ಮಧ್ಯ ಪ್ರದೇಶದಲ್ಲಿ ಕೊನೆಯ ದಿನದ ಯಾತ್ರೆ ಆರಂಭ, ಸಂಜೆ ರಾಜಸ್ಥಾನಕ್ಕೆ ಪ್ರವೇಶಿಸಲಿದೆ ಭಾರತ್ ಜೋಡೋ ಯಾತ್ರೆ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಕೊನೆಯ ದಿನವಾದ ಅಗರ್ ಮಾಲ್ವಾ ಜಿಲ್ಲೆಯಿಂದ ಭಾನುವಾರ ಪುನರಾರಂಭಗೊಂಡಿದ್ದು, ಸಂಜೆ ರಾಜಸ್ಥಾನವನ್ನು ಪ್ರವೇಶಿಸಲಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಅಗರ್ ಮಾಲ್ವಾ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಕೊನೆಯ ದಿನವಾದ ಅಗರ್ ಮಾಲ್ವಾ ಜಿಲ್ಲೆಯಿಂದ ಭಾನುವಾರ ಪುನರಾರಂಭಗೊಂಡಿದ್ದು, ಸಂಜೆ ರಾಜಸ್ಥಾನವನ್ನು ಪ್ರವೇಶಿಸಲಿದೆ.

ಬೆಳಿಗ್ಗೆ 6 ಗಂಟೆಗೆ ಲಾಲಾ ಖೇಡಿ ಗ್ರಾಮದಿಂದ ಯಾತ್ರೆಯು ತನ್ನ ಮುಂದಿನ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಖ್ಯಾತ ಜಾನಪದ ಗಾಯಕ ಪ್ರಹ್ಲಾದ್ ತಿಪನ್ಯಾ ಮತ್ತು ಸಂಗಡಿಗರು ಹಾಗೂ ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ಅವರು ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂತು.

ಛಿಂದವಾರದ ಕಾಂಗ್ರೆಸ್ ಲೋಕಸಭಾ ಸಂಸದ ನಕುಲ್ ನಾಥ್, ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಮತ್ತು ಕಾಂಗ್ರೆಸ್ ಶಾಸಕ ಪ್ರಿಯವ್ರತ್ ಸಿಂಗ್ ಕೂಡ ರಾಹುಲ್ ಜೊತೆಯಲ್ಲಿದ್ದರು.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಇಂದು 88ನೇ ದಿನಕ್ಕೆ ಕಾಲಿಟ್ಟಿದೆ.

ಯಾತ್ರೆಯು ಅಗರ್ ಮಾಲ್ವಾ ಜಿಲ್ಲೆಯ ಸೋಯತ್‌ಕಲನ್ ತೆಹಸಿಲ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಬೆಳಗಿನ ವಿರಾಮಕ್ಕಾಗಿ ನಿಲ್ಲುತ್ತದೆ. ಮತ್ತೆ ಅಗರ್ ಮಾಲ್ವಾದ ಪಿಪ್ಲೇಶ್ವರ ಮಹಾದೇವ ಮಂದಿರದಿಂದ ಮಧ್ಯಾಹ್ನ ಪುನರಾರಂಭಗೊಂಡು ಸಂಜೆ ರಾಜಸ್ಥಾನ ತಲುಪಲಿದೆ.

ರಾಜ್ಯದ ಚಾನ್ವಿಲಿ ಗ್ರಾಮದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸದಸ್ಯರು ರಾಜಸ್ಥಾನದ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಿದ್ದಾರೆ. ಗಾಂಧಿ ನೇತೃತ್ವದ ಮೆರವಣಿಗೆ ನವೆಂಬರ್ 23 ರಂದು ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯನ್ನು ಪ್ರವೇಶಿಸಿತ್ತು.

ರಾಜಸ್ಥಾನ ಪ್ರವೇಶಿಸುವ ಮುನ್ನ ಮಧ್ಯಪ್ರದೇಶದಲ್ಲಿ 380 ಕಿ.ಮೀ ಕ್ರಮಿಸಲು ನಿರ್ಧರಿಸಲಾಗಿದೆ. ಯಾತ್ರೆಯು ಈವರೆಗೆ ಬುರ್ಹಾನ್‌ಪುರ, ಖಾಂಡ್ವಾ, ಖಾರ್ಗೋನ್, ಇಂದೋರ್ ಮತ್ತು ಉಜ್ಜಯಿನಿ ಜಿಲ್ಲೆಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com