ಅದು ಚೀನಾಗೆ ಸಂಬಂಧಿಸಿದ್ದಲ್ಲ: ಭಾರತದೊಂದಿಗೆ ಸೇನಾ ಡ್ರಿಲ್ ಬಗ್ಗೆ ಆಕ್ಷೇಪಕ್ಕೆ ಅಮೇರಿಕಾ ತಪರಾಕಿ

ಗಡಿ ರಾಜ್ಯ ಉತ್ತರಾಖಂಡ್ ನಲ್ಲಿ ಭಾರತೀಯ ಸೇನೆಯೊಂದಿಗೆ ಸೇನಾ ಡ್ರಿಲ್ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಅಮೇರಿಕಾ ಛಾಟಿ ಬೀಸಿದೆ. 
ಅಮೇರಿಕ-ಭಾರತದ ಜಂಟಿ ಸಮರಾಭ್ಯಾಸ
ಅಮೇರಿಕ-ಭಾರತದ ಜಂಟಿ ಸಮರಾಭ್ಯಾಸ

ನವದೆಹಲಿ: ಗಡಿ ರಾಜ್ಯ ಉತ್ತರಾಖಂಡ್ ನಲ್ಲಿ ಭಾರತೀಯ ಸೇನೆಯೊಂದಿಗೆ ಸೇನಾ ಡ್ರಿಲ್ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಅಮೇರಿಕಾ ಛಾಟಿ ಬೀಸಿದೆ. 

ಅಮೇರಿಕಾದ ಸರ್ಕಾರದ ಪ್ರತಿನಿಧಿಯಾಗಿರುವ ಎಲಿಜಬೆತ್ ಜೋನ್ಸ್ ಚೀನಾ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಭಾರತದೊಂದಿಗೆ ಅಮೇರಿಕಾ ಸೇನಾ ಡ್ರಿಲ್ ನಡೆಸಿರುವುದು ಚೀನಾಗೆ ಸಂಬಂಧಪಡದ ವಿಷಯ ಎಂದು ಹೇಳಿದ್ದಾರೆ.

ಗಡಿಯಿಂದ 100 ಕಿ.ಮೀ ದೂರದಲ್ಲಿ ಸೇನಾ ತಾಲೀಮು ನಡೆದಿರುವುದು ದ್ವಿ ಗಡಿ ಒಪ್ಪಂದದ ಆಶಯಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ಇಲಾಖೆ, ಭಾರತ ತಾನು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತದೆಯೋ ಆ ದೇಶದೊಂದಿಗೆ ಸೇನಾ ಡ್ರಿಲ್ ನಡೆಸುತ್ತದೆ, ಅದನ್ನು ತಡೆಯುವ ಅಧಿಕಾರವನ್ನು ಭಾರತ ಮೂರನೇಯವರಿಗೆ ನೀಡುವುದಿಲ್ಲ ಎಂದು ಹೇಳಿತ್ತು.

ಸಚಿವಾಲಯದ ವಕ್ತಾರರಾಗಿರುವ ಅರೀಂದಂ ಬಾಗ್ಚಿ ಮಾತನಾಡಿ, ಜಂಟಿ ತಾಲೀಮು ಚೀನಾದೊಂದಿಗಿನ 1993 ಹಾಗೂ 1996 ರ ಒಪ್ಪಂದಕ್ಕೆ ಸಂಬಂಧಪಟ್ಟಿದ್ದಲ್ಲ.  ಚೀನಾ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಉಲ್ಲಂಘನೆ ಮಾಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದರು.

ಉತ್ತರಾಖಂಡ್ ನಲ್ಲಿ ಭಾರತ-ಅಮೇರಿಕಾದ 18 ನೇ ಜಂಟಿ ಸೇನಾ ತಾಲೀಮು ಯುದ್ಧ್ ಅಭ್ಯಾಸ್ ನಡೆಯುತ್ತಿದೆ. ಇದು ಎಲ್ಎಸಿಯಿಂದ 100 ಕಿ.ಮೀ ದೂರದಲ್ಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com