯನ್ನು ಕೇಳುತ್ತಿದ್ದರು" ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯ ದೂರಿನ ಆಧಾರದ ಮೇಲೆ, ಗಂಜ್ ಪೊಲೀಸರು ಅಜಂ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 394 (ಬಿ), 354 ಎ, 353 (ಎ), 504, 505 (2), 509 ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. .

ರಾಮ್‌ಪುರ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿ ಅಸೀಂ ರಾಜಾ ಅವರ ಪರ ಪ್ರಚಾರ ಮಾಡುವಾಗ ಅಜಂ ಖಾನ್ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com