'ಮಿಷನ್ ಆತ್ಮನಿರ್ಭರ್': 2047ರ ವೇಳೆಗೆ ನೌಕಾಪಡೆ ಸ್ವಾವಲಂಬಿಯಾಗುವ ಗುರಿ ಹೊಂದಿದೆ - ಅಡ್ಮಿರಲ್ ಕುಮಾರ್

ಭಾರತೀಯ ನೌಕಾಪಡೆಯು 2047ರ ವೇಳೆಗೆ 'ಆತ್ಮನಿರ್ಭರ್'(ಸ್ವಾವಲಂಬಿ)ವಾಗುವ ಗುರಿ ಹೊಂದಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಭಾರತೀಯ ನೌಕಾಪಡೆ ಮುಖ್ಯಸ್ಥ  ಅಡ್ಮಿರಲ್ ಹರಿಕುಮಾರ್
ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಹರಿಕುಮಾರ್

ನವದೆಹಲಿ: ಭಾರತೀಯ ನೌಕಾಪಡೆಯು 2047ರ ವೇಳೆಗೆ 'ಆತ್ಮನಿರ್ಭರ್'(ಸ್ವಾವಲಂಬಿ)ವಾಗುವ ಗುರಿ ಹೊಂದಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಶನಿವಾರ ಹೇಳಿದ್ದಾರೆ.

ನೌಕಾಪಡೆ ದಿನದ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಡ್ಮಿರಲ್ ಕುಮಾರ್, ಸ್ವದೇಶಿ ವಿಮಾನವಾಹಕ ನೌಕೆ(ಐಎಸಿ)IIಕ್ಕೆ ಹೋಗಬೇಕೆ ಅಥವಾ IAC I ಗಾಗಿ ಪುನರಾವರ್ತಿತ ಆದೇಶಕ್ಕೆ ಆದ್ಯತೆ ನೀಡಬೇಕೆ ಎಂದು ನೌಕಾಪಡೆ ಆಲೋಚಿಸುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಆತ್ಮನಿರ್ಭರ್ ಭಾರತದ ಕುರಿತು ನಮಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ನೌಕಾಪಡೆಯು 2047ರ ವೇಳೆಗೆ 'ಆತ್ಮನಿರ್ಭರತೆ' ಗುರಿ ಸಾಧಿಸುವುದಾಗಿ ನಾವು ಭರವಸೆ ನೀಡಿದ್ದು, ಈ ದಿಸೆಯಲ್ಲಿ ಕಳೆದ ಒಂದು ವರ್ಷದಿಂದ ಹಲವು ಕೆಲಸಗಳನ್ನು ಮಾಡಿದ್ದೇವೆ ಎಂದರು.

ಅಮೆರಿಕದ ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟು 30 ಶಸ್ತ್ರಸಜ್ಜಿತ ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್ ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿವಿಧ ಮಿಲಿಟರಿ ಮತ್ತು ಸಂಶೋಧನಾ ಹಡಗುಗಳ ಚಲನವಲನಗಳ ಮೇಲೆ ನೌಕಾಪಡೆಯು ಬಲವಾದ ನಿಗಾ ವಹಿಸಿದೆ ಎಂದು ನೌಕಾಪಡೆ ಮುಖ್ಯಸ್ಥರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com